ನವದೆಹಲಿ:ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿಗೆ ಕರೊನಾ ವೈರಸ್ ಪಾಸಿಟಿವ್ ದೃಢಪಟ್ಟಿದೆ. ಇದರಿಂದ ಮಹಾಮಾರಿ ಸೋಂಕಿಗೆ ಒಳಗಾದ ಮೊದಲ ಸ್ಟಾರ್ ಆಟಗಾರ ಎನಿಸಿಕೊಂಡಿದ್ದಾರೆ. ‘ಗುರುವಾರ ನನಗೆ ಆರೋಗ್ಯ ಸರಿ ಇರಲಿಲ್ಲ. ದೇಹದಲ್ಲಿ ನೋವು ಕಾಣಿಸಿಕೊಂಡಿತ್ತು. ನಾನು ಪರೀಕ್ಷೆಗೊಳಗಾದಾಗ ದುರದೃಷ್ಟವಶಾತ್ ನನಗೆ ಸೋಂಕು ದೃಢಪಟ್ಟಿದೆ. ಶೀಘ್ರ ಚೇತರಿಕೆಗಾಗಿ ಪ್ರಾರ್ಥಿಸುತ್ತಿದ್ದೇನೆ ಎಂದು 40 ವರ್ಷದ ಅಫ್ರಿದಿ ಟ್ವಿಟ್ಟರ್ ನಲ್ಲಿ ಬರೆದಿದ್ದಾರೆ.ತೌಫೀಕ್ ಉಮರ್ ನಂತರ ಕೋವಿಡ್ -19 ಸೋಂಕಿಗೊಳಗಾದ ಎರಡನೇ ಪಾಕಿಸ್ತಾನ ಅಂತಾರಾಷ್ಟ್ರೀಯ ಕ್ರಿಕೆಟಿಗ ಆಗಿದ್ದಾರೆ. ತೌಫೀಕ್ ಕೆಲವು ದಿನಗಳ ಹಿಂದೆ ಚೇತರಿಸಿಕೊಂಡಿರುವುದಾಗಿ ಘೋಷಿಸಿದ್ದರು. ಲೆಗ್ ಸ್ಪಿನ್ನರ್ ರಿಯಾಜ್ ಶೇಖ್ ಈ ತಿಂಗಳ ಆರಂಭದಲ್ಲಿ ಕರಾಚಿಯಲ್ಲಿ ನಿಧನರಾಗಿದ್ದರು.
ಇದನ್ನೂ ಓದಿ:‘ನೆಟ್ಟಿ’ಗರ ದೃಷ್ಟಿಯಲ್ಲಿ ಇವರು ‘ಸೂಪರ್​​ ದಾದಿ’; 84ರ ಹರೆಯದಲ್ಲೂ ಈ ಅಜ್ಜಿ ಮಾಡಿದ್ದೇನು ಗೊತ್ತಾ?
1996 ರಲ್ಲಿ ಪಾಕಿಸ್ತಾನ ತಂಡಕ್ಕೆ ಪಾದಾರ್ಪಣೆ ಮಾಡಿದ ಅಫ್ರಿದಿ 27 ಟೆಸ್ಟ್, 398 ಏಕದಿನ ಮತ್ತು 99 ಟಿ20 ಪಂದ್ಯಗಳನ್ನಾಡಿದ್ದಾರೆ. ಆರಂಭಿಕ ಬ್ಯಾಟ್ಸ್‌ಮನ್ ಆಗಿ ವೃತ್ತಿಜೀವನವನ್ನು ಪ್ರಾರಂಭಿಸಿದ ಅಫ್ರಿದಿ, ವೃತ್ತಿಜೀವನ ಮುಂದುವರೆದಂತೆ ಆಲ್‌ರೌಂಡರ್ ಆಗಿ ರೂಪುಗೊಂಡರು. ಟೆಸ್ಟ್, ಏಕದಿನ ಮತ್ತು ಟಿ 20 ಪಂದ್ಯಗಳಲ್ಲಿ ಕ್ರಮವಾಗಿ 1716, 8064 ಮತ್ತು 1416 ರನ್ ಗಳಿಸಿದ್ದಾರೆ.2011 ರ ಏಕದಿನ ವಿಶ್ವಕಪ್‌ನಲ್ಲಿ ಅಫ್ರಿದಿ ಪಾಕಿಸ್ತಾನ ತಂಡವನ್ನು ಮುನ್ನಡೆಸಿದರು, ಇದರಲ್ಲಿ ಸೆಮಿಫೈನಲ್‌ನಲ್ಲಿ ಅಂತಿಮವಾಗಿ ಭಾರತ ಅವರನ್ನು ಸೋಲಿಸಿತು. ಅಫ್ರಿದಿ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಂತ ವೇಗದ ಶತಕವನ್ನು ಗಳಿಸಿದ ದಾಖಲೆಯನ್ನು ಹೊಂದಿದ್ದರು. ಆದರೆ 2014 ರಲ್ಲಿ ನ್ಯೂಜಿಲೆಂಡ್‌ನ ಕೋರೆ ಆಂಡರ್ಸನ್ ಆ ದಾಖಲೆಯನ್ನು ಮುರಿದಿದ್ದರು.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮನೆ ಬಾಗಿಲಿಗೆ ಕ್ವಾರಂಟೈನ್ ನೋಟಿಸ್​ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + ten =
Remember me
