ಮುಂಬೈ:ಕತಾರ್​ನಲ್ಲಿ ಮರಣದಂಡನೆಗೆ ಗುರಿಯಾಗಿದ್ದ ಭಾರತೀಯ ನೌಕಾಪಡೆಯ ಅಧಿಕಾರಿಗಳ ಬಿಉಡಗಡೆಯಲ್ಲಿ ಬಾಲಿವುಡ್​ ನಟ ಶಾರುಖ್​ ಖಾನ್​ ಪ್ರಮುಖ ಪಾತ್ರ ವಹಿಸಿದ್ದಾರೆ ಎಂಬ ಸುದ್ದಿ ಸತ್ಯಕ್ಕೆ ದೂರವಾಗಿದ್ದು, ಅದರಲ್ಲಿ ಯಾವುದೇ ಹುರುಳಿಲ್ಲ ಎಂದು ನಟನ ಕಚೇರಿ ವಿಚಾರವನ್ನು ತಳ್ಳಿ ಹಾಕಿದೆ.
ಕತಾರ್‌ನಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಭಾರತೀಯ ನೌಕಾ ಸೇನಾ ಮಾಜಿ ಅಧಿಕಾರಿಗಳನ್ನು ಯಶಸ್ವಿಯಾಗಿ ಬಿಡುಗಡೆಗೊಳಿಸುವ ಹಿಂದೆ ನಟ ಶಾರುಖ್ ಖಾನ್ ಪಾತ್ರವಿದೆ ಎಂದು ಹಿರಿಯ ಬಿಜೆಪಿ ನಾಯಕ ಸುಬ್ರಮಣಿಯಂ ಸ್ವಾಮಿ ಟ್ವೀಟ್ ಮಾಡಿದ್ದರು. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿರುವ ಶಾರುಖ್​ ಮ್ಯಾನೇಜರ್​ ಪೂಜಾ ದದ್ಲಾನಿ, ಇವೆಲ್ಲ ಆಧಾರರಹಿತ ಸಮರ್ಥನೆಗಳಾಗಿವೆ ಎಂದು ಹೇಳಿದ್ದಾರೆ.
ಅಧಿಕಾರಿಗಳ ಬಿಡುಗಡೆ ಹಿಂದೆ ಶಾರುಕ್ ಖಾನ್‌ ಅವರ ಪಾತ್ರವಿದೆ ಎಂದು ವರದಿಯಾಗಿದ್ದು, ಇವೆಲ್ಲ ಆಧಾರರಹಿತ ಸಮರ್ಥನೆಗಳಾಗಿವೆ. ರಾಜತಾಂತ್ರಿಕ ವಿಷಯವನ್ನು ಸರ್ಕಾರ ಸಮರ್ಥವಾಗಿ ನಿರ್ವಹಿಸಿದ್ದು, ಅಧಿಕಾರಿಗಳ ಬಿಡುಗಡೆಯ ಸಂಪೂರ್ಣ ಯಶಸ್ಸು ಸರ್ಕಾರಕ್ಕೆ ಸಲ್ಲುತ್ತದೆ. ಇದರಲ್ಲಿ ಶಾರುಕ್‌ ಖಾನ್‌ ಅವರ ಪಾತ್ರವಿದೆ ಎಂಬುವುದು ಸತ್ಯಕ್ಕೆ ದೂರವಾದ ಮಾತು.
From the office of Mr. Shah Rukh Khanpic.twitter.com/s7Kwwhmd6j
ಇದನ್ನೂ ಓದಿ:ರೈತರಿಂದ ದೆಹಲಿ ಚಲೋ ; ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ MSP ಜಾರಿ ಗ್ಯಾರಂಟಿ: ರಾಹುಲ್​ ಗಾಂಧಿ
ನೌಕಾಪಡೆಯ ಅಧಿಕಾರಿಗಳೆಲ್ಲರು ಮರಣದಂಡನೆ ಶಿಕ್ಷೆಯಿಂದ ಪಾರಾಗಿ ತವರು ಸೇರಿರುವುದು ಎಲ್ಲ ಭಾರತೀಯರಂತೆ ಶಾರುಕ್ ಅವರಿಗೂ ಸಂತಸ ತಂದಿದೆ ಎಂದು ಶಾರುಖ್​ ಖಾನ್​ ಅವರ ಮ್ಯಾನೇಜರ್​ ಪೂಜಾ ದದ್ಲಾನಿ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪೋಸ್ಟ್​ ಮಾಡಲಾಗಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಬೇಹುಗಾರಿಕೆ ಆರೋಪದಲ್ಲಿ ಬಂಧಿತರಾಗಿ ಕತಾರ್​ನ ಸೆರೆಮನೆಯಲ್ಲಿದ್ದ ಭಾರತೀಯ ನೌಕಾ ಪಡೆಯ ಎಂಟು ನಿವೃತ್ತ ಅಧಿಕಾರಿಗಳನ್ನು ಕತಾರ್ ಸರ್ಕಾರ ಸೋಮವಾರ ಬಿಡುಗಡೆ ಮಾಡಿದ್ದು, ಅವರಲ್ಲಿ ಏಳು ಜನರು ಸ್ವದೇಶಕ್ಕೆ ಮರಳಿದ್ದಾರೆ. ಕತಾರ್​ನ ನ್ಯಾಯಾಲಯ ಎಂಟೂ ಜನರಿಗೆ ವಿಧಿಸಿದ್ದ ಮರಣದಂಡನೆಯು ಕೇಂದ್ರ ಸರ್ಕಾರದ ಸತತ ರಾಜತಾಂತ್ರಿಕ ಪ್ರಯತ್ನಗಳಿಂದಾಗಿ ಜೈಲು ಶಿಕ್ಷೆಯಾಗಿ ಪರಿವರ್ತನೆಗೊಂಡ 46 ದಿನಗಳ ನಂತರ ಬಿಡುಗಡೆಯಾಗಿರುವ ಮಾಜಿ ಯೋಧರ ಕುಟುಂಬಗಳಲ್ಲಿ ಸಂತಸ ಮುಗಿಲು ಮುಟ್ಟಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 11 =
Remember me
