ಮುಂಬೈ:ನಯನತಾರಾ ಹಾಗೂ ವಿಘ್ನೇಶ್​ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಬಾಲಿವುಡ್​ ನಟ ಶಾರುಖ್​ ಖಾನ್​​ ಸದ್ಯಕ್ಕೆ ಟ್ರೋಲ್​ ಆಗಿದ್ದಾರೆ.
ಅರೆ.. ಏನಿದು ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇ ತಪ್ಪಾಯ್ತಾ ಎಂಬ ಪ್ರಶ್ನೆ ಮೂಡುವುದು ಸಹಜ… ಸದ್ಯ ಮದುವೆಯಲ್ಲಿ ಕಾಣಿಸಿಕೊಂಡಿದ್ದಕ್ಕೆ ಮಾತ್ರವಲ್ಲ ಇತ್ತೀಚೆಗೆ ತಮಗೆ ಕೊವಿಡ್​​ ಸೊಂಕು ತಗುಲಿದೆ ಎಂದು ಹೇಳಿ ಚಿಕಿತ್ಸೆ ಪಡೆಯುತ್ತಿದ್ದ ಶಾರುಖ್​ ಏಕಾಏಕಿ ಮದುವೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿರುವುದಕ್ಕೆ ಟ್ವಿಟ್ಟಿಗರು ಟೀಕೆಯನ್ನು ಮಾಡುತ್ತಿದ್ದಾರೆ.
ಕಳೆದ ವಾರವಷ್ಟೇ ಶಾರುಖ್​ ಖಾನ್​ ಅವರಿಗೆ ಕರೊನಾ ಪಾಸಿಟಿವ್​ ಇದೆ ಎಂದು ಸುದ್ದಿಯಾಗಿತ್ತು. ಕರೊನಾ ಲಕ್ಷಣ ಇರುವುದರಿಂದ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿತ್ತು. ಇದಾದ ಮೂರ್ನಾಲ್ಕು ದಿನದಲ್ಲೇ ಶಾರುಖ್​ ನಯನತಾರಾ-ವಿಘ್ನೇಶ್​ ಮದುವೆ ಸಮಾರಂಭದಲ್ಲಿ ಕಾಣಿಸಿಕೊಂಡಿರುವುದು ಅಚ್ಚರಿ ಮೂಡಿಸಿದೆ.
ಕೆಲ ಟ್ವಿಟ್ಟಿಗರು ಹಾಗಾದರೆ ಇವರಿಗೆ ಬಂದಿದ್ದು, ಕರೊನಾ ಅಲ್ಲ, ಆಸಿಡಿಟಿ ಇರಬಹುದು. ಏನಿದು ಎರಡು ದಿನ ಬಂದ ಕರೊನಾ ಮೂರನೇ ದಿನಕ್ಕೆ ಹೋಗಿಬಿಡ್ತಾ ಎಂದು ಪ್ರಶ್ನಿಸಿದ್ದಾರೆ. ಅವರಿಗೆ ಕೊವಿಡ್​ ಅಲ್ಲ ಸ್ವಲ್ಪ ಜ್ವರ ಬಂದಿತ್ತಷ್ಟೇ ಎಂದು ಮತ್ತೊಬ್ಬ ಟ್ವಿಟಿಗ ಕಾಲೆಳೆದಿದ್ದಾರೆ.(ಏಜೆನ್ಸೀಸ್​)
ತಿರುಪತಿಗೆ ಭೇಟಿ ನೀಡಿದ ನವದಂಪತಿ ನಯನತಾರಾ-ವಿಘ್ನೇಶ್​​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + eight =
Remember me
