ನವದೆಹಲಿ:ರಸ್ತೆ ಸಾರಿಗೆ ನಿಯಮದ ಪ್ರಕಾರ, ಸಾಮಾನ್ಯವಾಗಿ ಮೂರು ಜನ ಒಂದೇ ಬೈಕ್​ನಲ್ಲಿ ಪ್ರಯಾಣಿಸಿದರೆ ದಂಡ ವಿಧಿಸಲಾಗುತ್ತದೆ. ಒಂದೇ ಬೈಕ್‌ನಲ್ಲಿ ಏಳು ಜನ, ಎರಡು ನಾಯಿ, ಕೋಳಿನ್ನು ಬೈಕ್​ ಮೇಲೆ ಕೂರಿಸಿಕೊಂಮಡು ಪ್ರಯಾಣಿಸುತ್ತೀರುವ ವೀಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ಸಖತ್​ ವೈರಲ್​​ ಆಗಿದೆ.
ವೈರಲ್ ಆಗಿರುವ ಈ ವೀಡಿಯೋದಲ್ಲಿ ಏನಿದೆ?:ವೀಡಿಯೋ ಪ್ರಕಾರ, ಇಡೀ ಕುಟುಂಬ ಒಂದೇ ಬೈಕ್​​ನಲ್ಲಿ ಪ್ರಯಾಣಿಸುತ್ತಿದೆ ಎಂದು ಹೇಳಬಹುದು. ಬೈಕ್ ಓಡಿಸುವ ವ್ಯಕ್ತಿ, ಅವನ ಮುಂದೆ ಇಬ್ಬರು ಮಕ್ಕಳು, ಅವನ ಹಿಂದೆ ಅವನ ಹೆಂಡತಿ, ಅವಳ ಮೇಲೆ ಒಂದು ಮಗು. ಆ ಮಗುವಿನ ಹಿಂದೆ ಇನ್ನಿಬ್ಬರು ಮಕ್ಕಳು ಕುಳಿತಿದ್ದಾರೆ. ಅವರೊಂದಿಗೆ ಎರಡು ನಾಯಿಮರಿಗಳು ಮತ್ತು ಕೋಳಿಗಳಿವೆ. ಇದಲ್ಲದೇ ಅವರ ಬಳಿ ಸ್ವಲ್ಪ ಹೆಚ್ಚು ಲಗೇಜ್ ಕೂಡ ಇರುವುದನ್ನು ನಾವು ನೋಡಬಹುದಾಗಿದೆ.
A post shared by purvanchal (@purvanchal51)
ಬೈಕ್ ಚಲಾಯಿಸುತ್ತಿದ್ದ ಮತ್ತೊಬ್ಬ ವ್ಯಕ್ತಿ ಈ ವಿಡಿಯೋವನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಈ ವಿಡಿಯೋಗೆ ನೆಟಿಜನ್‌ಗಳು ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು ಛೀಮಾರಿ ಹಾಕುತ್ತಾ ಕಾಮೆಂಟ್ ಹಾಕುತ್ತಿದ್ದರೆ.. ಇನ್ನು ಕೆಲವರು ತಮಾಷೆ ಮಾಡುತ್ತಿದ್ದಾರೆ. ಇದು ನಿಜಕ್ಕೂ ದೊಡ್ಡ ಸಾಹಸವೇ.. ಆ ಬೈಕ್ ಓಡಿಸಿದ ವ್ಯಕ್ತಿಗೆ ನಮಸ್ಕಾರಗಳು,.. ಇಷ್ಟು ಜನರ ಜೀವದ ಜೊತೆ ಚೆಲ್ಲಾಟವಾಡುವುದು ಸರಿಯಲ್ಲ ಎಂಬ ಕಾಮೆಂಟ್​​ಗಳು ಹರಿದಾಡುತ್ತಿವೆ.
ಕೆಲವರು ಈ ವಿಡಿಯೋ ನೋಡಿ ವಿವಿಧ ಮಾಧ್ಯಮಗಳಲ್ಲಿ ಶೇರ್ ಮಾಡುತ್ತಿದ್ದಾರೆ. ಆದರೆ ಈ ವಿಡಿಯೋ ಎಲ್ಲಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ ಈ ಕ್ಲಿಪ್ ನೋಡಿದ ನೆಟ್ಟಿಗರು ಆತಂಕಕ್ಕೆ ಒಳಗಾಗಿದ್ದಾರೆ.
1 ವರ್ಷದಲ್ಲಿ 300 ಪುರುಷರು, ಮಹಿಳೆಯರ ಜತೆ ಹಾಸಿಗೆ ಹಂಚಿಕೊಂಡಿದ್ದ ಮಾಡೆಲ್!; ಕೆಲಸದಿಂದ ವಜಾ ಮಾಡಿದ ಕಂಪನಿ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:seven + twenty =
Remember me
