ನವದೆಹಲಿ:ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾದಾಗಿನಿಂದಲೂ ಶಾಹೀನ್​ ಬಾಗ್​ನಲ್ಲಿ ನಿರಂತರವಾಗಿ ಪ್ರತಿಭಟನೆ ನಡೆಯುತ್ತಲೇ ಇದೆ.
ಸಿಎಎ ವಿರೋಧಿಸಿ ಶಾಹೀನ್ ಬಾಗ್​ನಲ್ಲಿ ಪ್ರತಿಭಟನೆ ನಡೆಸುತ್ತಿರುವವರು ನಾಳೆ (ಫೆ.16) ಮೆರವಣಿಗೆ ಮೂಲಕ ಗೃಹ ಸಚಿವ ಅಮಿತ್​ ಷಾ ಅವರ ನಿವಾಸಕ್ಕೆ ತೆರಳಲಿದ್ದಾರೆ. ಈ ಬಗ್ಗೆ ಪ್ರತಿಭಟನಾಕಾರರೇ ಇಂದು ಘೋಷಣೆ ಮಾಡಿದ್ದಾರೆ. ನಮ್ಮ ಬೇಡಿಕೆಗಳ ಪಟ್ಟಿಯನ್ನು ಗೃಹಸಚಿವರ ಎದುರು ಇಡುತ್ತೇವೆ. ಅದರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯಬೇಕು ಎಂಬುದು ನಮ್ಮ ಪ್ರಥಮ ಬೇಡಿಕೆ ಎಂದು ಹೇಳಿದ್ದಾರೆ.
ಆದರೆ ಶಾಹೀನ್ ಬಾಗ್ ಪ್ರತಿಭಟನಾಕಾರರೊಂದಿಗೆ ಅಮಿತ್​ ಷಾ ಅವರು ಮಾತುಕತೆ ನಡೆಸುವ ಯಾವುದೇ ಮನವಿಯೂ ನಮ್ಮೆದುರು ಬಂದಿಲ್ಲ ಎಂದು ಗೃಹಸಚಿವಾಲಯದ ಮೂಲಗಳು ತಿಳಿಸಿವೆ. ಪ್ರತಿಭಟನಾಕಾರರು ಹೇಳುವಂತೆ, ಫೆ.16ರಂದು ಮಧ್ಯಾಹ್ನ 2 ಗಂಟೆಗೆ ಮೆರವಣಿಗೆ ಪ್ರಾರಂಭಿಸಲಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಯಾರಿಗೆ ಏನೇ ಅನುಮಾನವಿದ್ದರೂ, ಅದರಿಂದ ಏನೇ ಸಮಸ್ಯೆ ಆಗುತ್ತಿದೆ ಎನ್ನಿಸಿದರೂ ನೇರವಾಗಿ ಬಂದು ನನ್ನನ್ನೇ ಭೇಟಿ ಮಾಡಿ, ಚರ್ಚಿಸಿ ಎಂದು ಇತ್ತೀಚೆಗೆ ಅಮಿತ್​ ಷಾ ಹೇಳಿದ್ದಾರೆ. ಹಾಗಾಗಿ ನಾವು ಅವರ ನಿವಾಸಕ್ಕೆ ತೆರಳಿ ನಮ್ಮ ಬೇಡಿಕೆಗಳನ್ನು ಸಲ್ಲಿಸುತ್ತೇವೆ. ಶಾಹೀನ್​ ಬಾಗ್​ನಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಯೊಬ್ಬರೂ ನಾಳೆ ಅಮಿತ್​ ಷಾ ನಿವಾಸಕ್ಕೆ ಹೋಗುತ್ತಿದ್ದೇವೆ ಎಂದು ಪ್ರತಿಭಟನಾಕಾರನೋರ್ವ ಮಾಧ್ಯಮಕ್ಕೆ ತಿಳಿಸಿದ್ದಾಗಿ ವರದಿಯಾಗಿದೆ.
ನಮ್ಮ ಪರ ಮಾತನಾಡುವಂತೆ ಯಾವುದೇ ಆಯೋಗವನ್ನಾಗಲೀ, ಅಧಿಕಾರಿಗಳನ್ನಾಗಲೀ ಗೃಹಸಚಿವರ ಬಳಿ ಕಳುಹಿಸುವುದಿಲ್ಲ. ನಾವೇ ಸ್ವತಃ ಅಲ್ಲಿಗೆ ಹೋಗುತ್ತೇವೆ ಎಂದು ಹೇಳಿದ್ದಾರೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + twelve =
Remember me
