ನವದೆಹಲಿ:ಶಾಹೀನ್​ ಬಾಘ್​ನಲ್ಲಿ ಪ್ರತಿಭಟನಾಕಾರರ ಮೇಲೆ​ ಫೈರಿಂಗ್​ ಮಾಡಿದ್ದ ಕಪಿಲ್​ ಗುಜರ್ 2019ರ ಆರಂಭದಲ್ಲೇ ಆಮ್​ ಆದ್ಮಿ ಪಕ್ಷವನ್ನು ಸೇರಿರುವುದಾಗಿ ದೆಹಲಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.​
ವಿಚಾರಣೆ ವೇಳೆ ಕಪಿಲ್​ ಗುಜರ್​ನಿಂದ ಆಪ್​ನ ಅನೇಕ ಹಿರಿಯ ನಾಯಕರೊಂದಿಗೆ ತೆಗೆಸಿಕೊಂಡಿರುವ ಫೋಟೋಗಳನ್ನು ದೆಹಲಿ ಅಪರಾಧ ವಿಭಾಗದ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆದರೆ, ಕಪಿಲ್​ ಗುಜರ್​ನೊಂದಿಗಿನ ಸಂಬಂಧವನ್ನು ಆಪ್​ ತಿರಸ್ಕರಿಸಿದೆ.
ಕಳೆದ ಶನಿವಾರ ಶಾಹೀನ್​ ಬಾಘನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ(ಎನ್​ಆರ್​ಸಿ) ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನಾ ವೇಳೆ ವ್ಯಕ್ತಿಯೊಬ್ಬ ಗಾಳಿಯಲ್ಲಿ ಗುಂಡು ಹಾರಿಸಿದ್ದ. ಅಲ್ಲದೆ, ನೂರಾರು ಮಹಿಳೆಯರು ಮತ್ತ ಮಕ್ಕಳು ಕುಳಿತಿದ್ದ ಕಡೆಗೆ ಕಲ್ಲು ತೂರಾಟ ನಡೆಸಲಾಗಿತ್ತು. ನಮ್ಮ ದೇಶದಲ್ಲಿ ಹಿಂದುಗಳು ಮಾತ್ರ ಮೇಲುಗೈ ಸಾಧಿಸಬೇಕೆಂದು ಘೋಷಣೆ ಕೂಗುತ್ತಿದ್ದ. ಆತನನ್ನು ಬಂಧಿಸಿದಾಗ ತಾನು ಕಪಿಲ್​ ಗುಜರ್​ ಎಂದು ಹೇಳಿಕೊಂಡಿದ್ದ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 4 =
Remember me
