ಅಹಮದಾಬಾದ್:14 ವರ್ಷದ ಬಾಲಕ ವೈದ್ಯ ಎಂದು ಹೇಳಿಕೊಂಡ ವ್ಯಕ್ತಿಯಿಂದ ಲೈಂಗಿಕ ಕಿರುಕುಳ ಅನುಭವಿಸಿರುವುದಾಗಿ ಆರೋಪಿಸಿದ್ದು, ಆರೋಪಿಯ ವಿರುದ್ಧ ಎಫ್​ಐಆರ್ ದಾಖಲಾಗಿದೆ.ಗುಜರಾತ್‌ನ ಭಾವನಗರದ COVID-19 ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಜುಲೈ 1 ರಂದು ಬಾಲಕ ಮತ್ತು ಅವನ ತಾಯಿ ಭಾವನಗರದಲ್ಲಿರುವ ಅಜ್ಜ ಮನೆಗೆ ಹೋಗುತ್ತಿದ್ದರು. ಮಾರ್ಗ ಮಧ್ಯೆ ಆತನ ತಾಯಿಗೆ ದೈಹಿಕ ಉಷ್ಣತೆ ಹೆಚ್ಚಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಆಕೆಯನ್ನು ಪರೀಕ್ಷಿಸಿದಾಗ ಸೋಂಕು ದೃಢಪಟ್ಟಿದ್ದು, ಆಕೆಯನ್ನು ಪ್ರತ್ಯೇಕ ವಾರ್ಡ್‌ನಲ್ಲಿ ಇರಿಸಲಾಯಿತ್ತು. ಜುಲೈ 4 ರಂದು ಮಧ್ಯಾಹ್ನ ಮಹಿಳೆಯ ಸ್ಥಿತಿ ಹದಗೆಟ್ಟಿತು ಮತ್ತು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬಾಲಕನ ತಾಯಿಯನ್ನು ಕೇಂದ್ರದ ಒಂದು ಪ್ರತ್ಯೇಕ ಕೋಣೆಯಲ್ಲಿ ದಾಖಲಿಸಲಾಗಿತ್ತು. ಬಾಲಕ ಅಲ್ಲಿ ಭೇಟಿ ನೀಡುತ್ತಿದ್ದ.ಜುಲೈ 4 ರಂದು ಆಸ್ಪತ್ರೆಯ ಕೋಣೆಯೊಂದರಲ್ಲಿ ಹುಡುಗ ಒಬ್ಬನೇ ಇರುವಾಗ ಅಪರಿಚಿತ ವ್ಯಕ್ತಿಯೊಬ್ಬ ಬಂದ. ಬಿಳಿ ಶರ್ಟ್ ಮತ್ತು ಮಾಸ್ಕ್ ಧರಿಸಿದ್ದ ಆ ವ್ಯಕ್ತಿ ತನ್ನನ್ನು ವೈದ್ಯ ಎಂದು ಪರಿಚಯಿಸಿಕೊಂಡ.
ಇದನ್ನೂ ಓದಿ:ಬಾರದ ಆಂಬ್ಯುಲೆನ್ಸ್‌- ಬುಟ್ಟಿಯಲ್ಲಿ ತುಂಬುಗರ್ಭಿಣಿಯ ಹೊತ್ತೊಯ್ದರು!
ಬಾಲಕನ ನಾಡಿಮಿಡಿತವನ್ನು ಪರೀಕ್ಷಿಸುವುದಾಗಿ ಹೇಳಿದ. ಅದೇ ನೆಪದಲ್ಲಿ ಅವನೊಂದಿಗೆ ಅನುಚಿತವಾಗಿ ವರ್ತಿಸಿದ. ಆ ಹುಡುಗನಿಗೆ ಬಟ್ಟೆ ಬಿಚ್ಚಿ ನೆಲದ ಮೇಲೆ ಮಲಗಲು ಆರೋಪಿ ಹೇಳಿ ನಂತರ ಆತನ ಮೇಲೆ ಬಲವಂತವಾಗಿ ಮಲಗಿದ ಎಂದು ಆರೋಪಿಸಲಾಗಿದೆ.ಆರೋಪಿಯ ವಿರುದ್ಧ ಲೈಂಗಿಕ ಅಪರಾಧಗಳ ವಿರುದ್ಧ ಮಕ್ಕಳ ರಕ್ಷಣೆ (ಪೊಕ್ಸೊ) ಕಾಯ್ದೆಯ ಸೆಕ್ಷನ್ 12ರ ಅಡಿ ನೀಲಮ್ ಬಾಗ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಅಮೆರಿಕದ ಪ್ರಥಮ ಪ್ರಜೆ ಪತ್ನಿ ಮೆಲೇನಿಯಾ ಟ್ರಂಪ್​ ಮರದ ಪ್ರತಿಮೆ ದಹನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 1 =
Remember me
