ಜಿನೀವಾ:ಸಂಘರ್ಷ ಪೀಡಿತ ಅಫ್ಘಾನಿಸ್ತಾನದಲ್ಲಿ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ 32 ಲಕ್ಷ ಮಕ್ಕಳು ಈ ವರ್ಷಾಂತ್ಯದಲ್ಲಿ ಸಾವನ್ನಪು್ಪವ ಸಾಧ್ಯತೆ ಇದೆ. ಈ ಪೈಕಿ 10 ಲಕ್ಷ ಮಕ್ಕಳು ಉಷ್ಣಾಂಶ ಇಳಿಕೆಯಿಂದ ಮೃತಪಡುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್​ಒ) ಶುಕ್ರವಾರ ತಿಳಿಸಿದೆ.
ಅಮೆರಿಕ ಮತ್ತು ಮಿತ್ರಪಡೆಗಳು ಅಫ್ಘನ್ ತೊರೆದು ದೇಶ ತಾಲಿಬಾನ್ ಹಿಡತಕ್ಕೆ ಬರುತ್ತಿದ್ದಂತೆ ಆರ್ಥಿಕ ಪರಿಸ್ಥಿತಿ ಚಿಂತಾಜನಕ ಸ್ಥಿತಿಯಲ್ಲಿದೆ. ಜತೆಗೆ ದೇಶದ ಅನೇಕ ಕಡೆ ಬರ ಆವರಿಸಿದೆ. ಆರೋಗ್ಯ ಸೇವೆಗಳು ಕಠಿಣವಾಗುತ್ತಿವೆ. ಸಿಬ್ಬಂದಿ ವರ್ಗಕ್ಕೆ ವೇತನ ಪಾವತಿ ಆಗುತ್ತಿಲ್ಲ. ರಾತ್ರಿ ಹೊತ್ತಿನ ತಾಪಮಾನ ಶೂನ್ಯಕ್ಕಿಂತ ಕಡಿಮೆ ಆಗಿದೆ. ತಾಪಮಾನ ಕುಸಿತವು ಹಿರಿಯರು ಮತ್ತು ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಚಿಕ್ಕ ಮಕ್ಕಳು ದಡಾರಕ್ಕೆ ತುತ್ತಾಗುತ್ತಿದ್ದಾರೆ. ರೋಗಗಳು ಏರಿಕೆ ಆಗಿದೆೆ. ಈಗಾಗಲೇ 24 ಸಾವಿರ ಮಕ್ಕಳು ಅಪೌಷ್ಟಿಕತೆ ಮತ್ತು ದಡಾರದಿಂದ ಸತ್ತಿರುವುದು ಅಧಿಕೃತವಾಗಿ ವರದಿಯಾಗಿದೆ. ಪರ್ತಕರ್ತೆ ಮಾರ್ಗರೆಟ್ ಹ್ಯಾರಿಸ್ ನೀಡಿದ ಮಾಹಿತಿಯನ್ನು ಆಧರಿಸಿ ಡಬ್ಲ್ಯುಎಚ್​ಒ ಆತಂಕ ವ್ಯಕ್ತಪಡಿಸಿದೆ.
ಅಫ್ಘನ್ ಸಭೆಗೆ ತಾಲಿಬಾನ್ ಸ್ವಾಗತ:ಅಫ್ಘಾನಿಸ್ತಾನದ ಪರಿಸ್ಥಿತಿ ಕುರಿತು ಭಾರತ ಆಯೋಜಿಸಿದ್ದ ಸಭೆಯಲ್ಲಿ 8 ರಾಷ್ಟ್ರಗಳು ಭಾಗಿಯಾಗಿ ರ್ಚಚಿಸಿರುವುದನ್ನು ತಾಲಿಬಾನ್ ಸ್ವಾಗತಿಸಿದೆ. ತನ್ನ ನೆಲವನ್ನು ಯಾರೊಬ್ಬರ ವಿರುದ್ಧವೂ ಬಳಕೆಯಾಗಲು ಅವಕಾಶ ನೀಡುವುದಿಲ್ಲ ಎಂದು ಮತ್ತೆ ಸ್ಪಷ್ಟಪಡಿಸಿದೆ.
ಮಸೀದಿಯಲ್ಲಿ ಬಾಂಬ್ ಸ್ಫೋಟ:ಅಫ್ಘಾನಿಸ್ತಾನದ ರಾಜಧಾನಿ ಕಾಬುಲ್ ಸಮೀಪ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆ ವೇಳೆ ನಡೆದ ಬಾಂಬ್ ಸ್ಪೋಟದಲ್ಲಿ ಕನಿಷ್ಠ ಮೂವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಮಸೀದಿ ಒಳಗೆ ಮೊದಲೇ ಬಾಂಬ್ ಇರಿಸಲಾಗಿತ್ತು. ಪ್ರಾರ್ಥನೆ ವೇಳೆ ಇದು ಸ್ಪೋಟಗೊಂಡಿತು ಎಂದು ತಾಲಿಬಾನ್ ವಕ್ತಾರರು ಹೇಳಿದ್ದಾರೆ.
ಸ್ಫೋಟ ನಡೆದ ಸ್ಥಳದಲ್ಲಿ ಹಲವರ ಮೃತದೇಹ ಬಿದ್ದಿರುವುದು, ಮಸೀದಿಯ ಒಳಭಾಗ ಧ್ವಂಸಗೊಂಡಿರುವ ದೃಶ್ಯಗಳನ್ನು ಸ್ಥಳೀಯರು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ. ಮೃತರ ಸಂಖ್ಯೆ ಇನ್ನೂ ನಿಖರವಾಗಿ ತಿಳಿದುಬಂದಿಲ್ಲ. ಕಳೆದ ಕೆಲ ದಿನಗಳಲ್ಲಿ ನಡೆದ ಐದನೇ ದಾಳಿ ಇದಾಗಿದೆ. ಐಸಿಸ್ ಉಗ್ರ ಸಂಘಟನೆ ಈ ದಾಳಿ ನಡೆಸಿದೆ ಎನ್ನಲಾಗಿದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದಾಗಿನಿಂದ ಐಸಿಸ್ ಜತೆ ಘರ್ಷಣೆ ನಡೆಯುತ್ತಿದೆ. ಈವರೆಗೆ ತಾಲಿಬಾನ್ ಸಂಘಟನೆ 600ಕ್ಕೂ ಅಧಿಕ ಐಸಿಸ್ ಉಗ್ರರು, ಬೆಂಬಲಿಗರನ್ನು ಬಂಧಿಸಿದೆ. ಹಲವರನ್ನು ಹತ್ಯೆ ಮಾಡಿದೆ.
ಡಿಸೆಂಬರ್​​ನ ಈ ದಿನಗಳಲ್ಲಿ ಕತ್ರೀನಾ ಕೈಫ್​ – ವಿಕಿ ಕೌಶಲ್​ ವಿವಾಹ?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − twelve =
Remember me
