|ಡಾ.ಕೆ.ಸುಧಾಕರ್ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ
ಪ್ರಜಾ ಸುಖೇ ಸುಖಂ ರಾಜ್ಯಃ
ಪ್ರಜಾನಾಂ ಚ ಹಿತೇಹಿತಮ್
ನಾತ್ಮ ಪ್ರಿಯಮ್ ಹಿತಮ್ ರಾಜಾನಾಃ
ಪ್ರಜಾನಾಮ್ ಚ ಹಿತಮ್ ಪ್ರಿಯಮ್
‘ರಾಜ್ಯದ ಏಳಿಗೆ ಪ್ರಜೆಗಳ ಸುಖದಲ್ಲಿ ಅಡಗಿದೆ. ಪ್ರಜೆಗಳ ಹಿತದಲ್ಲಿ ರಾಜನ ಹಿತವಿದೆ. ರಾಜನಾದವನು ತನ್ನ ಹಿತಕ್ಕಿಂತ ಪ್ರಜೆಗಳ ಹಿತಕ್ಕೆ ಮಹತ್ವ ನೀಡಬೇಕು’ ಎಂದು ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಪ್ರಜೆಗಳ ಆಶೋತ್ತರಗಳನ್ನು ಈಡೇರಿಸುವ, ದೇಶದ ಕ್ಷೇಮಾಭಿವೃದ್ಧಿ ಹೊಣೆ ಹೊತ್ತ ರಾಜನ ನಡೆ ಹೇಗಿರಬೇಕೆಂದು ಈ ಚಾಣಕ್ಯ ಸೂತ್ರ ಸೂಚಿಸುತ್ತದೆ. ಕೋಟ್ಯಂತರ ಭಾರತೀಯರ ಅದಮ್ಯ ಪ್ರೀತಿ, ವಿಶ್ವಾಸ, ಬೆಂಬಲ ಗಳಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಈ ಚಾಣಕ್ಯ ಸೂತ್ರದ ಸಾಕಾರಮೂರ್ತಿಯಂತಿದ್ದಾರೆ. ಪ್ರಧಾನಿ ಮೋದಿಯವರಿಗೆ ಇಂದು 71ನೇ ಜನ್ಮದಿನ. ಸೇವೆ, ಸಮರ್ಪಣೆ ಮೂಲಕ ರಾಷ್ಟ್ರಸೇವೆಗೆ ನಿವೇದಿಸಿಕೊಂಡ ಅವರ ಸಾರ್ಥಕ ಬದುಕು, ಅಸಾಧಾರಣ ಕರ್ತೃತ್ವ ಶಕ್ತಿ ಸಾರ್ವಜನಿಕ ಜೀವನದಲ್ಲಿರುವ ಪ್ರತಿಯೊಬ್ಬರಿಗೂ ಪ್ರೇರಣೆಯಾಗಿದೆ.
ಜನಮನ ಮುಟ್ಟಿದ ಯೋಜನೆಗಳು:ದೇಶದ ಬಡ ಹಾಗೂ ಕೆಳಮಧ್ಯಮ ವರ್ಗದ ಜನರಿಗೆ ಬ್ಯಾಂಕಿಂಗ್ ಸೇವೆ ತಲುಪಿಸಿ, ಆರ್ಥಿಕ ವ್ಯವಸ್ಥೆಯಲ್ಲಿ ಅವರನ್ನು ಸೇರಿಸಲು ಜನಧನ ಯೋಜನೆ ಜಾರಿಯಾಯಿತು. ಇಂದು 43.23 ಕೋಟಿ ಫಲಾನುಭವಿಗಳ ಖಾತೆಗಳಲ್ಲಿ ಒಟ್ಟು 1,44,870 ಕೋಟಿ ರೂ. ಜಮೆಯಾಗಿ ಉಳಿತಾಯವಾಗುತ್ತಿದೆ. ಜನಸಾಮಾನ್ಯರ ಜೀವನಮಟ್ಟ ಸುಧಾರಣೆಗೆ ಇದು ನೆರವಾಗಿದೆ. ಗ್ರಾಮೀಣ ಪ್ರದೇಶಗಳ ಎಲ್ಲ ಮನೆಗಳಿಗೆ ನಲ್ಲಿ ಸಂಪರ್ಕ ನೀಡುವ ‘ಜಲ ಜೀವನ್ ಮಿಷನ್’ ಜಾರಿಯಾಗಿದೆ. 2024ರ ವೇಳೆಗೆ ಈ ಯೋಜನೆಯಿಂದಾಗಿ ಪ್ರತಿಯೊಬ್ಬರ ಮನೆಬಾಗಿಲಿಗೆ ಕೊಳಾಯಿ ನೀರು ಬರಲಿದೆ.
ಜಗತ್ತಿನಲ್ಲೇ ಅತಿದೊಡ್ಡ ‘ಆಯುಷ್ಮಾನ್ ಭಾರತ್’ ಆರೋಗ್ಯ ಯೋಜನೆಯನ್ನು ನೀಡುವ ಮೂಲಕ ಪ್ರಧಾನಿ ಮೋದಿ, ಬಡತನ ರೇಖೆಗಿಂತ ಕೆಳಗಿನ ಹಾಗೂ ಮೇಲಿನ ಎರಡೂ ಕುಟುಂಬ ವರ್ಗಗಳಿಗೆ ಉತ್ತಮ ಆರೋಗ್ಯ ಸೇವೆಯ ಖಚಿತತೆ ನೀಡಿದ್ದಾರೆ. 16.38 ಕೋಟಿ ಕಾರ್ಡ್​ಗಳನ್ನು ಈವರೆಗೆ ನೀಡಿದ್ದು, 2.11 ಕೋಟಿ ರೋಗಿಗಳು ಇದರಡಿ ಉಚಿತ ಚಿಕಿತ್ಸೆಯ ಲಾಭ ಪಡೆದುಕೊಂಡಿದ್ದಾರೆ. ರಾಜ್ಯದಲ್ಲಿ ಕೋವಿಡ್ 1 ಹಾಗೂ 2ನೇ ಅಲೆಯ ಸಂದರ್ಭದಲ್ಲಿ ಈ ಯೋಜನೆಯಡಿ, 2 ಲಕ್ಷಕ್ಕೂ ಅಧಿಕ ಕರೊನಾ ರೋಗಿಗಳಿಗೆ 956 ಕೋಟಿ ರೂ.ಗೂ ಅಧಿಕ ಮೊತ್ತ ಪಾವತಿಸಿ ಉಚಿತ ಚಿಕಿತ್ಸೆ ಕಲ್ಪಿಸಲಾಗಿದೆ. ಇವುಗಳ ಜೊತೆಗೆ ಉಜ್ವಲ ಯೋಜನೆ, ಸುರಕ್ಷಾ ವಿಮೆ, ಅಟಲ್ ಪಿಂಚಣಿ, 2022ರ ಒಳಗೆ ಎಲ್ಲರಿಗೂ ವಸತಿ, ಕಿಸಾನ್ ಸಮ್ಮಾನ್ ಮೊದಲಾದ ವ್ಯಾಪಕವಾಗಿ ಜನರನ್ನು ತಲುಪುವ ಯೋಜನೆಗಳನ್ನು ನೀಡಿರುವುದು ಮೋದಿಯವರ ಹೆಗ್ಗಳಿಕೆ.
ದಿಟ್ಟ ನಿರ್ಧಾರ, ಬಲಿಷ್ಠ ನಾಯಕತ್ವ:ಮೋದಿಯವರು ಭಾರತದ ನಿಜವಾದ ಶಕ್ತಿ, ಸಾಮರ್ಥ್ಯವನ್ನು ಇಡೀ ವಿಶ್ವಕ್ಕೆ ಪರಿಚಯಿಸಿದ್ದಾರೆ. ಕರೊನಾ ಸಂಕಷ್ಟದ ಸಂದರ್ಭದಲ್ಲಿ ಆತ್ಮನಿರ್ಭರ ಭಾರತದ ಪರಿಕಲ್ಪನೆ ನೀಡುವ ಮೂಲಕ ನವಚೈತನ್ಯ ತುಂಬಿದ್ದಾರೆ. ಲಸಿಕೆ ಉತ್ಪಾದನೆಯಲ್ಲಿಯೂ ಭಾರತ ವಿಶ್ವಕ್ಕೆ ಅಗ್ರಮಾನ್ಯ ದೇಶವಾಗಿ ಹೊರಹೊಮ್ಮಿದೆ. ಲಸಿಕೆ ಅಭಿಯಾನವನ್ನು ತೀವ್ರಗೊಳಿಸಿರುವುದಕ್ಕಾಗಿ ಭಾರತವನ್ನು ವಿಶ್ವ ಆರೋಗ್ಯ ಸಂಸ್ಥೆ ಅಭಿನಂದಿಸಿದೆ. ಮೊದಲ 10 ಕೋಟಿ ಡೋಸ್​ಗಳಿಗೆ 85 ದಿನಗಳನ್ನು ತೆಗೆದುಕೊಂಡಿದ್ದ ಭಾರತ ಈಗ ಕೇವಲ 13 ದಿನಗಳಲ್ಲಿ 65 ಕೋಟಿ ಡೋಸ್ ವಿತರಿಸುವ ಮೂಲಕ 75 ಕೋಟಿ ಡೋಸ್​ಗಳ ಗುರಿಯನ್ನು ಸಾಧಿಸಿದೆ.
ಸಹೃದಯಿ ನಾಯಕ:2017ರಲ್ಲಿ ಚಂದ್ರಯಾನ-2 ಉಪಗ್ರಹ ಲ್ಯಾಂಡಿಂಗ್ ವೀಕ್ಷಿಸಲು ಬೆಂಗಳೂರಿಗೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ದೆಹಲಿಗೆ ವಾಪಸ್ಸಾಗುವ ವೇಳೆ ಇಸ್ರೋ ಅಧ್ಯಕ್ಷ ಕೆ. ಶಿವನ್ ಭಾವುಕರಾಗಿ ನಿಂತಿದ್ದರು. ತಮ್ಮ ಕನಸು ಈಡೇರದ ಕಾರಣ ನಿರಾಶರಾಗಿದ್ದ ಶಿವನ್ ಅವರನ್ನು ಮೋದಿ ಅಪ್ಪಿಕೊಂಡು, ಸಾಂತ್ವನ ಹೇಳಿದರು. ಈ ಮೂಲಕ ಒಬ್ಬ ದೇಶದ ನಾಯಕ ಹೇಗಿರಬೇಕೆಂದು ತೋರಿಸಿಕೊಟ್ಟಿದ್ದಾರೆ.
ಈ ಬಾರಿಯ ಒಲಿಂಪಿಕ್ಸ್​ನಲ್ಲಿ ಭಾರತೀಯ ಆಟಗಾರರು 7 ಪದಕಗಳನ್ನು ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಒಲಿಂಪಿಕ್ಸ್​ನಲ್ಲಿ ಈ ಬಾರಿ ಭಾರತದ ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡಲು ನರೇಂದ್ರ ಮೋದಿ ಸರ್ಕಾರದ ‘ಟಾಪ್ಸ್ (ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಮ್ ಟಿಒಪಿಎಸ್)’ ಯೋಜನೆಯೂ ಪ್ರಮುಖ ಕಾರಣ. ಪ್ರಧಾನಿ ಮೋದಿ ಮಾರ್ಗದರ್ಶನದಲ್ಲಿ 2014ರ ಸೆಪ್ಟೆಂಬರ್​ನಲ್ಲಿ ಈ ಯೋಜನೆ ಆರಂಭಗೊಂಡಿತ್ತು. ಸಂಭಾವ್ಯ ಪದಕ ವಿಜೇತರನ್ನು ಗುರುತಿಸಲು ತಜ್ಞರನ್ನು ಒಳಗೊಂಡ ಆಯ್ಕೆ ಸಮಿತಿಯನ್ನು ನೇಮಿಸಲಾಗಿತ್ತು. ಈ ಯೋಜನೆ ಅಡಿಯಲ್ಲಿ ಸರ್ಕಾರವು ಅಥ್ಲೀಟ್​ಗಳಿಗೆ ಹಣಕಾಸು ನೆರವು, ತರಬೇತಿ ಮತ್ತು ವೈದ್ಯಕೀಯ ನೆರವು ನೀಡಿದೆ. ಕ್ರೀಡಾಕೂಟ ನಡೆಯುತ್ತಿದ್ದ ಸಂದರ್ಭದಲ್ಲಿ ಖುದ್ದು ತಾವೇ ಫೋನ್ ಮಾಡಿ ಕ್ರೀಡಾಪಟುಗಳನ್ನು ಹುರಿದುಂಬಿಸಿ, ಸೋತಾಗ ಅವರ ಬೆನ್ನು ತಟ್ಟಿದರು. ದೇಶದ ಹೆಮ್ಮೆಯ ಕ್ರೀಡಾಪಟುಗಳನ್ನು ಮನೆ ಮಕ್ಕಳ ರೀತಿ ಪ್ರೋತ್ಸಾಹಿಸಿದ, ನಿರಂತರವಾಗಿ ಅವರ ಬೆನ್ನಿಗೆ ನಿಂತ ಮೊದಲನೇ ಪ್ರಧಾನಿ ಮೋದಿ ಅವರೇ ಎಂದರೆ ಅತಿಶಯೋಕ್ತಿಯಲ್ಲ. ಮೋದಿ ಅವರ ಸಂಕಲ್ಪದಂತೆ ನಾವೆಲ್ಲರೂ ಒಟ್ಟಾಗಿ ದೇಶ ಕಟ್ಟಲು ಶ್ರಮಿಸೋಣ. ದೇಶದ ಪ್ರತಿಯೊಬ್ಬ ಪ್ರಜೆ ಒಂದು ಹೆಜ್ಜೆ ಮುಂದಿಟ್ಟರೆ ದೇಶ 130 ಕೋಟಿ ಹೆಜ್ಜೆ ಮುಂದಿಟ್ಟಂತೆ.
ಒಡಿಶಾ ಸಮುದ್ರ ತೀರದಲ್ಲಿ ಸಾಹಸಸಿಂಹನ ಅಲೆ; ಡಾ.ವಿಷ್ಣುವರ್ಧನ್ ಅವರ ಮರಳು ಶಿಲ್ಪ!

ಇನ್ನೆರಡು ತಿಂಗಳಂತೂ ಬಹಳ ಹುಷಾರಾಗಿರಬೇಕು: ನೀತಿ ಆಯೋಗದ ಸದಸ್ಯರ ಎಚ್ಚರಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 5 =
Remember me
