ಮುಂಬೈ:ರಾಷ್ಟ್ರದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಕೋವಿಡ್​-19 ಪಿಡುಗಿನ ಭರಾಟೆ ಜೋರಾಗಿದೆ. ಬಾಲಿವುಡ್​ನ ಹಿರಿಯ ನಟ ಅಮಿತಾಭ್​ ಬಚ್ಚನ್​ ಹಾಗೂ ಅವರ ಪುತ್ರ ಅಭಿಷೇಕ್​ ಬಚ್ಚನ್​, ಸೊಸೆ ಐಶ್ವರ್ಯ ರೈ ಬಚ್ಚನ್​ ಮತ್ತು ಮೊಮ್ಮಗಳು ಆರಾಧ್ಯ ಕೂಡ ಕರೊನಾ ಸೋಂಕಿಗೆ ತುತ್ತಾದ ಮೇಲಂತೂ ಬಾಲಿವುಡ್​ನ ಮಂದಿಗೆ ಕರೊನಾ ಭಾರಿ ನಡುಕವನ್ನೇ ಉಂಟು ಮಾಡಿದೆ. ಈ ಹಿನ್ನೆಲೆಯಲ್ಲಿ ಸೋಂಕಿನಿಂದ ದೂರವುಳಿಯಲು ಅವರೆಲ್ಲರೂ ವಿವಿಧ ರೀತಿಯ ತಂತ್ರಗಾರಿಕೆಯನ್ನೂ ಅನುಸರಿಸುತ್ತಿದ್ದಾರೆ.
ಇಂತಿಪ್ಪ, ಬಾಲಿವುಡ್​ನಲ್ಲಿ ವಿಶಿಷ್ಟ ನಟನೆಯ ಮೂಲಕ ತಮ್ಮದೇ ಆದ ಛಾಪು ಮೂಡಿಸಿರುವ ಶಾರುಖ್​ ಖಾನ್​ ತಮ್ಮ ನಿವಾಸ ಮನ್ನತ್​ಗೆ ಪ್ಲಾಸ್ಟಿಕ್​ನ ಹೊದಿಕೆ ಹೊದಿಸಿದ್ದಾರೆ. ಕರೊನಾ ಸೋಂಕಿಗೆ ಹೆದರಿ, ಅದರಿಂದ ರಕ್ಷಣೆ ಪಡೆಯಲು ಬಾಜಿಗಾರ್​ ಹೀಗೆ ಮಾಡಿದ್ದಾರೆ ಎಂದೇ ಎಲ್ಲರ ಭಾವನೆಯಾಗಿದೆ.
ಆದರೆ ವಾಸ್ತವದಲ್ಲಿ ಮನ್ನತ್​ಗೆ ಪ್ಲಾಸ್ಟಿಕ್​ ಹೊದಿಕೆ ಹೊದಿಸಲು ಕರೊನಾ ಕಾರಣವಲ್ಲ. ಬದಲಿಗೆ ಮುಂಬೈನ ಮಳೆ ಎಂಬುದು ಈಗ ಸ್ಪಷ್ಟವಾಗಿದೆ. ತಮ್ಮ ಪತ್ನಿ ಗೌರಿ ಖಾನ್​ ಮತ್ತು ಪುತ್ರರಾದ ಆರ್ಯನ್​, ಅಬ್​ರಾಂ ಹಾಗೂ ಪುತ್ರಿ ಸುಹಾನಾ ಜತೆ ಈ ಬಂಗಲೆಯಲ್ಲಿ ವಾಸಿಸುವ ಶಾರುಖ್​ ಪ್ರತಿವರ್ಷ ಮಳೆಗಾಲದ ಸಂದರ್ಭದಲ್ಲಿ ತಮ್ಮ ಮನೆಗೆ ಪ್ಲಾಸ್ಟಿಕ್​ ಹೊದಿಕೆ ಹೊದಿಸುವುದನ್ನು ರೂಢಿಸಿಕೊಂಡಿದ್ದಾರೆ. ತನ್ಮೂಲಕ ಮಳೆಯಿಂದಾಗಿ ಮನ್ನತ್​ಗೆ ಒಂದಿಷ್ಟೂ ತೊಂದರೆಯಾಗದಂತೆ ಮುನ್ನೆಚ್ಚರಿಕೆವಹಿಸುತ್ತಾರೆ ಎಂದು ಮನ್ನತ್​ನ ಸುತ್ತಮುತ್ತಲ ನಿವಾಸಿಗಳು ಸ್ಪಷ್ಟಪಡಿಸಿದ್ದಾರೆ.
ಗೇಮ್​ ಆಫ್ ಥ್ರೋನ್ಸ್ ರೀತಿಯಲ್ಲಿ ಮಹಾಭಾರತ; ನೆಟ್​ಫ್ಲಿಕ್ಸ್​ನಲ್ಲಿ ಆಮೀರ್ ಮಹಾಸರಣಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 15 =
Remember me
