ನವದೆಹಲಿ:ಶಾಹೀನ್​ ಬಾಗ್​ನಲ್ಲಿ ಸಿಎಎ ವಿರೋಧಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ ಇತ್ತೀಚೆಗೆ ಕಪಿಲ್ ಗುಜ್ಜಾರ್​ ಎಂಬಾತ ಗುಂಡು ಹಾರಿಸಿದ್ದ.
ಜಾಮಿಯಾ ಮಿಲಿಯಾ ಇಸ್ಲಾಮಿಯಾ ಯೂನಿವರ್ಸಿಟಿ ಬಳಿ ಅಪ್ರಾಪ್ತನೋರ್ವ ಗುಂಡುಹಾರಿಸಿದ ಎರಡೇ ದಿನದಲ್ಲಿ ಈ ಘಟನೆ ನಡೆದಿತ್ತು.
ಶಾಹೀನ್​ಬಾಗ್​ನಲ್ಲಿ ಫೈರಿಂಗ್ ಮಾಡಿದ ಕಪಿಲ್​ ಗುಜ್ಜರ್​ ಆಮ್​ ಆದ್ಮಿ ಪಕ್ಷಕ್ಕೆ ಸೇರಿದವನು ಎನ್ನಲಾಗಿತ್ತು. ಅಲ್ಲದೆ ಆಪ್​ನ ಟೊಪ್ಪಿ ಹಾಕಿಕೊಂಡು, ಕೆಲವು ಸದಸ್ಯರ ಜತೆ ಇರುವ ಫೋಟೋ ಕೂಡ ವೈರಲ್ ಆಗಿತ್ತು. ಆತನೇ ತಾನು ಆಮ್​ ಆದ್ಮಿ ಪಕ್ಷದವನು ಎಂದು ಪೊಲೀಸರೆದುರು ಒಪ್ಪಿಕೊಂಡಿದ್ದ.
ಆದರೆ ನಿನ್ನೆ ಕಪಿಲ್​ ಗುಜ್ಜರ್​ ಕುಟುಂಬ ಅದನ್ನು ಅಲ್ಲಗಳೆದಿತ್ತು. ಆತನ ಸಹೋದರ ಮಾಧ್ಯಮಗಳೊಂದಿಗೆ ಮಾತನಾಡುತ್ತ, ನಾವ್ಯಾರೂ ಯಾವುದೇ ಪಕ್ಷಕ್ಕೂ ಸೇರಿದವರಲ್ಲ. ಕಪಿಲ್​ ಕೂಡ ಯಾವುದೇ ಪಕ್ಷಕ್ಕೆ ಸೇರಿಲ್ಲ ಎಂದಿದ್ದರು.
ಕಳೆದ ಲೋಕಸಭಾ ಚುನಾವಣೆ ವೇಳೆಗೆ ಪ್ರಚಾರಕ್ಕೆ ಬಂದ ಆಮ್​ ಆದ್ಮಿ ಮುಖಂಡರು, ಕಾರ್ಯಕರ್ತರು ನಮಗೆಲ್ಲ ಟೊಪ್ಪಿ ಕೊಟ್ಟಿದ್ದರು. ಅದನ್ನು ಹಾಕಿಕೊಂಡು ಅವರೊಟ್ಟಿಗೆ ನಿಂತು ಫೋಟೋ ತೆಗೆಸಿಕೊಂಡಿದ್ದೇವೆ ಅಷ್ಟೇ ಎಂದು ಹೇಳಿದ್ದರು.
ಆದರೆ ಅದರ ಬೆನ್ನಲ್ಲೇ ಕಪಿಲ್​ ಗುಜ್ಜರ್​ ತಂದೆ ಹೊಸ ವಿಚಾರವನ್ನು ತಿಳಿಸಿದ್ದಾರೆ. ನನ್ನ ಮಗ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್​ ಷಾ ಅವರ ಕಟ್ಟಾ ಅನುಯಾಯಿ ಎಂದು ಹೇಳಿದ್ದಾರೆ. ಕಪಿಲ್​ ಯಾವಾಗಲೂ ಹಿಂದುತ್ವ, ಹಿಂದು ರಾಷ್ಟ್ರದ ಬಗ್ಗೆ ಮಾತನಾಡುತ್ತಿರುತ್ತಾನೆ ಎಂದಿದ್ದಾರೆ.
ಅಲ್ಲದೆ ಶಾಹೀನ್​ ಬಾಗ್​ ಪ್ರತಿಭಟನೆಯಿಂದ ರಸ್ತೆಗಳು ಬ್ಲಾಕ್​ ಆಗಿದ್ದವು. ನನ್ನ ಮಗನೂ ಸೇರಿ ಹಲವರಿಗೆ ತೊಂದರೆಯಾಗಿತ್ತು. ಒಂದು ತಾಸಿನಲ್ಲಿ ಹೋಗಬಹುದಾದ ಜಾಗಕ್ಕೆ ತಲುಪಲು ನಾಲ್ಕು ಗಂಟೆ ಬೇಕಾಗುತ್ತಿತ್ತು. ಇದು ಆತನನ್ನು ಕೆರಳಿಸಿರಬಹುದು ಎಂದು ಕಪಿಲ್​ ಗುಜ್ಜರ್​ ತಂದೆ ಹೇಳಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + eight =
Remember me
