ನವದೆಹಲಿ:ಅಸ್ಸಾಂ ಮತ್ತು ಮೇಘಾಲಯಗಳ ನಡುವೆ ಐದು ದಶಕಗಳ ಹಿಂದೆ ಆರಂಭವಾದ ಗಡಿ ವಿವಾದ ಮಾತುಕತೆ ಮೂಲಕ ಬಗೆಹರಿದಿದೆ. ಈ ಸಂಬಂಧ ದೆಹಲಿಯಲ್ಲಿ ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಕೇಂದ್ರ ಗೃಹ ಸಚಿವ ಅಮಿತ್ ಷಾ ಉಪಸ್ಥಿತಿಯಲ್ಲಿ ಮಂಗಳವಾರ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಇದಕ್ಕೆ ಸಂಬಂಧಿಸಿದ ಕರಡು ನಿರ್ಣಯವನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ಜನವರಿ 31ಕ್ಕೆ ಸಲ್ಲಿಸಿದ್ದರು. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಮೇಘಾಲಯ ಮುಖ್ಯಮಂತ್ರಿ ಕೊನ್ರಾಡ್ ಸಂಗ್ಮಾ ಹಲವು ಸುತ್ತಿನ ಮಾತುಕತೆ ನಡೆಸಿದ್ದರು. ಈಶಾನ್ಯ ರಾಜ್ಯಗಳ ಅಭಿವೃದ್ಧಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು 2014ರಿಂದ ನಾನಾ ರೀತಿಯ ಪ್ರಯತ್ನಗಳನ್ನು ಮಾಡುತ್ತ ಬಂದಿದ್ದಾರೆ. ಅದರ ಭಾಗವಾಗಿ ಹಲವು ದಶಕಗಳ ಹಳೆಯ ವಿವಾದ ಇತ್ಯರ್ಥವಾಗುತ್ತಿದೆ. ಇದಕ್ಕಾಗಿ ಉಭಯ ರಾಜ್ಯಗಳ ಮುಖ್ಯಮಂತ್ರಿಗಳನ್ನು ಅಭಿನಂದಿಸುತ್ತೇನೆ ಎಂದು ಕೇಂದ್ರ ಸಚಿವ ಅಮಿತ್ ಷಾ ಹೇಳಿದರು. ಅಸ್ಸಾಂನಿಂದ ಮೇಘಾಲಯವನ್ನು ಪ್ರತ್ಯೇಕಿಸಿ 1972ರಲ್ಲಿ ರಾಜ್ಯ ಮಾಡಿದ ಸಂದರ್ಭದಲ್ಲಿ ಗಡಿ ವಿವಾದ ಉದ್ಭವಿಸಿತ್ತು.
ನಿರ್ಣಯದಲ್ಲೇನಿದೆ?:ಪ್ರಸ್ತಾವಿತ ಕರಡು ನಿರ್ಣಯದಲ್ಲಿ ಮಾಡಿರುವ ಶಿಫಾರಸು ಪ್ರಕಾರ, ವಿವಾದಿತ 36.79 ಚದರ ಕಿ.ಮೀ. ಭೂಪ್ರದೇಶದಲ್ಲಿ 18.51 ಚ.ಕಿ.ಮೀ. ಅಸ್ಸಾಂಗೂ, ಉಳಿದ 18.28 ಚ.ಕಿ.ಮೀ. ಭೂಪ್ರದೇಶ ಮೇಘಾಲಯಕ್ಕೂ ಸೇರಲಿದೆ.
ಸರ್ವೆ ನಡೆಸಿ ಇತ್ಯರ್ಥ:ಗಡಿಭಾಗದಲ್ಲಿ 12 ಪ್ರದೇಶಗಳಿಗೆ ಸಂಬಂಧಿಸಿ ಭಿನ್ನಾಭಿಪ್ರಾಯಗಳಿವೆ. ಅಸ್ಸಾಂ ಜತೆಗೆ 6 ಪ್ರದೇಶಗಳಿಗೆ ಸಂಬಂಧಿಸಿ ಒಪ್ಪಂದಕ್ಕೆ ಬರಲಾಗಿದೆ. ಇನ್ನುಳಿದ ಪ್ರದೇಶಗಳ ಸರ್ವೆ ನಡೆಸಿ ಸಮಸ್ಯೆ ಬಗೆಹರಿಸಲಾಗುತ್ತದೆ. ಭಾರತದ ಸರ್ವೆಕ್ಷಣಾ ಇಲಾಖೆ ಈ ಸಮೀಕ್ಷೆ ಕಾರ್ಯ ನಡೆಸಲಿದೆ ಎಂದು ಮೇಘಾಲಯ ಮುಖ್ಯಮಂತ್ರಿ ಕೊನ್ರಾಡ್ ಸಂಗ್ಮಾ ಹೇಳಿದರು.
ಅಸ್ಸಾಂ ಮತ್ತು ಮೇಘಾಲಯದ ನಡುವೆ 50 ವರ್ಷಗಳಿಂದ ಬಾಕಿ ಇದ್ದ ಗಡಿ ವಿವಾದ ಬಗೆಹರಿದಿದೆ. 12 ಅಂಶಗಳ ಪೈಕಿ 6 ಇತ್ಯರ್ಥವಾಗಿದೆ. ಉಳಿದ ಆರು ಅಂಶಗಳನ್ನು ಕೂಡ ಶೀಘ್ರವೇ ಬಗೆಹರಿಸಲಾಗುವುದು.
|ಅಮಿತ್ ಷಾಕೇಂದ್ರ ಗೃಹ ಸಚಿವ
ಐತಿಹಾಸಿಕ ಸಾಧನೆ:ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ನಿಯತ ಪ್ರಯತ್ನದ ಕಾರಣ ಈ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸುವುದು ಸಾಧ್ಯವಾಗಿದೆ. ಐದು ದಶಕಗಳ ಹಳೆಯ ವಿವಾದವೊಂದು ಮಾತುಕತೆ ಮೂಲಕ ಬಗೆಹರಿದಿದೆ ಎಂದು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಹೇಳಿದರು.
ಅಂತಿಮ ಮಾತುಕತೆ ಶೀಘ್ರ:ಕರಡು ನಿರ್ಣಯವನ್ನು ಉಭಯ ರಾಜ್ಯಗಳು ಅಂಗೀಕರಿಸುವ ಮುನ್ನ ಅಂತಿಮ ಸುತ್ತಿನ ಮಾತುಕತೆ ಕೇಂದ್ರ ಗೃಹ ಸಚಿವಾಲಯದ ಮಧ್ಯಸ್ಥಿಕೆಯಲ್ಲಿ ನಡೆಯಲಿದೆ. ಇದಾದ ಬಳಿಕ ಅಸ್ಸಾಂ ಮತ್ತು ಮೇಘಾಲಯದ ಪ್ರತಿನಿಧಿಗಳು ಅಂತಿಮ ವಾಸ್ತವಿಕ ಒಡಂಬಡಿಕೆಗೆ ಸಹಿ ಹಾಕಲಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − six =
Remember me
