ರಾಯ್​ಪುರ:ಕರೊನಾ ಸೋಂಕಿನ ಅಬ್ಬರ ಇನ್ನೂ ಕಡಿಮೆಯಾಗಿಲ್ಲ. ಈಗಾಗಲೇ ಅದೆಷ್ಟೋ ವೈದ್ಯಕೀಯ ಸಿಬ್ಬಂದಿ ಸೋಂಕಿಗೆ ಪ್ರಾಣ ಬಿಟ್ಟಿದ್ದಾರೆ. ಅದೇ ರೀತಿ ತುಂಬು ಗರ್ಭಿಣಿ ಎನ್ನುವುದನ್ನೂ ಲೆಕ್ಕಿಸದೆ ಸೋಂಕಿತರ ಸೇವೆಗೆ ದುಡಿದಿದ್ದ ನರ್ಸ್​ ಒಬ್ಬರು ಮಗಳಿಗೆ ಜನ್ಮ ಕೊಟ್ಟು ಪ್ರಾಣ ಬಿಟ್ಟಿರುವ ಘಟನೆ ಚತ್ತೀಸ್​ಗಢದಲ್ಲಿ ನಡೆದಿದೆ.
ಚತ್ತೀಸ್​ಗಢದ ಕಬೀರ್‌ಹ್ಯಾಮ್ ಜಿಲ್ಲೆ ಪ್ರಭಾ (30) ಮೃತ ದುರ್ದೈವಿ. ಆಕೆ ಮೊರ್ಮಲಿ ಜಿಲ್ಲೆಯ ಖೈರ್ವಾರ್ ಖುರ್ದ್ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನರ್ಸ್​ ಆಗಿ ಕೆಲಸ ಮಾಡುತ್ತಿದ್ದಳು. ಕರೊನಾ ಬಂದಾಗಿನಿಂದ ಕರೊನಾ ವಾರ್ಡ್​ನಲ್ಲೇ ಆಕೆ ಕೆಲಸದಲ್ಲಿ ತೊಡಗಿಕೊಂಡಿದ್ದಳು. ಈ ಮಧ್ಯೆ ಆಕೆ ಗರ್ಭಿಣಿಯಾಗಿದ್ದು, ಒಂಬತ್ತು ತಿಂಗಳು ತುಂಬುವವರೆಗೂ ಆಸ್ಪತ್ರೆಯಲ್ಲಿ ಸೋಂಕಿತರ ಸೇವೆ ಮಾಡಿದ್ದಾಳೆ. ಮನೆಯಿಂದ ಆಸ್ಪತ್ರೆ ಸಾಕಷ್ಟು ದೂರವಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಯ ಹತ್ತಿರದಲ್ಲೇ ಬಾಡಿಗೆ ಮನೆ ಮಾಡಿಕೊಂಡು ಒಬ್ಬಳೇ ಎಲ್ಲವನ್ನೂ ನಿಭಾಯಿಸಿದ್ದಾಳೆ.
ಪ್ರಭಾಳಿಗೆ ಏಪ್ರಿಲ್​ 30ರಂದು ಹೆರಿಗೆ ನೋವು ಕಾಣಿಸಿಕೊಂಡಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮುದ್ದಾದ ಹೆಣ್ಣು ಮಗುವಿಗೆ ಆಕೆ ಜನ್ಮ ನೀಡಿದ್ದಳು. ಆದರೆ ಈ ಮಧ್ಯೆ ಆಕೆಗೆ ಜ್ವರ ಕಾಣಿಸಿಕೊಳ್ಳಲಾರಂಭಿಸಿದೆ. ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿ ಮನೆಗೆ ತೆರಳಿದ ಮೇಲೆ ಜ್ವರ ಕೆಮ್ಮು ಹೆಚ್ಚಾದ ಕಾರಣ ಆಕೆಯನ್ನು ಮತ್ತೊಮ್ಮೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಬರುಬರುತ್ತಾ ಆಕೆಯ ಸ್ಥಿತಿ ಗಂಭೀರವಾಗತೊಡಗಿದೆ. ಆಕ್ಸಿಜನ್​ ಲೆವೆಲ್​ ಕೂಡ ಕಡಿಮೆಯಾಗಿದ್ದು, ಮೇ 21ರಂದು ಪ್ರಭಾ ಕೊನೆಯುಸಿರೆಳೆದಿದ್ದಾಳೆ. ಹೆಂಡತಿಯನ್ನು ಕಳೆದುಕೊಂಡಿರುವ ಗಂಡ ನೋವಿನಿಂದ ಎಲ್ಲ ವಿಚಾರವನ್ನು ಹಂಚಿಕೊಂಡಿದ್ದಾನೆ. (ಏಜೆನ್ಸೀಸ್)
ಬಾಬಾ ರಾಮ್​ದೇವ್​ಗೆ 1000 ಕೋಟಿ ರೂಪಾಯಿ ಮಾನನಷ್ಟ ನೋಟಿಸ್ ನೀಡಿದ ಐಎಂಎ; ಕ್ಷಮೆಯಾಚಿಸಿ ಇಲ್ಲ ದುಡ್ಡು ಕೊಡಿ…

‘ದುಡ್ಡಿಲ್ಲ, ಭಾರತದ ನನ್ನ ವಕೀಲರಿಗೆ ಪಾವತಿಸೋಕೆ ಹಣ ಕೊಡಿ’ ಲಂಡನ್​ ಕೋರ್ಟ್​ಗೆ ವಿಜಯ್​ ಮಲ್ಯ ಮನವಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 3 =
Remember me
