ಮುಂಬೈ:ರಾಷ್ಟ್ರವ್ಯಾಪಿ ತೀವ್ರ ಗದ್ದಲವನ್ನುಂಟು ಮಾಡಿರುವ ಟ್ರೈನಿ ವೈದ್ಯೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ವ್ಯಾಪಕ ಖಂಡನೆಗೆ ಗುರಿಯಾಗಿದ್ದು, ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ಸಾರ್ವಜನಿಕರು, ಸೆಲೆಬ್ರಿಟಿಗಳು ಕಿಡಿಕಾರುತ್ತಿದ್ದಾರೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ರಾಜೀನಾಮೆಗೆ ಆಗ್ರಹಿಸಿರುವ ಸೆಲೆಬ್ರಿಟಿಗಳು ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಕಾನೂನನ್ನು ಜಾರಿಗೆ ತರುವಂತೆ ಆಗ್ರಹಿಸಿದ್ದಾರೆ.
ಈ ಕುರಿತು ಮಾತನಾಡಿರುವ ಬಾಲಿವುಡ್​ನ ಹಿರಿಯ ಶಬಾನಾ ಅಜ್ಮಿ, ದೇಶವನ್ನೇ ಬೆಚ್ಚಿಬೀಳಿಸಿದ್ದ 2012ರ ನಿರ್ಭಯಾ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ನಂತರವೂ ದೇಶದಲ್ಲಿ ಲೈಂಗಿಕ ದೌರ್ಜನ್ಯಗಳನ್ನು ನಡೆಸುವ ಹೀನ ಜನರ ಮನಸ್ಥಿತಿ ಬದಲಾಗದಿರುವುದು ಅತ್ಯಂತ ಅವಮಾನಕರ. ಇಂಥ ಪೈಶಾಚಿಕ ಕೃತ್ಯವನ್ನು ಬೇರು ಸಹಿತ ಕಿತ್ತೊಗೆಯಲು ಸಮಾಜ ಕಾರ್ಯಗತವಾಗಬೇಕು ಎಂದು ಕರೆ ನೀಡಿದ್ದಾರೆ.
#WATCH| Pune, Maharashtra: On the RG Kar Medical College and Hospital rape-murder case, Actress Shabana Azmi says "There should be an outrage, it should not happen today, the outrage should have happened much earlier and it should not be selective…These incidents are very…pic.twitter.com/HayjYET4DX
ಇದನ್ನೂ ಓದಿ:ಕಸದ ರಾಶಿಯಲ್ಲಿ ಮೆಲೋಡಿ ಹಾಡಿಗೆ ಹೆಜ್ಜೆ ಹಾಕಿದ ಯುವತಿ! ಈ ಜಾಗ ನಿಮಗೆ ಸಖತ್​ ಆಗಿದೆ ಎಂದ ನೆಟ್ಟಿಗರು
ಈ ಎಲ್ಲಾ ಪ್ರಕರಣಗಳು ಅತ್ಯಂತ ಅಪಾಯಕಾರಿ. ಇಂಥ ಯಾವುದೇ ಘಟನೆ ನಡೆದಾಗ ಸಮಾಜದಲ್ಲಿ ಆಕ್ರೋಶ ವ್ಯಕ್ತವಾಗಬೇಕು. ಆದರೆ ಅದು ಕೆಲವೊಂದು ಪ್ರಕರಣಗಳಿಗಷ್ಟೇ ಸೀಮಿತವಾಗಬಾರದು ಮತ್ತು ರಾಜಕೀಯಗೊಳಿಸಬಾರದು. ಹೀಗಾದಲ್ಲಿ ಸಮಸ್ಯೆಯ ಬೇರು ಮಟ್ಟಕ್ಕೆ ಇಳಿಯುವುದು ಅಸಾಧ್ಯವಾಗಿದೆ.
ಮಹಿಳೆಯರನ್ನು ಭೋಗದ ವಸ್ತು ಎಂದು ನೋಡುವ ಮನಸ್ಥಿತಿಯನ್ನು ಸಮಾಜದಿಂದ ಕಿತ್ತೊಗೆಯಬೇಕು. ಮಹಿಳೆಯರಿಗೂ ಬದುಕಲು ಸಮಾನ ಹಕ್ಕು ಇದೆ ಎಂಬ ವಾತಾವರಣವನ್ನು ಸಮಾಜದಲ್ಲಿ ಸ್ಥಾಪಿಸಬೇಕು. ಅತ್ಯಾಚಾರದಂತ ಪ್ರಕರಣಗಳಲ್ಲಿ ಅಪರಾಧಿಗೆ ಮರಣದಂಡನೆ ಸಹಿತ ಕಠಿಣ ಶಿಕ್ಷೆ ವಿಧಿಸಲು ಅವಕಾಶ ಇದ್ದರೂ, ಪ್ರಕರಣಗಳ ಸಂಖ್ಯೆ ಮಾತ್ರ ಕ್ಷೀಣಿಸುತ್ತಿಲ್ಲ. ಹೀಗಾಗಿ ಇದನ್ನು ಬೇರುಮಟ್ಟಕ್ಕಿಳಿದು ಕೆಲಸ ಮಾಡಬೇಕಿದೆ. ವರ್ಮಾ ಸಮಿತಿಯು ನೀಡಿರುವ ಕೆಲವೊಂದು ಮಾನದಂಡಗಳ ಮೇಲೆ ಕೆಲಸ ಮಾಡಬೇಕಿದೆ ಎಂದು ಬಾಲಿವುಡ್​ನ ಹಿರಿಯ ನಟಿ ಶಬಾನಾ ಅಜ್ಮಿ ಹೇಳಿದ್ದಾರೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eleven + 14 =
Remember me
