ಮುಂಬೈ:ಹಿಂದಿ ವಾಹಿನಿಗಳಲ್ಲಿ ತನ್ನ ಧಾರಾವಾಹಿಗಳ ಮೂಲಕ ಮಿಂಚಿ ಬಾಲಿವುಡ್​ನ ಅಂಗಳದಲ್ಲೂ ಸೈ ಎನಿಸಿಕೊಂಡ ನಟ ಶಹಬಾಜ್​ ಖಾನ್​ ವಿರುದ್ಧ ದೂರು ದಾಖಲಾಗಿದೆ. ಲೈಂಗಿಕ ಕಿರುಕುಳ ನೀಡಿರುವ ಹಿನ್ನೆಲೆ ದೂರು ದಾಖಲಾಗಿರುವುದಾಗಿ ಮಾಹಿತಿ ಲಭಿಸಿದೆ.
ಶಹಬಾಜ್​ ಖಾನ್​ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್​ 354 ಮತ್ತು ಸೆಕ್ಷನ್​ 509 ಅಡಿಯಲ್ಲಿ ಎಫ್​ಐಆರ್​ ದಾಖಲಿಸಲಾಗಿದೆ. ಮುಂಬೈನ ಓಶಿವಾರದ ಪೊಲೀಸ್​ ಠಾಣೆಯಲ್ಲಿ ದೂರನ್ನು ದಾಖಲಿಸಿಕೊಳ್ಳಲಾಗಿದೆ.ಈ ಪ್ರಕರಣದಲ್ಲಿ ಸದ್ಯ ತನಿಖೆ ನಡೆಯುತ್ತಿದ್ದು ಶಹಬಾಜ್​ರನ್ನು ಇನ್ನೂ ಪೊಲೀಸ್​ ವಶಕ್ಕೆ ತೆಗೆದುಕೊಳ್ಳಲಾಗಿಲ್ಲ.
ಶಹಬಾಜ್​ ಖಾನ್​ ಅವರ ಮೂಲ ಹೆಸರು ಹೈದರ್​​ ಖಾನ್​. ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಶಾಸ್ತ್ರೀಯ ಸಂಗೀತ ಗಾಯಕ ಉಸ್ತಾದ್​ ಅಮೀರ್​ ಖಾನ್​ ಅವರ ಮಗ. ತೆನಾಲಿ ರಾಮ, ರಾಮ್​ ಸಿಯಾ ಕೆ ಲವ್​ ಕುಶ್​, ದಸ್ತಾನ್​ ಇ ಮೊಹಬ್ಬತ್​, ಸಲೀಮ್​ ಅನಾರ್ಕಲಿ ಮುಂತಾದ ಟಿವಿ ಕಾರ್ಯಕ್ರಮಗಳಿಂದ ಜನರಿಗೆ ಪರಿಚಯವಾದವರು. ಬಾಲಿವುಡ್​ನಲ್ಲಿ ಖಳನಟನಾಗಿ ಕಾಣಿಸಿಕೊಂಡಿರುವ ಅವರು ವೀರ್​, ಬದ್ಲಾ ಹಿಂದೂಸ್ಥಾನಿ ಕಾ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಯಶ್​ ನಟನೆಯ ಗಜಕೇಸರಿ ಸಿನಿಮಾದಲ್ಲಿಯೂ ಸಹ ಬಣ್ಣ ಹಚ್ಚಿದ್ದಾರೆ.(ಏಜೆನ್ಸೀಸ್​)

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 5 =
Remember me
