ನವದೆಹಲಿ:ಸದ್ಯ ಜನ ಸಾಮಾನ್ಯರನ್ನು ಕಾಡುತ್ತಿರುವ ಪ್ರಶ್ನೆ ಎಂದರೆ, ಕರೊನಾ ಸೋಂಕಿತರ ಸಂಖ್ಯೆ 500 ಇಲ್ಲದಿದ್ದಾಗ ಇಡೀ ದೇಶವನ್ನೇ ಸಂಪೂರ್ಣ ಬಂದ್​ ಮಾಡಲಾಗಿತ್ತು. ಈಗ ಒಂದು ಲಕ್ಷ ದಾಟಿದೆ, ಪ್ರತಿದಿನ ಸರಾಸರಿ ಐದು ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗುತ್ತಿವೆ. ಹೀಗಿರುವಾಗ ಬಸ್​, ರೈಲು ಸಂಚಾರ, ವಿಮಾನ ಹಾರಾಟಕ್ಕೆ ಅವಕಾಶ ಕಲ್ಪಿಸುತ್ತಿರುವುದೇಕೆ? ಸಾರ್ವಜನಿಕರನ್ನು ಮುಕ್ತವಾಗಿ ಓಡಾಡೋಕೇ ಬಿಟ್ಟಿರೋದೇಕೆ?
ಹೌದು…. ವಿಶ್ವ ಅರೋಗ್ಯ ಸಂಸ್ಥೆಯ ನಿರ್ದೇಶನಗಳನ್ನು ಪಾಲಿಸಿದ್ದೇ ಆದಲ್ಲಿ ಪ್ರಸ್ತುತ ಏಳು ರಾಜ್ಯಗಳನ್ನಾದರೂ ಸಂಪೂರ್ಣ ಬಂದ್​ ಮಾಡಬೇಕಾಗುತ್ತದೆ. ಸೋಂಕಿತರ ಪ್ರಮಾಣ ಶೇ.5ಕ್ಕಿಂತಲೂ ಹೆಚ್ಚಾದರೆ ಹೆಚ್ಚು ನಿರ್ಬಂಧಗಳನ್ನು ವಿಧಿಸಬೇಕಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯೇ ಹೇಳಿದೆ. ಇದನ್ನು ಪಾಲಿಸಿದ್ದೇ ಆದಲ್ಲಿ, ಮಹಾರಾಷ್ಟ್ರ, ಗುಜರಾತ್​, ದೆಹಲಿ, ತೆಲಂಗಾಣ, ಚಂಡೀಗಡ್, ತಮಿಳುನಾಡು ಹಾಗೂ ಬಿಹಾರ್​ ರಾಜ್ಯಗಳನ್ನು ಈಗಲೂ ಸೀಲ್​ಡೌನ್​ ಸ್ಥಿತಿಯಲ್ಲಿಯೇ ಅಥವಾ ಯಾವುದೇ ವಿನಾಯ್ತಿಗಳಿಲ್ಲದ ಲಾಕ್​ಡೌನ್​ ಮುಂದುವರಿಸಬೇಕಾಗುತ್ತದೆ. ಈ ಎಲ್ಲ ರಾಜ್ಯಗಳಲ್ಲಿ ಕಳೆದೆರಡು ವಾರಗಳಿಂದ ಕರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡುಬರುತ್ತಿದೆ.
ಇದನ್ನೂ ಓದಿ;ಕಂಟೇನ್​ಮೆಂಟ್​ ಜೋನ್​ನಲ್ಲಿ ಮನೆ ಮನೆಗೆ ತೆರಳುತ್ತಿರುವ ಆರ್​ಎಸ್​ಎಸ್​ ಕಾರ್ಯಕರ್ತರು ಮಾಡುತ್ತಿರೋದೇನು?
ಇನ್ನೂ ಕರ್ನಾಟಕವೂ ಇದಕ್ಕೆ ಹೊರತಾಗಿಲ್ಲ. ಕಳೆದ ಒಂದು ವಾರದಿಂದ ದಿನವೂ 100ಕ್ಕೂ ಅಧಿಕ ಕೇಸ್​ಗಳು ವರದಿಯಾಗುತ್ತಿವೆ. ಇದು ಕೂಡ ಕಳವಳಕ್ಕೆ ಕಾರಣವಾಗಿದೆ.
ಮಹಾರಾಷ್ಟ್ರದಲ್ಲಿ ಪರಿಸ್ಥಿತಿ ಅತ್ಯಂತ ಭೀಕರವಾಗಿದ್ದು, ಇಲ್ಲಿ ಸೋಂಕಿಗೆ ಒಳಗಾಗುತ್ತಿರುವವರ ಪ್ರಮಾಣ ಶೇ.18ಕ್ಕೂ ಹೆಚ್ಚಿದೆ. ಗುಜರಾತ್​ನಲ್ಲಿ ಶೇ.9, ದೆಹಲಿ ಶೇ.7, ತೆಲಂಗಾಣ ಶೇ.7, ಚಂಡಿಗಢ್​ ಶೇ.6, ತಮಿಳುನಾಡು ಹಾಗೂ ಬಿಹಾರದಲ್ಲಿ ಪರೀಕ್ಷೆಗೊಳಗಾದವರ ಪೈಕಿ ಶೇ.5 ಜನರಲ್ಲಿ ಸೋಂಕು ಕಂಡು ಬರುತ್ತಿದೆ. ಅಲ್ಲಿಗೆ ದೇಶದ ಶೇ.21ರಷ್ಟು ಪ್ರದೇಶ ಸೀಲ್​ಡೌನ್​ಗೆ ಒಳಗಾಗಬೇಕಾಗುತ್ತದೆ ಎಂದು ಜಾನ್​ ಹಾಪ್​ಕೀನ್ಸ್​ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನದಲ್ಲಿ ಹೇಳಲಾಗಿದೆ.
ಇನ್ನೂ ಆತಂಕದ ವಿಷಯವೆಂದರೆ, ಸದ್ಯ ಗಂಭೀರವಾಗಿ ಅನಾರೋಗ್ಯಕ್ಕೆ ಒಳಗಾದವರನ್ನು ಮಾತ್ರ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಹೀಗಾಗಿ ಸಮುದಾಯವೊಂದರಲ್ಲಿ ಎಷ್ಟು ಜನರು ಈ ಸೋಂಕಿಗೆ ತುತ್ತಾಗುತ್ತಿದ್ದಾರೆ ಎಂಬುದು ನಿಖರವಾಗಿ ಗೊತ್ತಾಗುತ್ತಿಲ್ಲ. ಈ ಸಂಖ್ಯೆ ಹೆಚ್ಚಾದಲ್ಲಿ ಸೋಂಕಿತರ ಸಂಖ್ಯೆಯಲ್ಲೂ ಭಾರಿ ಹೆಚ್ಚಳ ಕಂಡುಬರಲಿದೆ ಎಂದು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ;ಈ ವರ್ಷ ನರ್ಸರಿ ಸ್ಕೂಲ್​ ತೆರೆಯಲ್ವಾ…? ಆಡ್ಮಿಷನ್​ ಮಾಡಿಸ್ಬೇಕೋ ಬೇಡ್ವೋ?
ಈ ಕಾರಣಕ್ಕೆ ಜೂನ್​ ವೇಳೆಗೆ ಭಾರತದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ತೀವ್ರ ಏರಿಕೆ ಕಂಡುಬರಲಿದೆ ಎಂದು ಹೇಳಲಾಗಿದೆ. ಈಗಾಗಲೇ ಖಾಸಗಿ ಆಸ್ಪತ್ರೆಯ ಶೇ.80ಕ್ಕೂ ಅಧಿಕ ಹಾಸಿಗೆಗಳನ್ನು ಸರ್ಕಾರ ವಶಕ್ಕೆ ಪಡೆಯುತ್ತಿದೆ. ಅಲ್ಲಿಗೂ ಇದು ತಹಬಂಧಿಗೆ ಬಾರದಿದ್ದರೆ, ಮತ್ತೊಂದು ಸುತ್ತಿನ ಸೀಲ್​ ಡೌನ್​ ಅನಿವಾರ್ಯವಾಗಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಎಸ್​ಎಸ್​ಎಲ್​ಸಿ ಪರೀಕ್ಷಾ ಕೇಂದ್ರ ಬದಲಾಯಿಸಿಕೊಳ್ಳಲು ಮೇ 29 ಕೊನೇ ದಿನಾಂಕ, ಇಲ್ಲಿದೆ ವಿಧಾನ, ಸಹಾಯವಾಣಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 1 =
Remember me
