ನವದೆಹಲಿ:ಜಮ್ಮು-ಕಾಶ್ಮೀರ ಮತ್ತು ಸುತ್ತಮುತ್ತ ಕಳೆದ ಒಂದೆರಡು ವರ್ಷದಿಂದೀಚೆಗೆ ನಡೆಯುತ್ತಿರುವ ವಿದ್ಯಮಾನಗಳು ಬಹಳ ಕುತೂಹಲಕರವಾದುದು. ಮೇ ತಿಂಗಳಲ್ಲಿ ಉಗ್ರ ಸೈಯದ್ ಸಲಾಲುದ್ದೀನ್ ಮನೆ ಮೇಲೆ ಹ್ಯಾಂಡ್ ಗ್ರೆನೇಡ್ ದಾಳಿ ನಡೆದ ಬೆನ್ನಿಗೆ ಇತ್ತ ಜಮ್ಮು-ಕಾಶ್ಮೀರದಲ್ಲಿ ಹುರಿಯತ್ ಕಾನ್ಫರೆನ್ಸ್​ನ ನಾಯಕ ಗೀಲಾನಿ ತಾನು ರಾಜೀನಾಮೆ ನೀಡುತ್ತಿರುವುದಾಗಿ ಘೋಷಿಸಿದರು. ಹುರಿಯತ್ ಕಾನ್ಫರೆನ್ಸ್​ನ ಮುಖ್ಯಭೂಮಿಕೆಯಲ್ಲಿ ಇರಲಾರೆ ಎಂದರು.
ಗೀಲಾನಿ ಅವರ ಈ ನಡೆಯ ಹಿಂದಿನ ಒಳಸುಳಿ ಕುತೂಹಲಕರವಾದುದು. ಮೂಲಗಳ ಪ್ರಕಾರ, 1990ರ ದಶಕದಲ್ಲಿ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ತೆರಳಿದ ಉಗ್ರರೆಲ್ಲರೂ ಈಗ ಭಯೋತ್ಪಾದಕರಾಗಿ ಉಳಿದಿಲ್ಲ. ಅವರೀಗ ರಾಜಕೀಯದ ಮುಂಚೂಣಿಗೆ ಬರುವ ತವಕದಲ್ಲಿದ್ದಾರೆ. ಅವರೆಲ್ಲರೂ ತಮ್ಮದೇ ಆದ ಕನಸುಗಳೊಂದಗೆ ಸ್ವಹಿತಾಸಕ್ತಿಯಲ್ಲಿ ಕೆಲಸ ಮಾಡಲಾರಂಭಿಸಿದ್ದಾರೆ. ಹೀಗಾಗಿ ಸಂಘಟನೆಯಲ್ಲೂ ತಮ್ಮ ಸ್ಥಾನಗಳನ್ನು ತೊರೆಯುತ್ತಿಲ್ಲ. ಹುರಿಯತ್ ಕಾನ್ಫರೆನ್ಸ್​ನ ರಾಜಕೀಯಕ್ಕೆ ಹಿಜ್ಬುಲ್​ನ ಮಾಜಿ ಕಮಾಂಡರ್ ಒಬ್ಬನನ್ನು ತರವುದಕ್ಕೆ ಗೀಲಾನಿ ಪ್ರಯತ್ನಿಸಿದ್ದರು. ಆದರೆ, ಹುರಿಯತ್​ನ ಪ್ರಮುಖ ಸ್ಥಾನಗಳಲ್ಲಿ ವಿರಾಜಮಾನರಾಗಿರುವ ಹಿರಿತಲೆಗಳು ಸ್ಥಾನ ತ್ಯಜಿಸಲು ಒಪ್ಪುತ್ತಿಲ್ಲ. ಯುವಕರನ್ನು ಮುಂದೆ ಬರಲು ಬಿಡುತ್ತಿಲ್ಲ.
ಇದನ್ನೂ ಓದಿ:ಜಮ್ಮು-ಕಾಶ್ಮೀರದ ಪ್ರತ್ಯೇಕತಾವಾದಿಗಳಿಗೆ ಮಗ್ಗುಲ ಮುಳ್ಳಾಗತೊಡಗಿವೆ ಚೀನಾ, ಪಾಕ್​
ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಪ್ರತ್ಯೇಕತಾವಾದಿ ನಾಯಕರದ್ದೂ ಅದೇ ಕಥೆ. ಅನೇಕರು ಐಷಾರಾಮಿ ಜೀವನ ಸಾಗಿಸುತ್ತಿದ್ದಾರೆ. ಇದನ್ನು ಯುವಕರು ವಿರೋಧಿಸುತ್ತಿದ್ದಾರೆ. ಈ ನಾಯಕರ ವಿರುದ್ಧ ಗೀಲಾನಿಗೆ ಅಲ್ಲಿನ ಯುವಕರು ದೂರು ನೀಡಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸತೊಡಗಿದ್ದರು. ಈ ಎಲ್ಲ ಒತ್ತಡಗಳ ಪರಿಣಾಮ ಗೀಲಾನಿ ಮೇಲಾಗಿದೆ. ಹೀಗಾಗಿಯೇ ಅವರು ರಾಜೀನಾಮೆ ಕೊಟ್ಟಿದ್ದಾರೆ ಎನ್ನುತ್ತಿವೆ ಮೂಲಗಳು. (ಏಜೆನ್ಸೀಸ್)
ಉಗ್ರ ಸಲಾಲುದ್ದೀನ್ ಮನೆ ಮೇಲೆ ಗ್ರೆನೇಡ್ ದಾಳಿ ನಡೆದರೂ, ಎಫ್​ಐಆರ್​ನಲ್ಲಿ ಸಿಲಿಂಡರ್ ಸ್ಫೋಟ ಆಗಿದ್ದೇಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + five =
Remember me
