ಮುಂಬೈ:ಸೈನಿಕರಿಗೆ ಅಪಮಾನ ಮಾಡುವಂತೆ ವೆಬ್​ ಸಿರೀಸ್​ ‘ತ್ರಿಪಲ್ ಎಕ್ಸ್-2’ ಮಾಡಿರುವ ಆರೋಪ ಹೊತ್ತ ಚಿತ್ರ ನಿರ್ಮಾಪಕಿ ಏಕ್ತಾ ಕಪೂರ್​ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆಯಾಗಿ ಟ್ರೋಲ್​ ಆಗುತ್ತಿದ್ದಾರೆ. ಈ ವೆಬ್​ ಸಿರೀಸ್​ಗೆ ಸಂಬಂಧಿಸಿದಂತೆ ಕಳೆದ ಕೆಲವು ದಿನಗಳಿಂದ ಭಾರಿ ವಿವಾದಕ್ಕೆ ಕೂಡ ಒಳಗಾಗಿದ್ದಾರೆ.
ಈ ವೆಬ್​ ಸೀರೀಸ್​ನಲ್ಲಿ ಸೇನೆಯನ್ನು ಅಪಮಾನ ಮಾಡಿದ್ದು, ಭಾರತೀಯರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಎಫ್‍ಐಆರ್ ಕೂಡ ಇವರ ವಿರುದ್ಧ ದಾಖಲಾಗಿದೆ.
ಇದನ್ನೂ ಓದಿ:ಹಿಂದಿನ ದಿನ ಸಮಾಧಿ ಮಾಡಿದ್ದ ‘ತಂದೆ’ಯ ಶವ ಮರುದಿನ ಆಸ್ಪತ್ರೆಯ ಶವಾಗಾರದಲ್ಲಿ!
ಇದರಿಂದ ನೊಂದು ಮೌನ ಮುರಿದಿರುವ ಏಕತಾ ಕಪೂರ್​, ನಾನು ಭಾರತೀಯ ಸೇನೆಗೆ ಯಾವುದೇ ರೀತಿಯ ಅವಮಾನ ಮಾಡಿಲ್ಲ. ಅವರ ಬಗ್ಗೆ ನನಗೆ ತುಂಬಾ ಗೌರವಿದೆ. ತಿಳಿಯದೇ ಒಂದು ವೇಳೆ ಅವಮಾನ ಮಾಡಿದ್ದರೆ ಕ್ಷಮೆ ಕೋರುತ್ತೇನೆ. ನನಗೆ ಭಾರತೀಯ ಸೇನೆಗೆ ಕ್ಷಮೆ ಕೇಳಲು ಯಾವುದೇ ಹಿಂಜರಿಕೆ ಇಲ್ಲ ಎಂದಿದ್ದಾರೆ.
ಈಗಾಗಲೇ ವೆಬ್ ಸೀರೀಸ್​ನಲ್ಲಿ ವಿವಾದಾತ್ಮಕ ಎನ್ನಲಾದ ದೃಶ್ಯಗಳಿಗೆ ಕತ್ತರಿ ಹಾಕಲಾಗಿದೆ ಎಂದು ಸ್ಪಷ್ಟಪಡಿಸಿರುವ ಅವರು, ವೆಬ್ ಸೀರೀಸ್​ನಲ್ಲಿರೋದು ಕೇವಲ ಒಂದು ಕಾಲ್ಪನಿಕ ಪಾತ್ರ. ಈ ಪಾತ್ರ ಸೃಷ್ಟಿಸಿದ್ದು ತಪ್ಪು. ಹಾಗಾಗಿ ತಪ್ಪನ್ನು ಒಪ್ಪಿಕೊಂಡು ವಿವಾದಾತ್ಮಕ ದೃಶ್ಯಗಳನ್ನು ತೆಗೆದಿದ್ದೇನೆ ಎಂದಿದ್ದಾರೆ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಿರೋದರಿಂದ ನನಗೆ ಬೇಸರವಾಗಿದೆ ಎಂದಿದ್ದಾರೆ.
ಇದನ್ನೂ ಓದಿ:ಖರ್ಗೆ ನಾಮಪತ್ರ- ಜೆಡಿಎಸ್​ ಬೆಂಬಲದ ವಿಚಾರದ ಕುರಿತು ನಾಯಕರು ಹೇಳಿದ್ದೇನು?
ಟ್ರೋಲಿಗರಿಗೆ ತಿರುಗೇಟು ನೀಡಿರುವ ಏಕತಾ ಕಪೂರ್​, ‘ಭಾರತೀಯ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಿ ಕೆಲ ವ್ಯಕ್ತಿಗಳು. ಹೋರಾಟಗಾರರು ಎಂದು ಹೇಳಿಕೊಳ್ಳುತ್ತಿರುವವರು ನನ್ನನ್ನು ಮತ್ತು ನನ್ನ ತಾಯಿಯನ್ನು ಅವಾಚ್ಯ ಪದಗಳಿಂದ ನಿಂದಿಸುತ್ತಿದ್ದಾರೆ. ಇಬ್ಬರಿಗೂ ಅತ್ಯಾಚಾರದ ಬೆದರಿಕೆ ಒಡ್ಡುತ್ತಿದ್ದಾರೆ. ಧಾರ್ಮಿಕ ಭಾವನೆಗಳಿಂದ ಧಕ್ಕೆ ತಂದಿದ್ದೇನೆ ಎಂದು ಹೀಗೆಲ್ಲಾ ನಮ್ಮ ಮೇಲೆ ಬೆದರಿಕೆ ಹಾಕುವವರಿಗೆ ನನ್ನದೊಂದು ಪ್ರಶ್ನೆ. ವೆಬ್​ ಸಿರೀಸ್​ನಲ್ಲಿ ಸೆಕ್ಸ್​ ಬಗ್ಗೆ ಇದೆ ಎಂದು ಹೇಳುವ ನೀವು, ಇದೀಗ ರೇಪ್​ ಬೆದರಿಕೆ ಹಾಕುತ್ತಿದ್ದೀರಲ್ಲಾ. ಹಾಗಿದ್ದರೆ ಸೆಕ್ಸ್​ಗಿಂತ ರೇಪ್​ ಒಳ್ಳೆಯದಾ? ಎಂದು ಪ್ರಶ್ನಿಸಿದ್ದಾರೆ.(ಏಜೆನ್ಸೀಸ್​).
ಕರೊನಾದ ಬಗ್ಗೆ ಬಾಯಿ ಬಿಟ್ಟ ಚೀನಾ ಶ್ವೇತ ಪತ್ರ ಬಿಡುಗಡೆ ಮಾಡಿ ಹೇಳಿದ್ದೇನು?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 − one =
Remember me
