ಅಮೃತಸರ:ಸಿಖ್​ ಮೂಲಭೂತವಾದಿ ಧರ್ಮ ಪ್ರಚಾರಕ, ವಾರಿಸ್​ ಪಂಜಾಬ್​ ದೇ ಸಂಘಟನೆಯ ಮುಖ್ಯಸ್ಥ ಅಮೃತ್​ಪಾಲ್​ ಸಿಂಗ್​ ಬಂಧನಕ್ಕಾಗಿ ಪೊಲೀಸರು ನಡೆಸಿದ ಕಾರ್ಯಾಚರಣೆ ವೇಳೆ ಬಂಧಿಸಿರುವ ಸಿಖ್​ ಸಮುದಾಯದ ಯುವಕರನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಶಿರೋಮಣಿ ಗುರುದ್ವಾರ ಪರ್ಬಂಧಕ್​ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ.
SGPC ಮುಖ್ಯ ಕಚೇರಿ ಇಂದ ಶುರುವಾದ ಪ್ರತಿಭಟನಾ ರ್‍ಯಾಲಿಯೂ ಅಮೃತಸರ ಜಿಲ್ಲಾಡಳಿತ ಕಚೇರಿವರೆಗೂ ಸಾಗಿತ್ತು. ಸಮಿತಿ ಸದಸ್ಯರು ಬಂಧಿಸಿರುವ ಯುವಕರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ಹೆಚ್ಚುವರಿ ಉಪ ಆಯುಕ್ತ ಸುರಿಂದರ್​ ಸಿಂಗ್​ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
SGPC president Harjinder Singh Dhami today led a march from the Golden Temple to the DC office in Amritsar demanding the release of youth arrested recently in PunjabWe appeal to govt to discharge all those booked under Sec 751, besides revoking NSA against them. We'll submit a…pic.twitter.com/ilB48Ma5MT
ಇದನ್ನೂ ಓದಿ:ಪಂಜಾಬ್​ ಸರ್ಕಾರಕ್ಕೆ ನನ್ನನ್ನು ಬಂಧಿಸುವ ಉದ್ದೇಶ ಇದ್ದಿದ್ದರೆ ಪೊಲೀಸರು ನನ್ನ ಮನೆಗೆ ಬರುತ್ತಿದ್ದರು: ಅಮೃತ್​ಪಾಲ್​ ಸಿಂಗ್​
ಅಮೃತ್​ಪಾಲ್​ ಸಿಂಗ್​ ಬಂಧನಕ್ಕಾಗಿ ಪೊಲೀಸರು ನಡೆಸಿದ ಕಾರ್ಯಾಚರಣೆ ವೇಳೆ ಕೆಲವು ಯುವಕರ ಮೇಲೆ ಭಾರತ ದಂಡ ಸಂಹಿತೆ 751 ಹಾಗೂ ರಾಷ್ಟ್ರೀಯ ಭದ್ರತಾ ಕಾಯ್ದೆ(NSA) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಈ ಕೂಡಲೇ ದಾಖಲಿಸಿರುವ ಪ್ರಕರಣಗಳನ್ನು ಹಿಂಪಡೆಯುವಂತೆ SGPC ಸಮಿತಿ ಸದಸ್ಯರು ಉಪ ಆಯುಕ್ತರನ್ನು ಒತ್ತಾಯಿಸಿದ್ದಾರೆ.
ಬಂಧಿಸಿದ್ದ 360 ಜನ ಯುವಕರ ಪೈಕಿ 348 ಮಂದಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಪಂಜಾಬ್​ ಸರ್ಕಾರ ತಿಳಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × two =
Remember me
