ಕೊಚ್ಚಿ:ಕೋವಿಡ್​-19 ಲಾಕ್​ಡೌನ್​ ಮತ್ತು ಅನ್​ಲಾಕ್​ 1.0 ಅವಧಿಯಲ್ಲಿ ಸೆಕ್ಸ್​ ವರ್ಕರ್ಸ್​ ತೀವ್ರ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ದಿನನಿತ್ಯ ತಮ್ಮಲ್ಲಿಗೆ ಬರುತ್ತಿದ್ದ ಗ್ರಾಹಕರಿಂದ ಕೈತುಂಬಾ ಸಂಪಾದಿಸುತ್ತಿದ್ದ ಅವರು ಇಂದು ಬದುಕಿಗೆ ಆಶ್ರಯ ಸಿಕ್ಕರೆ ಸಾಕೆಂದು ಪರದಾಡುತ್ತಿದ್ದಾರೆ.
ಇಂಥ ಸಂದರ್ಭದಲ್ಲೇ ಸೆಕ್ಸ್​ ವರ್ಕರ್ಸ್​ ತಮ್ಮದೇ ಆದ ರೀತಿಯಲ್ಲಿ ದುಡಿಮೆಯ ಮಾರ್ಗ ಕಂಡುಕೊಂಡಿದ್ದಾರೆ. ಅದುವೇ ವರ್ಚುಯಲ್​ ಮಾರ್ಗವಾಗಿದೆ. ತಮ್ಮನ್ನು ಸಂಪರ್ಕಿಸುವ ಗ್ರಾಹಕರಿಂದ ಡಿಜಿಟಲ್​ ಪೇಮೆಂಟ್​ ಆ್ಯಪ್ಸ್​ ಮೂಲಕ ಹಣ ಪಡೆದುಕೊಂಡು, ವಿಡಿಯೋ ಕಾಲ್​ಗಳ ಮೂಲಕ ಲೈಂಗಿಕ ಉದ್ರೇಕಕಾರಿ ವರ್ತನೆಯನ್ನು ಪ್ರದರ್ಶಿಸಿ, ಲೈಂಗಿಕ ತೃಷೆ ಇಂಗಿಸುತ್ತಿದ್ದಾರೆ.
ಇದನ್ನೂ ಓದಿ:ಪಾಕ್​ ಅಧ್ಯಕ್ಷರ ಭವನದಲ್ಲಿ ಅಮೆರಿಕದ ಮಹಿಳೆ ಮೇಲೆ ಅತ್ಯಾಚಾರ
ಈ ದೃಶ್ಯಗಳನ್ನು ನೋಡಲು ಗ್ರಾಹಕರು ಪುಡಿಗಾಸನ್ನು ಖರ್ಚು ಮಾಡಲು ಹಿಂಜರಿಯುವುದಿಲ್ಲ. ಒಬ್ಬೊಬ್ಬ ಗ್ರಾಹಕನಿಂದ 100 ಅಥವಾ 200 ರೂಪಾಯಿ ಪಡೆದು, ವಿಡಿಯೋ ಕಾಲ್​ ಮೂಲಕ ಲೈಂಗಿಕ ಉದ್ರೇಕಕಾರಿ ವರ್ತನೆ ಪ್ರದರ್ಶಿಸುತ್ತೇವೆ ಎಂದು ವರ್ಚುಯಲ್​ ಸೆಕ್ಸ್​ ಮೂಲಕ ಹಣ ಸಂಪಾದಿಸುತ್ತಿರುವ ಸೆಕ್ಸ್​ ವರ್ಕರ್​ ಒಬ್ಬರು ತಿಳಿಸಿದ್ದಾರೆ.
ಇದು ಕೇರಳದ ಸೆಕ್ಸ್​ ವರ್ಕರ್ಸ್​ನ ಕತೆಯಾಗಿದೆ. 2018ರ ಅಧ್ಯಯನದ ಪ್ರಕಾರ ಕೇರಳದಲ್ಲಿ 15,802 ಮಹಿಳೆಯರು ಮತ್ತು 11,707 ಪುರುಷರು ಸೆಕ್ಸ್​ ವರ್ಕ್​ನಲ್ಲಿ ತೊಡಗಿಕೊಂಡಿದ್ದಾರೆ. ಇವರಲ್ಲಿ ಬಹುತೇಕರು ತುಂಬಾ ಹಿಂದುಳಿದ ವರ್ಗಗಳಿಗೆ ಸೇರಿದವರಾಗಿದ್ದಾರೆ. ಇವರ ಬಳಿ ಸ್ಮಾರ್ಟ್​ಫೋನ್​ ಕೂಡ ಇಲ್ಲ. ಆದರೆ, ಸ್ಮಾರ್ಟ್​ಫೋನ್​ ಹೊಂದಿದ್ದವರು ವರ್ಚುಯಲ್​ ಸೆಕ್ಸ್​ ವರ್ಕ್​ನತ್ತ ಹೊರಳಿದ್ದಾರೆ. ಇದರಿಂದ ಬರುವ ಸಣ್ಣಪುಟ್ಟ ಆದಾಯದೊಂದಿಗೆ ಕೋವಿಡ್​-19 ಸಂಕಷ್ಟ ಸಮಯದಲ್ಲಿ ಜೀವನಸಾಗಿಸುತ್ತಿದ್ದಾರೆ ಎಂದು ಸೆಕ್ಸ್​ ವರ್ಕರ್​ ಒಬ್ಬರು ಹೇಳಿದ್ದಾರೆ.
ಲಾಕ್​ಡೌನ್ ಮಧ್ಯೆಯೂ ವಾಕಿಂಗ್​​ಗೆ ಮುದ್ದು ನಾಯಿಯನ್ನು ಕರೆದೊಯ್ಯಬಹುದು…..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 19 =
Remember me
