ಮುಂಬೈ:ಬಾಲಿವುಡ್​ ಬಾದ್​​ ಶಾ ಎಂದೇ ಕರೆಸಿಕೊಳ್ಳುವ ಶಾರುಖ್​ ಖಾನ್​​ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ತಮ್ಮ ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಅವರ ಮನೆಯ ಬಳಿ ಪ್ರತಿನಿತ್ಯ ಬರುತ್ತಿರುತ್ತಾರೆ.
ಶಾರುಖ್​ನನ್ನು ನೋಡಿ ಕಣ್ತುಂಬಿಕೊಳ್ಳುತ್ತಿದ್ದ ಅಭಿಮಾನಿಗಳು ಅವರ ಮನೆಯ ಮೇಲೂ ಒಂದು ಕಣ್ಣಾಯಿಸುವುದು ಸಾಮಾನ್ಯ. ದೊಡ್ಡ ಸ್ಟಾರ್​ ನಟನ ಮನೆ ಎಂದರೆ ಸಾಮಾನ್ಯವೇ… ಶಾರುಖ್​​ನಷ್ಟೇ ಅವರ ಮನೆಯೂ ಅಷ್ಟೇ ಜನಪ್ರಿಯತೆಯನ್ನು ಪಡೆದಿದೆ.
#Mannatis news with old plate… new plate and none 😁😁😁https://t.co/80m15yQ1yj
— Carolina Muñoz 🇻🇪 (@lcaromunoz)May 28, 2022

ಹೀಗೆ ಶಾರೂಕ್​​ ಮನೆ ಮುಂದೆ ಹೋದ ಕೆಲ ಅಭಿಮಾನಿಗಳಿಗೆ ಶಾಕ್​ ಕಾದಿತ್ತು. ಅದೇನೆಂದರೆ ಮನೆಯ ನೇಮ್​​ಪ್ಲೇಟ್​ ಇಲ್ಲದಿರುವುದು ಅಭಿಮಾನಿಗಳ ಗೊಂದಲಕ್ಕೆ ಕಾರಣವಾಗಿದೆ. ಇದನ್ನು ಕದ್ದಿದ್ದಾರೋ.. ಅಥವಾ ಬೇಕೆಂತಲೇ ತೆಗೆದಿದ್ದಾರೆಯೇ ಎಂಬ ವಾದ-ವಿವಾದಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.
ಶಾರುಖ್​​ ಮನೆಯ ಹೆಸರು ಮನ್ನತ್​​, ಇದರ ನೇಮ್​​ಪ್ಲೇಟ್​​ ಬೆಲೆ ಕೇಳಿದರೆ ಮಧ್ಯಮ ವರ್ಗದವರು ಒಂದು ಮನೆಯನ್ನೇ ಕಟ್ಟಿಕೊಳ್ಳಬಹುದು. ಇದರ ಬೆಲೆ ಬರೋಬ್ಬರಿ 25 ಲಕ್ಷವಂತೆ. ಇಷ್ಟು ಭಾರೀ ಮೊತ್ತದ ನೇಮ್​​ಪ್ಲೇಟ್​​ ಅನ್ನು ಇತ್ತೀಚೆಗೆ ತೆಗೆಯಲಾಗಿದೆ. ಯಾವ ಕಾರಣಕ್ಕೆ ತೆಗೆಯಲಾಗಿದೆ ಎಂಬುದರ ಬಗ್ಗೆ ಶಾರುಖ್​ ತಮ್ಮ ಅಭಿಮಾನಿಗಳಿಗೆ ಮಾಹಿತಿ ನೀಡುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.(ಏಜೆನ್ಸೀಸ್​)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eleven − one =
Remember me
