ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಿಂದ ನೋಯ್ಡಾಗೆ ಪ್ರಯಾಣ ಬೆಳೆಸುವ ಪ್ರಯಾಣಿಕರು ಸದ್ಯ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಯಿಂದಾಗಿ ಕಳೆದ 70 ದಿನಗಳಿಂದ ಪ್ರತಿಭಟನಾಕಾರರದಿಂದ ಬ್ಲಾಕ್​ ಆಗಿದ್ದ ರಸ್ತೆಯನ್ನು ಶನಿವಾರ ಮತ್ತೆ ತೆರೆಯಲಾಗಿದೆ.
ಶಾಹೀನ್​ ಬಾಗ್​​ ರಸ್ತೆಯು ದೆಹಲಿಯ ಜಾಮಿಯಾದಿಂದ ಉತ್ತರ ಪ್ರದೇಶದ ನೋಯ್ಡಾ ಮತ್ತು ಹರಿಯಾಣದ ಫರೀದಾಬಾದ್​ಗೆ ಸಂಪರ್ಕ ಕೊಂಡಿಯಾಗಿತ್ತು. ಆದರೆ, ಸಿಎಎ ವಿರೋಧಿ ಪ್ರತಿಭಟನೆಯಿಂದಾಗಿ ರಸ್ತೆಯನ್ನು ಬ್ಲಾಕ್​ ಮಾಡಲಾಗಿತ್ತು. ಇದೀಗ ಮತ್ತೆ ತೆರೆದಿರುವುದು ಪ್ರಯಾಣಿಕರಿಗೆ ಖುಷಿಯ ವಿಚಾರವಾಗಿದೆ. ಪ್ರತಿಭಟನೆ ಆರಂಭವಾದ ದಿನದಿಂದಲೂ ಶಾಹೀನ್​ ಬಾಘ್​ನಲ್ಲಿ ದೆಹಲಿ ಪೊಲೀಸ್​ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಮೂಲಗಳ ಪ್ರಕಾರ ಶಾಹೀನ್​ ಬಾಗ್​ ಪ್ರತಿಭಟನಾಕಾರರು ರಸ್ತೆಯನ್ನು ತೆರವುಗೊಳಿಸುವ ವಿಚಾರವಾಗಿ ದೆಹಲಿ ಪೊಲೀಸರೊಂದಿಗೆ ಯಾವುದೇ ಮಾತುಕತೆ ನಡೆಸಿಲ್ಲ. ಇತ್ತೀಚಿನ ಬೆಳವಣಿಗೆ ಬಗ್ಗೆ ನಮಗೂ ಮಾಹಿತಿ ಇಲ್ಲವೆಂದು ದೆಹಲಿ ಪೊಲೀಸರು ಕೂಡ ಹೇಳಿದ್ದಾರೆ. ಆದರೂ ಶಾಹೀನ್​ ಬಾಗ್​ ಪ್ರತಿಭಟನಾಕಾರರು ತೆಗೆದುಕೊಂಡು ನಿರ್ಧಾರವನ್ನು ಪೊಲೀಸರು ಒಪ್ಪಿಕೊಂಡಿದ್ದಾರೆ.
ಇನ್ನೊಂದೆಡೆ ಪ್ರತಿಭಟನಾಕಾರರು ನೋಯ್ಡಾ-ಕಲಿಂದಿ ಕುಂಜ್​ ಮಾರ್ಗ ನಂ.9(ಓಕ್ಲಾ ರಸ್ತೆ) ಅನ್ನು ಸಂಚಾರಕ್ಕೆ ಮುಕ್ತ ಮಾಡಿದ್ದಕ್ಕೆ ಸ್ಥಳದಲ್ಲಿ ಸಂಭ್ರಮಾಚರಣೆಯು ನಡೆದಿದೆ.
#WATCHDelhi: Celebrations underway as protestors open Noida-Kalindi Kunj Road via Road No. 9 (Okhla road)#ShaheenBaghProtestspic.twitter.com/UIqL4ms6a5
— ANI (@ANI)February 22, 2020

ಇದಕ್ಕೂ ಮುನ್ನಾ ಪ್ರತಿಭಟನಾಕಾರರ ಒಂದು ಗುಂಪು ರಸ್ತೆಯನ್ನು ಓಪನ್​ ಮಾಡಿದ್ದರು. ಆದರೆ, ಮತ್ತೆ ಇನ್ನೊಂದು ಗುಂಪಿನಿಂದ ಮುಚ್ಚಲಾಗಿತ್ತು. ಮತ್ತೆ ಒಂದು ಗುಂಪು ರಸ್ತೆಯನ್ನು ಮರು ತೆರೆದರು. ಆದರೆ, ಇದಕ್ಕೆ ಎಲ್ಲರ ಒಪ್ಪಿಗೆ ಇದೆಯೇ ಎಂಬುದು ಈವರೆಗೂ ಸ್ಪಷ್ಟವಾಗಿಲ್ಲ ಎಂದು ದೆಹಲಿಯ ಆಗ್ನೇಯ ಡಿಸಿಪಿ ತಿಳಿಸಿದ್ದಾರೆ.
ಸಿಎಎ ವಿರೋಧಿಸಿ ಪ್ರಾಥಮಿಕವಾಗಿ ಸ್ಥಳೀಯ ಮಹಿಳೆಯರು ಡಿಸೆಂಬರ್​ ಮಧ್ಯ ಭಾಗದಲ್ಲಿ ಶಾಹೀನ್​ ಬಾಗ್​ನಲ್ಲಿ ಪ್ರತಿಭಟನೆ ಆರಂಭಿಸಿದರು. ಇದು ರಸ್ತೆ ಬ್ಲಾಕ್​ಗೆ ಕಾರಣವಾಗಿ, ಆಗ್ನೇಯ ದೆಹಲಿ ಪ್ರದೇಶಗಳಿಂದ ನೋಯ್ಡಾ ಸಂಪರ್ಕಿಸುವ ರಸ್ತೆ ಮುಚ್ಚಲಾಗಿತ್ತು. ಇದರಿಂದ ದಿನನಿತ್ಯದ ಪ್ರಯಾಣಿಕರಿಗೆ ಬಹಳಷ್ಟು ತೊಂದರೆಯಾಗಿತ್ತು. ಇದೀಗ ಮತ್ತೆ ತೆರೆದಿರುವುದು ಸಾಕಷ್ಟು ಮಂದಿ ಸಂತಸದ ವಿಚಾರವಾಗಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + twenty =
Remember me
