ಚೆನ್ನೈ:ಹದಿನಾರು ವರ್ಷದ ಬಾಲಕಿಗೆ ಲವ್​ ಲೆಟರ್​ ನೀಡಿದ ಆರೋಪದ ಮೇಲೆ 66 ವರ್ಷದ ವೃದ್ಧನನ್ನು ಕೊಯಮತ್ತೂರು ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಆರೋಪಿಯನ್ನು ಮೊಹಮ್ಮದ್​ ಬಹಿರ್​ ಭಾಷಾ ಎಂದು ಗುರುತಿಸಲಾಗಿದೆ. ತನ್ನ ನೆರೆಮನೆಯ ಬಾಲಕಿಗೆ ಲವ್​ ಲೆಟರ್​ ನೀಡಿದ ಆರೋಪಿ, ಅದರಲ್ಲಿ ನಾನು ನಿನ್ನನ್ನು ಇಷ್ಟಪಡುತ್ತಿದ್ದೇನೆ. ನಿನಗೆ ಒಪ್ಪಿಗೆಯೇ ಎಂದು ಬರೆಯಲಾಗಿತ್ತೆಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಇನ್​ಸ್ಟಾಗ್ರಾಂ ಮಿತ್ರನಿಗಾಗಿ ಮನೆ ಬಿಟ್ಟ ಬಾಲಕಿ: ಬಲೆಗೆ ಬೀಳುವಷ್ಟರಲ್ಲಿ ಬಚಾವ್​ ಆಗಿದ್ಹೇಗೆ?
ಆರೋಪಿ ಕೊಟ್ಟ ಪತ್ರವನ್ನು ತನ್ನ ಮನೆಗೆ ತೆಗೆದುಕೊಂಡು ಹೋದ ಬಾಲಕಿ ತಂದೆ-ತಾಯಿಗೆ ನೀಡಿ, ಘಟನೆಯನ್ನು ವಿವರಿಸಿದ್ದಾಳೆ. ಪತ್ರವನ್ನು ನೋಡಿ ಆಕ್ರೋಶಗೊಂಡ ಬಾಲಕಿ ಕುಟುಂಬ ತಕ್ಷಣ ಆರೋಪಿ ಭಾಷಾ ಕುಟುಂಬಕ್ಕೆ ಮಾಹಿತಿ ಮುಟ್ಟಿಸಿದ್ದಾರೆ. ಯಾವುದೇ ದೂರು ನೀಡಬೇಡಿ ಎಂದು ಬೇಡಿಕೊಂಡು, ಆರೋಪಿಯಿಂದ ಕ್ಷಮೆ ಕೇಳಿಸುವುದಾಗಿ ಭಾಷಾ ಕುಟುಂಬ ಹೇಳಿದೆ.
ಇಷ್ಟಕ್ಕೆ ಸುಮ್ಮನಾಗದ ಭಾಷಾ ಮತ್ತೆ ಬಾಲಕಿಗೆ ತನ್ನ ಪ್ರೇಮ ನಿವೇದನೆ ಮಾಡಿಕೊಂಡು ಬೆದರಿಕೆಯನ್ನೂ ಹಾಕಿದ್ದಾನೆ. ಇದರಿಂದ ಹೆದರಿದ ಬಾಲಕಿ ಮತ್ತೆ ತನ್ನ ಪಾಲಕರಿಗೆ ವಿಷಯ ಮುಟ್ಟಿಸಿದ್ದಾಳೆ. ಇನ್ನು ಸುಮ್ಮನಾದರೇ ಸರಿಹೋಗುವುದಿಲ್ಲ ಎಂದರಿತ ಬಾಲಕಿ ಕುಟುಂಬ ನೇರವಾಗಿ ಪೊಲೀಸ್​ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
ಇದನ್ನೂ ಓದಿ:ಮದುವೆಗೆ 4 ದಿನ‌ ಇರುವಾಗ್ಲೇ ಭಾವನಿಂದಲೇ ಮದುಮಗಳ ಹತ್ಯೆ: ಆರೋಪಿಯ ನಾಟಕ ಕೇಳಿದ್ರೆ ಶಾಕ್​ ಆಗ್ತೀರಾ!
ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಭಾಷಾನನ್ನು ಬಂಧಿಸಿ ಜೈಲಿಗಟ್ಟಿರುವುದಾಗಿ ಕೊಯಮತ್ತೂರು ಪೊಲೀಸರು ಮಾಹಿತಿ ನೀಡಿದ್ದಾರೆ.(ಏಜೆನ್ಸೀಸ್​)
VIDEO| ಐದು ಪಲ್ಟಿ ಹೊಡೆದ ಕಾರು: ಇಬ್ಬರ ದುರ್ಮರಣ, ಸಿಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × five =
Remember me
