ಸಂತನ್‌ಕುಲಂ (ತಮಿಳುನಾಡು):ಇದೇ 23ರಂದು ತಮಿಳುನಾಡಿನ ಸಂತನ್‌ಕುಲಂ ಪೊಲೀಸ್ ಕಸ್ಟಡಿಯಲ್ಲಿದ್ದ ತಂದೆ ಹಾಗೂ ಮಗ ಮೃತಪಟ್ಟಿರುವ ಘಟನೆಗೆ ಸಂಬಂಧಿಸಿದಂತೆ ಇದೀಗ ಭಯಾನಕ ಸತ್ಯವೊಂದು ಹೊರಬಿದ್ದಿದೆ.
ಲಾಕ್’ಡೌನ್ ನಿಯಮ ಉಲ್ಲಂಘಿನೆ ಮಾಡಿದ ಆರೋಪದ ಮೇಲೆ ಪಿ.ಜಯರಾಜ್ (63) ಹಾಗೂ ಜೆ ಬೆನಿಕ್ಸ್‌ (31) ತಂದೆ ಮತ್ತು ಮಗನನ್ನು ಪೊಲೀಸರು ಬಂಧಿಸಿದ್ದರು.ಜಯರಾಜ್ ಅವರು ಮರದ ವ್ಯಾಪಾರಿಯಾಗಿದ್ದು, ಜೂನ್.19ರಂದು ರಾತ್ರಿ 9 ಗಂಟೆಯ ನಂತರವೂ ಅಂಗಡಿ ತೆರೆದಿದ್ದ ಕಾರಣ ಪೊಲೀಸರು ಜಯರಾಜ್ ಅವರನ್ನು ವಶಕ್ಕೆ ಪಡೆದುಕೊಂಡು ಠಾಣೆಯಲ್ಲಿರಿಸಿಕೊಂಡಿದ್ದರು. ಬೆನಿಕ್ಸ್‌ ಮೊಬೈಲ್ ಅಂಗಡಿ ನಡೆಸುತ್ತಿದ್ದರು. ತಂದೆಯನ್ನು ಬಿಡುಗಡೆ ಮಾಡುವಂತೆ ಪೊಲೀಸ್ ಠಾಣೆಗೆ ತೆರಳಿದ್ದಾಗ ನಡೆದ ಮಾತಿನ ಚಕಮಕಿಯಲ್ಲಿ ಅವರನ್ನೂ ಪೊಲೀಸರು ಬಂಧಿಸಿದ್ದರು.
ಇಬ್ಬರನ್ನೂ ಪೊಲೀಸರು ಹಿಗ್ಗಾಮುಗ್ಗಾ ಥಳಿಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.
ಇದಿಷ್ಟು ಅಂದು ನಡೆದ ಘಟನೆಗೆ ಸಂಬಂಧಿಸಿದ ಮಾಹಿತಿಯಾಯಿತು. ಅದರೆ ಇದರ ಬೆನ್ನಟ್ಟಿ ಹೋದಾಗ ಇದೀಗ ಭಯಾನಕ ಸತ್ಯ ಹೊರಬಂದಿದೆ. ಈ ಕುರಿತು ಮಾತನಾಡಿದ ಬೆನಿಕ್ಸ್‌ನ ಸ್ನೇಹಿತ ರಾಜ್‌ಕುಮಾರ್, ಇವರಿಬ್ಬರನ್ನೂ ಆಸ್ಪತ್ರೆಗೆ ಸೇರಿಸುವವರೆಗೂ ಅವರ ಮೇಲೆ ಲೈಂಗಿಕ ದೌರ್ಜನ್ಯವಾಗಿರುವ ವಿಷಯ ಅವರಿಗೆ ತಿಳಿದೇ ಇರಲಿಲ್ಲ. ಆದರೆ ಆ ಭಾಗದಲ್ಲಿ ಸಹಿಸಿಕೊಳ್ಳಲಾಗದ ನೋವು ಉಂಟಾಗುತ್ತಿದೆ ಎಂದು ಹೇಳಿದಾಗ ಆ ಸ್ಥಳವನ್ನು ಪರಿಶೀಲಿಸಿದೆವು. ಅಲ್ಲಿಂದ ರಕ್ತ ಒಸರುತ್ತಿತ್ತು. ರಕ್ತ ಹೊರಕ್ಕೆ ಬಾರದಂತೆ ಪೊಲೀಸರು ಅವರನ್ನು ಬಟ್ಟೆಯಿಂದ ಮುಚ್ಚಿದ್ದರು ಎಂದು ರಾಜ್‌ಕುಮಾರ್‌ ವಿವರಿಸುತ್ತಾರೆ.
ಇದನ್ನೂ ಓದಿ:ಬೈಕ್​ ಮೇಲೆ ಮಲಗಿರುವ ರೀತಿ ಮೃತ ದೇಹ ಪತ್ತೆ: ಮ.ಬೆಟ್ಟದ ರಸ್ತೆಯಲ್ಲಿ ಶಾಕಿಂಗ್​ ಘಟನೆ
ಅವರ ಗುದನಾಳದಿಂದ ರಕ್ತ ಸೋರುತ್ತಿತ್ತು. ನಾವು ತಕ್ಷಣ ಅವರಿಗೆ ಲುಂಗಿ ನೀಡಿ ಕಾರಿನ ಸೀಟಿನ ಮೇಲೆ ದಪ್ಪವಾದ ಹತ್ತಿ ಬಟ್ಟೆಯನ್ನು ಹರಡಿದೆವು, ಇದರಿಂದ ರಕ್ತ ಸೋರುವುದನ್ನು ನಿಲ್ಲಿಸುವುದು ನಮ್ಮ ಉದ್ದೇಶವಾಗಿತ್ತು. ಆದರೆ ಆಸ್ಪತ್ರೆ ತಲುಪುವ ಮೊದಲೇ ರಕ್ತದ ಕಾರಣದಿಂದಾಗಿ ಲುಂಗಿಗಳೂ ಒದ್ದೆಯಾದವು. ರಕ್ತ ಸೋರದಂತೆ ಆಸ್ಪತ್ರೆ ತಲುಪುವವರೆಗೆ ಅನೇಕ ಮಂದಿ ಲುಂಗಿಯನ್ನು ನೀಡುತ್ತಲೇ ಇದ್ದರೂ ಅದು ಕಂಟ್ರೋಲ್‌ಗೆ ಬಂದಿರಲಿಲ್ಲ ಎಂದು ಹೇಳುತ್ತಾರೆ.
ತಂದೆ-ಮಗ ಇಬ್ಬರ ರಕ್ತದೊತ್ತಡ ತುಂಬಾ ಹೆಚ್ಚಾಗಿದ್ದರಿಂದ ಆಸ್ಪತ್ರೆಯ ವೈದ್ಯರು ಅದರ ಬಗ್ಗೆ ಪ್ರಮಾಣಪತ್ರವನ್ನು ನೀಡಲು ನಿರಾಕರಿಸಿದರು. ಗುದನಾಳದಿಂದ ಬರುತ್ತಿರುವ ರಕ್ತವನ್ನು ನಿಲ್ಲಿಸಲು ಔಷಧ ನೀಡುವಂತೆ ಪೊಲೀಸರಿಗೆ ಮನವಿ ಮಾಡಿದರೂ ಅವರು ಔಷಧವಿಲ್ಲದೇ ರಕ್ತಸ್ರಾವ ನಿಲ್ಲುತ್ತದೆ ಎಂಬ ಹಾರಿಕೆ ಉತ್ತರ ಕೊಟ್ಟರು ಎಂದು ವಕೀಲ ಮಣಿಮಾರನ್ ಹೇಳುತ್ತಾರೆ.
ನಂತರ ಪೊಲೀಸರು ಇಬ್ಬರನ್ನೂ ಮ್ಯಾಜಿಸ್ಟ್ರೇಟ್ ಪಿ ಸರವಣನ್ ಅವರ ಮನೆಗೆ ಕರೆದೊಯ್ದರು. “ಪೊಲೀಸ್ ಕಸ್ಟಡಿಯಲ್ಲಿ ತಮಗೆ ಏನಾಯಿತು ಎಂದು ಮ್ಯಾಜಿಸ್ಟ್ರೇಟ್‌ ಕೇಳಿದರು. ಆದರೆ ಏನಾದರೂ ಬಹಿರಂಗಪಡಿಸಿದರೆ ಪ್ರಾಣ ಕಳೆದುಕೊಳ್ಳಬೆಕಾಗುತ್ತದೆ ಎಂದು ಪೊಲೀಸರು ತಮಗೆ ಬೆದರಿಕೆ ಹಾಕಿರುವ ವಿಷಯ ತಿಳಿಸಿದ್ದರು. ಆಧ್ದರಿಂದ ಅವರು ಏನನ್ನೂ ಹೇಳಿರಲಿಲ್ಲ ಎಂದು ಮಣಿಮಾರನ್‌ ವಿವರಿಸಿದರು. ನಂತರ ಗಾಯ ಗಂಭೀರವಾಗಿದ್ದರಿಂದ ಪುನಃ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಅದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವ ಬಗ್ಗೆ ವಿವರಿಸುತ್ತಾರೆ.ಘಟನೆಗೆ ಸಂಬಂಧಿಸಿದಂತೆ ಸಬ್‌ಇನ್ಸ್‌ಪೆಕ್ಟರ್‌ ಬಾಲಕೃಷ್ಣನ್‌ ಹಾಗೂ ರಘು ಗಣೇಶ್‌ ಸೇರಿದಂತೆ ಕೆಲವು ಪೊಲೀಸ್‌ ಕಾನ್ಸ್‌ಟೆಬಲ್‌ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಮಾನವ ಹಕ್ಕುಗಳ ಆಯೋಗವು ಸ್ವಯಂ ಪ್ರೇರಿತವಾಗಿ ಮೊಕದ್ದಮೆ ದಾಖಲು ಮಾಡಿಕೊಂಡು ವಿಚಾರಣೆ ನಡೆಸುತ್ತಿದೆ.
ಗಂಡ ಹಾಗೂ ಮೂರು ಹೆಂಡತಿಯರ ಕೊಲೆ: ಸುಪಾರಿ ಹಂತಕಿಯ ರಹಸ್ಯ ಬಯಲು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − four =
Remember me
