ನವದೆಹಲಿ:ಜಿಹಾದಿಗಳ ಜಹಗೀರು ಆಗಿ ಮಾರ್ಪಟ್ಟಿರುವ ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ಲೈಂಗಿಕ ಜೀತಪದ್ಧತಿ ಜೋರಾಗಿದೆ. ಇಲ್ಲಿ ಕಾರ್ಯಾಚರಿಸುತ್ತಿರುವ ಬಹುತೇಕ ಭಯೋತ್ಪಾದನಾ ಸಂಘಟನೆಗಳು ವೇಶ್ಯಾವಾಟಿಕೆಯ ಮೂಲಕವೇ ಹಣ ಸಂಗ್ರಹಿಸುತ್ತಿರುವುದಾಗಿ ಯುನೈಟೆಡ್​ ಕಾಶ್ಮೀರ ಪೀಪಲ್ಸ್​ ನ್ಯಾಷನಲ್​ ಪಾರ್ಟಿಯ ವಕ್ತಾರ ನಾಸೀರ್​ ಅಜೀಜ್​ ಖಾನ್​ ಆರೋಪಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಸ್ವಾತಂತ್ರ್ಯದ ಹೋರಾಟದ ನೆಪದಲ್ಲಿ ಹಿಂಸಾಚಾರದಲ್ಲಿ ತೊಡಗಿರುವ ಉಗ್ರರು ಕಾಶ್ಮೀರಿ ಮಹಿಳೆಯರನ್ನು ಲೈಂಗಿಕ ಜೀತದಾಳುಗಳನ್ನಾಗಿ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ.
ಕಾಶ್ಮೀರದ ಉಗ್ರರ ಅಡಗುದಾಣದ ಮೇಲೆ ಭಾರತೀಯ ಭದ್ರತಾಪಡೆ ಸಿಬ್ಬಂದಿ ನಡೆಸಿದ್ದ ದಾಳಿಯಲ್ಲಿ ಸ್ಟಿರಾಯ್ಡ್​ಗಳು, ಲೈಂಗಿಕ ಸಾಮರ್ಥ್ಯ ಹೆಚ್ಚಿಸುವ ಮಾತ್ರೆಗಳು, ನಿರೋಧ್​ ಮತ್ತು ನೀಲಿಚಿತ್ರಗಳು ಪತ್ತೆಯಾಗಿದ್ದವು.
ಜೈಷ್​ ಎ ಮೊಹಮ್ಮದ್​ ಭಯೋತ್ಪಾದನಾ ಸಂಘಟನೆಯ ಉಗ್ರನಿಂದ ಅತ್ಯಾಚಾರಕ್ಕೆ ಒಳಗಾಗಿದ್ದ ಮಹಿಳೆ, ಹಾಡಹಗಲೇ ತನ್ನನ್ನು ತನ್ನ ಮನೆಯಿಂದ ಅಪಹರಿಸಿದ್ದ ಉಗ್ರರು ನಿರಂತರವಾಗಿ ಅತ್ಯಾಚಾರ ಎಸಗಿದ್ದಾಗಿ ದೂರಿದ್ದರು.
ನಾಯಿಗೂಡಿನಂತ ಬಂಕರ್​ಗಳಲ್ಲೇ ಅತ್ಯಾಚಾರ: ಪಿಒಕೆಯಲ್ಲಿ ಯೋಧರ ಭದ್ರತೆಗಾಗಿ ನಿರ್ಮಿಸಲಾಗಿರುವ ನಾಯಿಗೂಡುಗಳಂಥ ಬಂಕರ್​ಗಳಲ್ಲೇ ಉಗ್ರರು ಮಹಿಳೆಯರ ಮೇಲೆ ಅತ್ಯಾಚಾರ ಎಸಗುತ್ತಾರೆ ಎಂದು ಪಿಒಕೆಯ ಪ್ರತ್ರಕರ್ತ ಜಲಾಲುದ್ದೀನ್​ ಮುಘಲ್​ ಈ ಹಿಂದೆ ವರದಿ ಮಾಡಿದ್ದರು.
ಇದನ್ನೂ ಓದಿ:VIDEO| ಪಾಕ್​ ಧ್ವಜ ಧರಿಸಿ ಭಾರತ ಬಾವುಟ ಕಾಲಲ್ಲಿ ಮೆಟ್ಟಿ ನಿಂತಿರುವ ಈ ದ್ರೋಹಿ ಯಾರು?
ಇಸ್ಲಾಮಿಕ್​ ರಿಲೀಫ್​ ಫೌಂಡೇಷನ್​ ಎಂಬ ಸಂಸ್ಥೆ 1990ರ ದಶಕದಲ್ಲಿ ಈ ಬಂಕರ್​ಗಳನ್ನು ನಿರ್ಮಿಸಿತ್ತು ಎನ್ನಲಾಗಿದೆ. ಪಾಕ್​ ಸೇನಾಪಡೆಯ ಅಪ್ರಚೋದಿತ ಗುಂಡಿನ ದಾಳಿಗೆ ಭಾರತೀಯ ಸೇನಾಪಡೆ ಪ್ರತಿಯಾಗಿ ನಡೆಸುವ ಗುಂಡಿನ ದಾಳಿಯಿಂದ ಬಚಾವಾಗಲು ಸ್ಥಳೀಯರು ರಾತ್ರಿಯ ವೇಳೆ ಈ ಬಂಕರ್​ಗಳನ್ನೇ ಆಶ್ರಯಿಸುತ್ತಾರೆ ಎನ್ನಲಾಗಿದೆ.
ಈ ಸಂದರ್ಭವನ್ನು ಬಳಸಿಕೊಂಡು ಈ ಪ್ರದೇಶದಲ್ಲಿ ಭದ್ರತೆಗಾಗಿ ನಿಯೋಜನೆಗೊಂಡಿರುವ ಪಾಕ್​ನ ಸೇನಾಪಡೆ ಸಿಬ್ಬಂದಿ ಮತ್ತು ಅಲ್ಲಿಂದ ಕಾರ್ಯಾಚರಿಸುವ ಉಗ್ರರು ಆ ಮಹಿಳೆಯರ ಮೇಲೆ ಅತ್ಯಾಚಾರ ಎಸಗುತ್ತಾರೆ. ಯೋಧರು ಎಂಬ ಕಾರಣಕ್ಕೆ ಪಾಕ್​ ಸೇನಾಪಡೆ ಸಿಬ್ಬಂದಿ ವಿರುದ್ಧ ಯಾವುದೇ ಪ್ರಕರಣ ದಾಖಲಾಗುವುದಿಲ್ಲ. ಉಗ್ರರ ಪ್ರಾಣಬೆದರಿಕೆಯಿಂದಾಗಿ ಅವರ ವಿರುದ್ಧವೂ ಪೊಲೀಸರಿಗೆ ದೂರು ಕೊಡಲು ಜನರು ಹಿಂದೇಟು ಹಾಕುತ್ತಾರೆ ಎನ್ನಲಾಗಿದೆ.
ಭಾರತ ಆಯ್ತು, ಈಗ ಅಮೆರಿಕದಿಂದಲೂ ಚೀನಾ ಆ್ಯಪ್​ಗಳ ಕಿಕ್​ಔಟ್​?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 20 =
Remember me
