ನವದೆಹಲಿ:ಸಾಂಪ್ರದಾಯಿಕ ಮೈತ್ರಿಗೆ ವಾಪಸ್ಸಾಗಿ, ಎನ್​ಸಿಪಿ ಮೈತ್ರಿಯಿಂದ ಹೊರಬನ್ನಿ ಎಂದು ಹಲವು ಬಾರಿ ಉದ್ಧವ್​ ಠಾಕ್ರೆ ಅವರಿಗೆ ಮನವಿ ಮಾಡಿದ್ದರೂ ಕೇಳಿರಲಿಲ್ಲ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್​ ಶಿಂಧೆ ಹೇಳಿದ್ದಾರೆ.
ಸಿಎಂ ಆದ ಬಳಿಕ ಇದೇ ಮೊದಲ ಬಾರಿಗೆ ಈ ಹಿಂದಿನ ಸರ್ಕಾರ ಸರ್ಕಾರ ಮುರಿದು ಬೀಳಲು ಕಾರಣವನ್ನು ಬಹಿರಂಗಪಡಿಸಿದ ಶಿಂಧೆ, ಅಘಾಡಿ ಸರ್ಕಾರದಿಂದ ಯಾವೊಬ್ಬ ಶಾಸಕರೂ ಹಾಗೂ ಸಚಿವರಿಗೂ ಇಷ್ಟವಿರಲಿಲ್ಲ ಹಾಗಾಗಿ ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಳ್ಳಿ ಎಂದು ಕೇಳಿಕೊಂಡರೂ ಉದ್ಧವ್​ ಕೇಳಿರಲಿಲ್ಲ ಎಂದಿದ್ದಾರೆ.
ಎನ್​ಸಿಪಿ ಜತೆಗೆ ಸರ್ಕಾರ ರಚನೆಯಾದಾಗಿನಿಂದ ಮೂರ್ನಾಲ್ಕು ಬಾರಿ ಎಲ್ಲಾ ಶಾಸಕರೂ ಒಟ್ಟಿಗೆ ಸೇರಿ ಅವರಲ್ಲಿ ಮನವಿ ಮಾಡಿಕೊಂಡಿದ್ದೆವು. ಆದರೂ ಇದಕ್ಕೆ ಒಪ್ಪದಿರುವುದರಿಂದ ಅವರ ಸರ್ಕಾರ ಬೀಳಲು ಕಾರಣವಾಗಿದೆ ಎಂದು ಹೇಳಿದರು.
ಸಚಿವ ಸಂಪುಟ ವಿಸ್ತರಣೆ ಕುರಿತು ಡಿಸಿಎಂ ದೇವೇಂದ್ರ ಫಡ್ನವಿಸ್​ ಜತೆ ದೆಹಲಿ ಪ್ರವಾಸ ಕೈಗೊಂಡಿರುವ ಶಿಂಧೆ ಅವರು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಈ ಬಳಿಕ ಮಾಧ್ಯಮಗಳಿಗೆ ಅಘಾಡಿ ಸರ್ಕಾರದ ಕುರಿತು ಈ ರೀತಿ ಪ್ರತಿಕ್ರಿಯಿಸಿದ್ದಾರೆ.(ಏಜೆನ್ಸೀಸ್​)
ಮಲೈಕಾ ಬಟ್ಟೆ ನೋಡಿ ಗಾಬರಿಯಾದ ನೆಟ್ಟಿಗರು ಹೇಳಿದ್ದು ಹೀಗೆ?

ನೀರಿನ ಸಮಸ್ಯೆ ಬಗೆಹರಿಸುವರೆಗೂ ಹನಿಮೂನ್​ಗೇ ಹೋಗಲ್ಲ ಎಂದು ಪಟ್ಟು ಹಿಡಿದ ನವದಂಪತಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + thirteen =
Remember me
