ಪುಣೆ :ಮಹಾರಾಷ್ಟ್ರದ ಪುಣೆಯ ಬುಧವಾರ್​​ ಪೇಟ್​ ರೆಡ್​ ಲೈಟ್​ ಏರಿಯಾದಲ್ಲಿ ಮೂರು ದಿನಗಳ ಮುಂಚೆ ನಡೆದ ವೇಶ್ಯೆಯೊಬ್ಬಳ ಕೊಲೆ ಪ್ರಕರಣದಲ್ಲಿ ಪೊಲೀಸರು ತನಿಖೆ ಪೂರೈಸಿದ್ದಾರೆ. ಮೊಹಮ್ಮದ್​​ ಬಹರುಲ್​ ಹಖ್​ ಎಂಬುವ ವ್ಯಕ್ತಿಯು ಈ ಕೊಲೆ ಮಾಡಿದ್ದು, ಅಸ್ಸಾಂಗೆ ಪರಾರಿಯಾಗುವ ಸಿದ್ಧತೆಯಲ್ಲಿದ್ದ ಎನ್ನಲಾಗಿದೆ.
ಮೇ 5 ರ ಬೆಳಗಿನ ಜಾವ 23 ವರ್ಷದ ರಾಣಿ ಶೇಖ್​ ಎಂಬುವಳ ಮೇಲೆ ಅವಳ ಮನೆಯಲ್ಲೇ ಚೂಪಾದ ಚಾಕುವಿನಿಂದ ಹಲ್ಲೆ ನಡೆಸಲಾಗಿತ್ತು. ಅವಳ ಹೊಟ್ಟೆ, ಎದೆ ಮತ್ತು ಕೈಗಳ ಮೇಲೆ ಮಾರಣಾಂತಿಕ ಗಾಯಗಳಾಗಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದಳು ಎನ್ನಲಾಗಿದೆ.
ಇದನ್ನೂ ಓದಿ:ಅಸ್ಸಾಂನ ಹೊಸ ಮುಖ್ಯಮಂತ್ರಿಯಾಗಿ ಹಿಮಂತ ಬಿಸ್ವ ಸರ್ಮ ಆಯ್ಕೆ
ಈ ಕೊಲೆಯ ತನಿಖೆ ಕೈಗೆತ್ತಿಕೊಂಡ ಫರಕ್ಷಣ ಠಾಣೆ ಪೊಲೀಸರು ವೇಷ್ಯಾಗೃಹದ ಬಳಿಯ ಸೆಕ್ಯುರಿಟಿ ಕ್ಯಾಮರಾದ ಫೂಟೇಜನ್ನು ಪರಿಶೀಲಿಸಿದ ನಂತರ ಆರೋಪಿಯನ್ನು ಮೊಹಮ್ಮದ್ ಬಹರುಲ್​ ಹಖ್​ ಎಂದು ಗುರುತಿಸಿದ್ದರು. ಇಂದು ಪಿಂಪ್ರಿ-ಚಿಂಚವಾಡದ ಪವನೇಶ್ವರ್ ಸೇತುವೆಯ ಬಳಿ ಅಡಗಿ ಕುಳಿತಿದ್ದ ಹಖ್​ ಬಗ್ಗೆ ಸುಳಿವು ಸಿಕ್ಕಿದ್ದು, ಆತ ನಗರವನ್ನು ಬಿಟ್ಟು ಓಡಿಹೋಗುವ ಪ್ರಯತ್ನದಲ್ಲಿರುವಾಗ ಪೊಲೀಸರು ಬಂಧಿಸಿದ್ದಾರೆ.
ಹಖ್​ಗೆ ಕೆಲವು ಸಮಯದಿಂದ ಮೃತ ರಾಣಿ ಶೇಖ್​ಳ ಪರಿಚಯವಿತ್ತು. ಕಳೆದ ತಿಂಗಳು ಹಣದ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿತ್ತು ಎಂದು ವಿಚಾರಣೆಯ ವೇಳೆ ತಿಳಿದುಬಂದಿದೆ.(ಏಜೆನ್ಸೀಸ್)
ಕಲಾವಿದರಿಗೆ ಫುಡ್​ ಕಿಟ್​ ವಿತರಿಸಿದ ಲೀಲಾವತಿ, ವಿನೋದ್​ರಾಜ್​

ಹಿಂದೂ ಮಹಾಸಾಗರಕ್ಕೆ ಬಿದ್ದ ಚೀನಾ ರಾಕೆಟ್​ ಅವಶೇಷ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × one =
Remember me
