ನವದೆಹಲಿ:ರಾಷ್ಟ್ರ ರಾಜಧಾನಿಯಲ್ಲಿ ಕರೋನವೈರಸ್ ಹರಡುವಿಕೆಯನ್ನು ನಿರ್ಣಯಿಸುವ ಪ್ರಯತ್ನದಲ್ಲಿ ಸರ್ಕಾರ ಶನಿವಾರದಿಂದ ರಾಷ್ಟ್ರ ರಾಜಧಾನಿಯಲ್ಲಿ ಸೆರೋಲಾಜಿಕಲ್ ಸಮೀಕ್ಷೆ ನಡೆಸಲಿದೆ ಎಂದು ಗೃಹ ವ್ಯವಹಾರಗಳ ಸಚಿವಾಲಯ ತಿಳಿಸಿದೆ.ಸೆರೋಲಾಜಿಕಲ್ ಸಮೀಕ್ಷೆಯು ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್ -19 ಕುರಿತು ಸಮಗ್ರ ವಿಶ್ಲೇಷಣೆಯನ್ನು ಕೈಗೊಳ್ಳಲು ಹಾಗೂ ಆನಂತರ ನಗರದಲ್ಲಿ ರೋಗದ ವಿರುದ್ಧ ವ್ಯಾಪಕ ಕಾರ್ಯತಂತ್ರವನ್ನು ಸಿದ್ಧಪಡಿಸಲು ಅಧಿಕಾರಿಗಳಿಗೆ ಸಹಾಯವಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ:ಮಾದಪ್ಪನ ಹುಂಡಿಯಲ್ಲಿ ಯುಎಸ್​ ಡಾಲರ್​: ಲಾಕ್​ಡೌನ್​ ಹೊಡೆತದಿಂದ ಆದಾಯದಲ್ಲಿ ಭಾರಿ ಇಳಿಕೆ
ಈ ಸಮೀಕ್ಷೆಯು ದೆಹಲಿಯಲ್ಲಿ ಕೋವಿಡ್ -19 ನಿಭಾಯಿಸಲು ಕೇಂದ್ರ ಸರ್ಕಾರ ಸಿದ್ಧಪಡಿಸಿದ ಹೊಸ ಯೋಜನೆಯ ಒಂದು ಭಾಗವಾಗಿದೆ. “ಗೃಹ ಸಚಿವ ಅಮಿತ್‌ಶಾ ಅವರ ನಿರ್ದೇಶನದಂತೆ, ದೆಹಲಿಯಲ್ಲಿ ಸೆರಾಲಜಿಕಲ್ ಸಮೀಕ್ಷೆ ಕುರಿತು ಚರ್ಚೆ ನಡೆದಿದೆ. ಎನ್​ಸಿಡಿಸಿ ಮತ್ತು ದೆಹಲಿ ಸರ್ಕಾರ ಜಂಟಿಯಾಗಿ ಈ ಸಮೀಕ್ಷೆ ಕೈಗೊಳ್ಳಲಿದ್ದು, ಜೂನ್ 27 ರಂದು ಆರಂಭವಾಗುತ್ತದೆ. ಸಂಬಂಧಿಸಿದ ಸಮೀಕ್ಷಾ ತಂಡದ ಸದಸ್ಯರಿಗೆ ತರಬೇತಿ ನೀಡಲಾಗಿದೆ ಎಂದು ಸಚಿವಾಲಯದ ವಕ್ತಾರರು ಶುಕವಾರ ಟ್ವಿಟರ್​​ನಲ್ಲಿ ತಿಳಿಸಿದ್ದಾರೆ.
ಭವಿಷ್ಯದಲ್ಲಿ ಜನ ಸಮೂಹದಲ್ಲಿ COVID-19 ಪತ್ತೆಹಚ್ಚಲು ಬಲವಾದ ಆರೋಗ್ಯ ಸಾಧನಗಳಾದ ‘ಆರೋಗ್ಯ ಸೇತು’ ಮತ್ತು ‘ಇತಿಹಾಸ್’ ಅಪ್ಲಿಕೇಶನ್‌ಗಳ ಸಂಯೋಜಿತ ಬಳಕೆಯನ್ನು ಗೃಹ ಸಚಿವರು ಈಗಾಗಲೇ ಅನುಮೋದಿಸಿದ್ದಾರೆ.
ಇದನ್ನೂ ಓದಿ:ಪ್ಯಾಂಗಾಂಗ್​ ತ್ಸೊ ಸರೋವರದ ಬಳಿ ಹೆಲಿಪ್ಯಾಡ್​ ನಿರ್ಮಾಣ, ಯುದ್ಧಕ್ಕೆ ಸಜ್ಜಾಗುತ್ತಿದೆಯಾ ಜಿನ್​ಪಿಂಗ್​ ಸೇನೆ?
ಆ್ಯಪ್‌ಗಳ ಸಂಯೋಜಿತ ಬಳಕೆಯ ಕುರಿತು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (ಎನ್‌ಸಿಡಿಸಿ) ದ ತರಬೇತುದಾರರು ದೆಹಲಿ ಸರ್ಕಾರದ ಜಿಲ್ಲಾ ತಂಡಗಳಿಗೆ ಗುರುವಾರ ತರಬೇತಿ ನೀಡಿದರು.ಸೆರೋಲಾಜಿಕಲ್ ಸಮೀಕ್ಷೆ ಎಂದರೇನು?:ಸಿರೊಲಾಜಿಕಲ್ ಸಮೀಕ್ಷೆಯು ಅವರು ಈ ಹಿಂದೆ ವೈರಸ್ ಸೋಂಕಿಗೆ ಒಳಗಾಗಿದ್ದಾರೆಯೇ ಎಂದು ನಿರ್ಧರಿಸಲು ಕೋವಿಡ್-19 ಪತ್ತೆ ಮಾಡದ ಜನರ ರಕ್ತವನ್ನು ಪರೀಕ್ಷಿಸುತ್ತದೆ, ಸೆರೋಲಜಿ ಪರೀಕ್ಷೆಗಳು ರಕ್ತದಲ್ಲಿನ ಪ್ರತಿಕಾಯಗಳನ್ನು ಹುಡುಕುತ್ತವೆ. ಪ್ರತಿಕಾಯಗಳು ಕಂಡುಬಂದಲ್ಲಿ ಈ ಹಿಂದೆ ಸೋಂಕು ಕಂಡುಬಂದಿದೆ ಎಂದು ಇದರರ್ಥ.
ಇದನ್ನೂ ಓದಿ:ಚೀನಿಯರ ಅನುಕೂಲಕ್ಕೆ ಗಡಿ ಭಾಗದ ರಸ್ತೆ ಅಭಿವೃದ್ಧಿ, ಬೆನ್ನಿಗೆ ಚೂರಿ ಇರಿಯುತ್ತಿದೆ ನೇಪಾಳ
ಕೋವಿಡ್ -19 ಹರಡುವಿಕೆಯನ್ನು ನಿರ್ಣಯಿಸಲು ಇದು ಹೇಗೆ ಸಹಾಯ ಮಾಡುತ್ತದೆ? :ಸಿರೊಲಾಜಿಕಲ್ ಸಮೀಕ್ಷೆಯನ್ನು ನಡೆಸುವ ಮೂಲಕ, ಸೋಂಕಿಗೆ ಒಳಗಾದ ಒಟ್ಟು ಜನರ ಬಗ್ಗೆ ಅಧಿಕಾರಿಗಳು ತಿಳಿದುಕೊಳ್ಳಬಹುದು, ಈ ಸಮೀಕ್ಷೆ ಇನ್ನೂ ಎಷ್ಟು ಜನರಿಗೆ ಸೋಂಕು ತಗಲಿಲ್ಲ ಎಂದು ಅಂದಾಜು ಮಾಡಲು ಹಾಗೂ ಸಾರ್ವಜನಿಕ ಆರೋಗ್ಯ ಅಧಿಕಾರಿಗಳಿಗೆ ಭವಿಷ್ಯದ ಆರೋಗ್ಯ ಅಗತ್ಯತೆಗಳನ್ನು ಯೋಜಿಸಲು ಸಹಾಯವಾಗುತ್ತದೆ.
ಕೊವಿಡ್​-19 ವಿರುದ್ಧ ಹೋರಾಟದಲ್ಲಿ ಸೋತು, ಶರಣಾಗಿದ್ದಾರೆ ಪ್ರಧಾನಿ ಮೋದಿ: ರಾಹುಲ್​ ಗಾಂಧಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 1 =
Remember me
