ನವದೆಹಲಿ: ಕರೊನಾ ವೈರಸ್​ ನಿಗ್ರಹಕ್ಕಾಗಿ ಭಾರತೀಯ ಕಂಪನಿಯೊಂದು ತಯಾರಿಸುತ್ತಿರುವ ಲಸಿಕೆ ಮಹತ್ವದ ಘಟ್ಟ ತಲುಪಿದೆ.ಲಸಿಕೆಯನ್ನು ಈಗಾಗಲೇ ಮಾನವರ ಮೇಲೆ ಪ್ರಯೋಗಿಸಲಾಗುತ್ತಿದ್ದು, ಮೂರನೇ ಹಂತದ ಪ್ರಯೋಗ ನಡೆದಿದೆ ಎಂದು ಪುಣೆಯ ಸಿರಂ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾ (ಎಸ್​ಐಐ) ಹೇಳಿದೆ.
ಎಸ್​ಐಐ ಜಗತ್ತಿನಲ್ಲಿಯೇ ಲಸಿಕೆ ತಯಾರಿಸುವ ಅತಿದೊಡ್ಡ ಘಟಕವಾಗಿದೆ. ಲಂಡ್​ನ ಆಕ್ಸ್​ಫರ್ಡ್​ ವಿವಿಯ ಸಂಶೋಧನಾ ತಂಡ ಅಭಿವೃದ್ಧಿಪಡಿಸುತ್ತಿರುವ ಲಸಿಕೆಯನ್ನು ಉತ್ಪಾದಿಸಲು ಈಗಾಗಲೇ ಒಪ್ಪಂದ ಮಾಡಿಕೊಂಡಿದೆ. ಪ್ರಯೋಗದ ಹಂತಗಳು ಪೂರ್ಣಗೊಂಡದ್ದೇ ಆದಲ್ಲಿ, ಆಕ್ಟೋಬರ್​ನಿಂದಲೇ ಲಸಿಕೆ ತಯಾರಿಕೆ ಆರಂಭವಾಗಲಿದೆ. ಮೊದಲ ಆರು ತಿಂಗಳು ಪ್ರತಿತಿಂಗಳು 50 ಲಕ್ಷ ಡೋಸ್​ ಲಸಿಕೆಗಳನ್ನು ಉತ್ಪಾದಿಸಲಾಗುವುದು ನಂತರದ ಆರು ತಿಂಗಳು ಪ್ರತಿತಿಂಗಳು 1 ಕೋಟಿ ಡೋಸ್​ ಲಸಿಕೆ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ ಎಂದು ಎಸ್​ಐಐ ಮುಖ್ಯಸ್ಥ ಅದಾರ್​ ಪೂನಾವಾಲಾ ಹೇಳಿದ್ದಾರೆ.
ಇದನ್ನೂ ಓದಿ;ವುಹಾನ್​ ವೈರಸ್ ಕರೊನಾ​ಗೆ ಚೀನಿಯರಿಂದಲೇ ಮದ್ದು, ಲಸಿಕೆ ಯಶಸ್ವಿ
ಈ ನಡುವೆ, ಎಸ್​ಐಐ ಅಭಿವೃದ್ಧಿಪಡಿಸುತ್ತಿರುವ ಲಸಿಕೆಯನ್ನು ಪುಣೆಯ ನಾಯ್ಡು ಆಸ್ಪತ್ರೆಯಲ್ಲಿರುವ ಕರೊನಾ ರೋಗಿಗಳ ಮೇಲೆ ಪ್ರಯೋಗಿಸಲಾಗಿದೆ. ಕಳೆದ 10 ದಿನಗಳಿಂದ ಈ ಕಾರ್ಯ ನಡೆಯುತ್ತಿದೆ. ಕರೊನಾ ಸೋಂಕಿತರು, ಶಂಕಿತರು, ರೋಗದ ಗುಣಲಕ್ಷಣ ಇಲ್ಲದವರು ಹಾಗೂ ಕೋವಿಡ್​ಗೆ ತುತ್ತಾದವರ ಮೇಲೆ ಲಸಿಕೆಯನ್ನು ಪ್ರಯೋಗಿಸಲಾಗಿದೆ. ಅಧ್ಯಯನ ನಡೆಯುತ್ತಿದ್ದು, ಅಂತಿಮ ಫಲಿತಾಂಶಕ್ಕೂ ಮುನ್ನ ಹಲವು ಮಾಹಿತಿಗಳನ್ನು ಕಲೆ ಹಾಕಬೇಕಾಗಿದೆ ಎಂದು ಎಸ್​ಐಐ ತಜ್ಞರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ;ಕರೊನಾ ಲಸಿಕೆ ಸಂಶೋಧನೆಯಲ್ಲಿ ಜಗತ್ತಿನ ಗಮನ ಸೆಳೆದ ಥಾಯ್ಲೆಂಡ್​
ಕರೊನಾ ವಿರುದ್ಧ ಹೋರಾಟಕ್ಕಾಗಿ ಅಭಿವೃದ್ಧಿಪಡಿಸುವ ಯಾವ ಲಸಿಕೆಗೂ ಪೇಟೆಂಟ್​ ಪಡೆಯುವುದಿಲ್ಲ ಎಸ್​ಐಐ ಸ್ಪಷ್ಟಪಡಿಸಿದೆ. ಇದನ್ನು ಯಾರೂ ಬೇಕಾದರೂ ಉತ್ಪಾದಿಸಿ ಮಾರಾಟ ಮಾಡಬಹುದು. ಭಾರತದಲ್ಲಷ್ಟೇ ಅಲ್ಲ, ವಿಶ್ವದ ಯಾವುದೇ ಭಾಗದವರೂ ಕೂಡ ಇದನ್ನು ಉತ್ಪಾದಿಸಿ ಮಾರಾಟ ಮಾಡಲು ಹಕ್ಕು ಹೊಂದಿರಲಿದ್ದಾರೆ ಎಂದು ಪೂನಾವಾಲಾ ಹೇಳಿದ್ದಾರೆ.
ಕರೊನಾ ಲಸಿಕೆ ಎಲ್ಲೇ ಸಂಶೋಧಿಸಲ್ಪಟ್ಟರೂ ಇಲ್ಲಿ ಉತ್ಪಾದನೆ ಖಚಿತ, ಭಾರತದ ಬಳಿಯಲ್ಲೇ ಇರಲಿದೆ ಕೀಲಿ ಕೈ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:12 − four =
Remember me
