ನವದೆಹಲಿ:ಚೀನಾದಲ್ಲಿ ಮಹಾಮಾರಿಯಾಗಿ ಕಾಡುತ್ತಿರುವ ಕೊರೊನಾದ ಪರಿಣಾಮವನ್ನು ಭಾರತ ಎದುರಿಸುತ್ತಿದೆ. ಚೀನಾದಿಂದ ಭಾರತಕ್ಕೆ ಆಮದು ಸ್ಥಗಿತಗೊಂಡಿದ್ದು, ಎಲೆಕ್ಟ್ರಾನಿಕ್​, ಸ್ಮಾರ್ಟ್​ಫೋನ್​, ಮೆಡಿಕಲ್​ ಸೇರಿದಂತೆ ಎಲ್ಲ ಕ್ಷೇತ್ರಗಳ ಮೇಲೂ ಅದು ಹೊಡೆತ ನೀಡುತ್ತಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಮುಂದಿನ ತಿಂಗಳಲ್ಲಿ ಭಾರತದಲ್ಲಿ ಅನೇಕ ಔಷಧಗಳು ಲಭ್ಯವಾಗುವುದಿಲ್ಲ ಮತ್ತು ಅನೇಕ ಔಷಧಗಳ ಬೆಲೆ ಹೆಚ್ಚಲಿದೆ ಎಂದು ಹೇಳಲಾಗಿದೆ.
ಚೀನಾದಿಂದ ಆಮದು ಸ್ಥಗಿತಗೊಂಡಿರುವ ಹಿನ್ನೆಲೆ ಫೆಡರೇಶನ್​ ಆಫ್​ ಇಂಡಿಯನ್​ ಚೇಂಬರ್ಸ್​ ಆಫ್​ ಕಾಮರ್ಸ್​ ಆ್ಯಂಡ್​ ಇಂಡಸ್ಟ್ರಿ (ಎಫ್​ಐಸಿಸಿಐ) ಭಾರತದ ಅನೇಕ ಇಂಡಸ್ಟ್ರಿಗಳಿಂದ ವರದಿ ಸಂಗ್ರಹಿಸಿದೆ. ಯಾವ ಯಾವ ಸಾಮಾಗ್ರಿಗಳ ಕೊರತೆ ಉಂಟಾಗಿದೆ ಎನ್ನುವುದನ್ನು ಪಟ್ಟಿ ಮಾಡಿದೆ. ಈ ಪಟ್ಟಿಯ ಅನುಸಾರ ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುತ್ತಿರುವ ಪ್ಯಾರಸಿಟಮಾಲ್​, ಐಬ್ರುಫಿನ್​ ನಂತಹ ಔಷಧಗಳಲ್ಲಿ ಕೊರತೆ ಉಂಟಾಗುತ್ತಿದೆ.
ಚೀನಾದಿಂದ ಆಮದಾಗುವ ಈ ಔಷಧಗಳಿಗೆ ಭಾರತದ ಮಾರುಕಟ್ಟೆಯಲ್ಲಿ ಕೊರತೆಯಾಗಿದ್ದು, ಈ ತಿಂಗಳ ಅಂತ್ಯಕ್ಕೆ ಅವುಗಳು ಸಂಪೂರ್ಣವಾಗಿ ಖಾಲಿಯಾಗಬಹುದು ಎನ್ನಲಾಗಿದೆ. ಮುಂದಿನ ತಿಂಗಳೊಳಗೆ ಚೀನಾ ಕೊರೊನಾ ಮುಕ್ತವಾಗಿ ಸಹಜ ಸ್ಥಿತಿಗೆ ಬಾರದಿದ್ದರೆ ಹಲವು ಔಷಧಗಳ ಕೊರತೆ ಉಂಟಾಗಲಿದ್ದು, ವ್ಯಾಪಾರ ಸ್ಥಗಿತವಾಗಬಹುದು ಎಂದು ಎಫ್​ಐಸಿಸಿಐ ತಿಳಿಸಿದೆ.
ಆಮದು ಇಲ್ಲದ ಕಾರಣ ಔಷಧಗಳ ಬೆಲೆ ಏರಿಕೆ ಮಾಡಬೇಕಾಗಬಹುದು ಎಂದು ಸಹ ಹೇಳಲಾಗಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 3 =
Remember me
