ವಯನಾಡ್​:ಕೇರಳದ ವಯನಾಡ್​ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕಚೇರಿ ಮೇಲೆ ಎಸ್‌ಎಫ್‌ಐ ಕಾರ್ಯಕರ್ತರು ದಾಳಿ ಮಾಡಿ ದಾಂಧಲೆ ನಡೆಸಿದ್ದಾರೆ.
ಪರಿಸರ ಸೂಕ್ಷ್ಮ ವಲಯ ವಿಚಾರವಾಗಿ ರಾಹುಲ್​ ಗಾಂಧಿ ಮಧ್ಯಪ್ರವೇಶ ಮಾಡುತ್ತಿಲ್ಲ ಎಂದು ಆರೋಪಿಸಿ ಎಸ್‌ಎಫ್‌ಐ (ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ) ಕಾರ್ಯಕರ್ತರು ವಯನಾಡ್​​ನ ಕಾಲ್ಪೆಟ್ಟದಲ್ಲಿರುವ ರಾಹುಲ್ ಗಾಂಧಿ ಕಚೇರಿಗೆ ನುಗ್ಗಿ ಗಲಾಟೆ ಮಾಡಿ, ಅಲ್ಲಿನ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಕಚೇರಿಗೆ ನುಗ್ಗಿದಾಗ ಪೊಲೀಸರೂ ಸ್ಥಳದಲ್ಲಿದ್ದರು. ಆದರೆ, ಪೊಲೀಸರನ್ನೇ ತಳ್ಳಿಕೊಂಡು ಕಾರ್ಯಕರ್ತರು ಕಚೇರಿಯ ಗೋಡೆಗಳನ್ನೇರಿ ಒಳ ನುಗ್ಗಿದ್ದಾರೆ. ಪೀಠೋಪಕರಣ ಹಾಗೂ ಕಚೇರಿಯನ್ನು ಧ್ವಂಸ ಮಾಡಿದ್ದಲ್ಲದೇ, ಎಸ್‌ಎಫ್‌ಐ ಧ್ವಜಗಳನ್ನು ಹಾರಿಸಿದ್ದಾರೆ.
ಘಟನೆಯ ಹಿಂದೆ ಸಿಪಿಎಂ ಕೈವಾಡವಿದ್ದು, ಎಸ್‌ಎಫ್‌ಐ ಕಾರ್ಯಕರ್ತರನ್ನ ಅವರು ಕಳುಹಿಸಿದ್ದಾರೆ ಎಂದು ಸ್ಥಳೀಯ ಕಾಂಗ್ರೆಸ್‌ ಮುಖಂಡರು ಆರೋಪಿಸಿದ್ದಾರೆ. ಘಟನೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ.
ವಿಡಿಯೋ ಹಂಚಿಕೊಂಡ ಶಶಿ ತರೂರ್:ಘಟನೆ ಸಂಬಂಧ ಟ್ವಿಟ್ಟರ್​​ನಲ್ಲಿ ವಿಡಿಯೋ ಶೇರ್ ಮಾಡಿರುವ ಸಂಸದ ಶಶಿ ತರೂರ್, ಎಸ್​ಎಫ್​​ಐ ಕಾರ್ಯಕರ್ತರ ದಾಳಿಯನ್ನು ಖಂಡಿಸಿದ್ದಾರೆ. ಈ ದಾಳಿ ಮಾಡಿದವರಿಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಸರಿಯಾದ ತನಿಖೆ ನಡೆಸಿ ಶಿಕ್ಷೆ ವಿಧಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Visuals of the trashing of ⁦@RahulGandhi⁩’s Wayanad office by activists of ⁦@CPIMKerala⁩ student wing, SFI. Would ⁦@pinarayivijayan⁩ & ⁦@SitaramYechury⁩ take disciplinary action or let their silence condone such behaviour? Is this their idea of politics?pic.twitter.com/uu5DSIB3mW— Shashi Tharoor (@ShashiTharoor)June 24, 2022
Visuals of the trashing of ⁦@RahulGandhi⁩’s Wayanad office by activists of ⁦@CPIMKerala⁩ student wing, SFI. Would ⁦@pinarayivijayan⁩ & ⁦@SitaramYechury⁩ take disciplinary action or let their silence condone such behaviour? Is this their idea of politics?pic.twitter.com/uu5DSIB3mW
One can watch the goons holding the flags of SFI as they climb the wall of Sh. Rahul Gandhi Ji's Wayanad office and vandalises it.But, remember, Congress's ideology is engraved in India, it will not be damaged by your poor attempt.pic.twitter.com/0MACGutLrM— Indian Youth Congress (@IYC)June 24, 2022
One can watch the goons holding the flags of SFI as they climb the wall of Sh. Rahul Gandhi Ji's Wayanad office and vandalises it.But, remember, Congress's ideology is engraved in India, it will not be damaged by your poor attempt.pic.twitter.com/0MACGutLrM
ಡೇಟಿಂಗ್ ಆ್ಯಪ್ ಬೆಡಗಿಗಾಗಿ ಕೋಟಿ ಕೊಟ್ಟು ಕೈ ಸುಟ್ಟುಕೊಂಡ ಬ್ಯಾಂಕ್ ಮ್ಯಾನೇಜರ್!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − nine =
Remember me
