ನವದೆಹಲಿ:ಪಾಕಿಸ್ತಾನ ಕ್ರಿಕೆಟ್​ ತಂಡದ ಮಾಜಿ ಆಟಗಾರ ಶಾಹೀದ್​ ಅಫ್ರಿದಿ ಭಾರತ ಕ್ರಿಕೆಟ್​ ತಂಡದ ಮಾಜಿ ಆಟಗಾರ ಯುವರಾಜ್​ ಸಿಂಗ್​ ಅವರ ಪ್ರತಿಷ್ಠಾನಕ್ಕೆ 10 ಸಾವಿರ ಡಾಲರ್​ ದೇಣಿಗೆ ನೀಡಿದ್ದರು ಎಂಬ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.
ಕೆನಡಾದಲ್ಲಿರುವ ಯುವಿ ಪ್ರತಿಷ್ಠಾನಕ್ಕೆ ಶಾಹೀದ್​ ಆಫ್ರಿದಿ ದೇಣಿಗೆ ನೀಡಿದ್ದ ಸಂಗತಿಯನ್ನು ಪಾಕಿಸ್ತಾನದ ಪತ್ರಕರ್ತ ಸಾಜ್​ ಸಾದಿಕ್​ ಟ್ವಿಟರ್​ನಲ್ಲಿ ಬಹಿರಂಗಪಡಿಸಿದ್ದಾರೆ.
ಕೆಲದಿನಗಳ ಹಿಂದೆ ಕರೊನಾ ವಿರುದ್ಧದ ಹೋರಾಟಕ್ಕಾಗಿ ಪಾಕಿಸ್ತಾನದ ಶಾಹೀದ್​ ಆಫ್ರಿದಿ ಪ್ರತಿಷ್ಠಾನಕ್ಕೆ ದೇಣಿಗೆ ನೀಡುವಂತೆ ಯುವರಾಜ್​ ಸಿಂಗ್​ ಮತ್ತು ಭಾರತದ ಮಾಜಿ ಸ್ಪಿನ್ನರ್​ ಹರ್ಭಜನ್​ ಸಿಂಗ್​ ಪ್ರಚಾರ ಮಾಡಿದ್ದರು. ಭಾರತದಲ್ಲಿ ಈ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.
ಭಾರತ ಮತ್ತು ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ಸಂಬಂಧ ಸಂಪೂರ್ಣ ಹಳಸಿದೆ. ಇದರಿಂದಾಗಿ ಐಸಿಸಿ ಟೂರ್ನಿಗಳನ್ನು ಹೊರತುಪಡಿಸಿ, ಬೇರಾವುದೇ ಟೂರ್ನಿಗಳಲ್ಲಿ ಪಾಕಿಸ್ತಾನದ ವಿರುದ್ಧ ಆಡಲು ಭಾರತ ನಿರಾಕರಿಸುತ್ತದೆ. ಹೀಗಿರುವಾಗ ಶಾಹೀದ್​ ಆಫ್ರಿದಿ ಪ್ರತಿಷ್ಠಾನಕ್ಕೆ ದೇಣಿಗೆ ನೀಡುವಂತೆ ಭಾರತದ ಮಾಜಿ ಆಟಗಾರರು ಪ್ರಚಾರ ಮಾಡಿದ್ದು ಭಾರತೀಯರೆಲ್ಲರ ಆಕ್ರೋಶಕ್ಕೆ ಕಾರಣವಾಗಿತ್ತು.
Shahid Afridi "When I was in Canada, I went to support Yuvraj Singh's foundation and announced a donation of $10,000 for it. Everyone in Pakistan supported me and nobody said to me why did you make that donation, why are you supporting India"
— Saj Sadiq (@SajSadiqCricket)April 13, 2020

ಭಾರತದ ವಿರಾಟ್​ ಕೊಹ್ಲಿ ಪರಿಪೂರ್ಣ ಪ್ಯಾಕೇಜ್​, ಆದರೂ ಟೆಸ್ಟ್​ನಲ್ಲಿ ಸ್ಟೀವ್​ ಸ್ಮಿತ್​ ಬೆಸ್ಟ್​… ಹೀಗೆಂದವರು ಇವರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × one =
Remember me
