ನವದೆಹಲಿ :ಮಕ್ಕಳಿಗೆ ಕರೊನಾ ಲಸಿಕೆಯನ್ನು ಒದಗಿಸುವ ಪ್ರಯತ್ನಕ್ಕೆ ಇದೀಗ ಮತ್ತಷ್ಟು ಪುಷ್ಟಿ ಸಿಕ್ಕಿದೆ. ಕೋವಿಶೀಲ್ಡ್​ ಕರೊನಾ ಲಸಿಕೆ ತಯಾರಕ ಸೀರಮ್​ ಇನ್ಸ್​ಟಿಟ್ಯೂಟ್​ ಆಫ್ ಇಂಡಿಯ ತನ್ನ ಹೊಸ ಲಸಿಕೆ ‘ನೋವಾವ್ಯಾಕ್ಸ್​’ನ ಕುರಿತಾಗಿ ಮಕ್ಕಳ ಮೇಲೆ ಕ್ಲಿನಿಕಲ್ ಟ್ರಯಲ್ಸ್​ಅನ್ನು ಜುಲೈನಲ್ಲಿ ಆರಂಭಿಸಲಿದೆ ಎಂದು ತಿಳಿದುಬಂದಿದೆ.
ಮಕ್ಕಳಿಗೆ ‘ಕೋವಾಕ್ಸಿನ್​’ ಲಸಿಕೆಯ ಸೂಕ್ತತೆ ಮತ್ತು ಅದರ ಪರಿಣಾಮಕಾರಿತ್ವವನ್ನು ಪತ್ತೆ ಹಚ್ಚಲು ಈಗಾಗಲೇ ಭಾರತ್​ ಬಯೋಟೆಕ್​​ ದೆಹಲಿ ಮತ್ತು ಪಟ್ನ ಏಮ್ಸ್​ ಆಸ್ಪತ್ರೆಗಳಲ್ಲಿ ಕ್ಲಿನಿಕಲ್​ ಟ್ರಯಲ್​ಗಳನ್ನು ಆರಂಭಿಸಿದೆ. ಇದರೊಂದಿಗೆ ಬಯೋಟೆಕ್​ನ ನೇಸಲ್​ ವಾಕ್ಸಿನ್​ ಪ್ರಯೋಗಗಳಲ್ಲಿ ಕೂಡ ಮಕ್ಕಳನ್ನು ಸೇರಿಸಿಕೊಳ್ಳಲಾಗಿದೆ. ಮತ್ತೊಂದು ಫಾರ್ಮ ಕಂಪೆನಿ ಜೈಡಸ್​ ಕಾಡಿಲಾ ಕೂಡ ತನ್ನ ‘ಜೈಕೋವಿ-ಡಿ’ ಲಸಿಕೆಯನ್ನು ಮಕ್ಕಳಿಗೆ ಬಳಸುವ ನಿಟ್ಟಿನಲ್ಲಿ ಪ್ರಯೋಗ ಮಾಡುತ್ತಿದೆ. ಹೀಗಾಗಿ ಮಕ್ಕಳ ಬಳಕೆಗೆ ನೋವಾವಾಕ್ಸ್​ ಸೇರಿ ನಾಲ್ಕು ಲಸಿಕೆಗಳ ಪ್ರಯೋಗ ನಡೆಯಲಿದೆ.(ಏಜೆನ್ಸೀಸ್)
ಕರೊನಾ ಕ್ವಾರಂಟೈನ್ ಉಲ್ಲಂಘಿಸಿದ ಭಾರತೀಯನಿಗೆ ಬಹ್ರೈನ್​ನಲ್ಲಿ 3 ವರ್ಷ ಜೈಲು ಶಿಕ್ಷೆ! ಸಹಾಯಕ್ಕೆ ಮೊರೆ
ಉಪಾಹಾರ ಕೂಟ ನಡೆಸಿದ ರೇಣುಕಾಚಾರ್ಯಗೆ ಸಿಎಂ ಬಿಎಸ್​ವೈ ಬುಲಾವ್


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + fifteen =
Remember me
