ನವದೆಹಲಿ:ನರೇಂದ್ರ ಮೋದಿ ಅವರು ಸತತ ಮೂರನೇ ಬಾರಿಗೆ ದೇಶದ ಪ್ರಧಾನಿಯಾಗಲಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ಭಾನುವಾರ (ಜೂನ್​​ 9) ಸಂಜೆ 7.15ಕ್ಕೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಮೋದಿ ಸಂಪುಟದಲ್ಲಿ ಸ್ಥಾನ ಹಂಚಿಕೆಯತ್ತ ಎಲ್ಲರ ಗಮನವಿದೆ. ಭಾರತೀಯ ಜನತಾ ಪಕ್ಷವು ಲೋಕಸಭೆ ಚುನಾವಣೆಯಲ್ಲಿ 272 ಸ್ಥಾನಗಳೊಂದಿಗೆ ಸಂಪೂರ್ಣ ಬಹುಮತವನ್ನು ಪಡೆಯಲು ವಿಫಲವಾದ ಕಾರಣ, ಅದು ತನ್ನ ಎನ್‌ಡಿಎ ಮಿತ್ರಪಕ್ಷಗಳಾದ ಜೆಡಿಯು ಮತ್ತು ಟಿಡಿಪಿ ಬೆಂಬಲದೊಂದಿಗೆ ಸರ್ಕಾರವನ್ನು ರಚಿಸಲಿದೆ.
ಇದನ್ನು ಓದಿ:ಮೋದಿ 3.0 ಕ್ಯಾಬಿನೆಟ್‌: ಟಿಡಿಪಿ ಎಷ್ಟು ಪಾಲು ಹೊಂದಲಿದೆ, ಯಾವ ಅಭ್ಯರ್ಥಿ ಪ್ರಮಾಣವಚನ ಸ್ವೀಕರಿಸಿಲಿದ್ದಾರೆ ಇಲ್ಲಿದೆ ಕಂಪ್ಲೀಟ್​ ಡಿಟೇಲ್ಸ್​​
ಎನ್‌ಡಿಎ ಮಿತ್ರಪಕ್ಷಗಳ ಹಲವು ನಾಯಕರನ್ನು ಪ್ರಮುಖ ಇಲಾಖೆಗಳಿಗೆ ಪರಿಗಣಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ನೂತನ ಸಚಿವ ಸಂಪುಟದಲ್ಲಿ ಯಾವ್ಯಾವ ಹೆಸರುಗಳು ಸ್ಥಾನ ಪಡೆಯಲಿವೆ ಎಂಬುದರತ್ತ ಎಲ್ಲರ ಕಣ್ಣು ನೆಟ್ಟಿದೆ. ಮೂಲಗಳ ಪ್ರಕಾರ ಅಮಿತ್ ಶಾ ಅವರು ಗೃಹ ಸಚಿವರಾಗಿ, ರಾಜನಾಥ್ ಸಿಂಗ್ ರಕ್ಷಣಾ ಸಚಿವರಾಗಿ ಮತ್ತು ಎಸ್.ಜೈಶಂಕರ್ ವಿದೇಶಾಂಗ ಸಚಿವರಾಗಿ, ಅಶ್ವಿನಿ ವೈಷ್ಣವ್ ರೈಲ್ವೇ ಸಚಿವರಾಗಿ ಮತ್ತು ನಿತಿನ್ ಗಡ್ಕರಿ ಸಾರಿಗೆ ಸಚಿವರಾಗಿ ಉಳಿಯಲಿದ್ದಾರೆ ಎನ್ನಲಾಗಿದೆ.
ಅಲ್ಲದೆ ಜಲಶಕ್ತಿ ಸಚಿವರು ಮತ್ತು ಲೋಕಸಭಾ ಸ್ಪೀಕರ್ ಕೂಡ ಬಿಜೆಪಿಯಿಂದ ಉಳಿಯಬಹುದು. ಟಿಡಿಪಿ ನಗರಾಭಿವೃದ್ಧಿ ಮತ್ತು ನಾಗರಿಕ ವಿಮಾನಯಾನ ಸಚಿವಾಲಯವನ್ನು ಪಡೆಯಬಹುದು. ಜೆಡಿಯುಗೆ ಇಂಧನ ಇಲಾಖೆ, ಗ್ರಾಮೀಣಾಭಿವೃದ್ಧಿ ಸಚಿವಾಲಯ ಸಿಗಬಹುದು ಎಂದು ಹೇಳಲಾಗುತ್ತಿದೆ.
ಇನ್ನು ಪದಗ್ರಹಣ ಸಮಾರಂಭದಲ್ಲಿ ಮೋದಿ ಅವರೊಂದಿಗೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಹರಿಯಾಣದ ಮಾಜಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಮಧ್ಯಪ್ರದೇಶದ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಸಂಪುಟ ಸಚಿವ ಕಿರಣ್ ರಿಜಿಜು, ಲೋಕ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ನಾಯಕ ಚಿರಾಗ್ ಪಾಸ್ವಾನ್, ಹಿಂದೂಸ್ತಾನಿ ಅವಾಮ್ ಮೋರ್ಚಾ ಮುಖ್ಯಸ್ಥ ಜಿತನ್ ರಾಮ್ ಮಾಂಝಿ, ಅಪ್ನಾ ದಳದಿಂದ ಅನುಪ್ರಿಯಾ ಪಟೇಲ್, ಟಿಡಿಪಿಯ ರಾಮಮೋಹನ್ ನಾಯ್ಡು ಪ್ರಮಾಣ ವಚದ ಸ್ವೀಕರಿಸುವ ನಿರೀಕ್ಷೆಯಿದೆ. (ಏಜೆನ್ಸೀಸ್​​)​
ನಿದ್ರಾಹೀನತೆ ಕಾಡ್ತಿದ್ಯಾ.. ಈ ಹಣ್ಣುಗಳನ್ನು ತಿಂದರೆ ಸಮಸ್ಯೆ ನಿವಾರಣೆ ಆಗೋದು ಪಕ್ಕಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 3 =
Remember me
