ಮುಂಬೈ:ಬಾಲಿವುಡ್​ ನಟ ಶಾರುಖ್​ ಖಾನ್​ ಇಂದು ಡ್ರಗ್ಸ್​ ಕೇಸಲ್ಲಿ ಜೈಲಿನಲ್ಲಿರುವ ತಮ್ಮ ಮಗ ಆರ್ಯನ್​ ಖಾನ್​​ಅನ್ನು ಭೇಟಿ ಮಾಡಿದರು. ಕ್ರೂಸ್​ ಶಿಪ್​ನಲ್ಲಿ ಡ್ರಗ್ಸ್​ ಪಾರ್ಟಿ ಹಿನ್ನೆಲೆಯಲ್ಲಿ ಅ.3 ರಂದು ಬಂಧಿಸಲ್ಪಟ್ಟ ನಂತರ ಕುಟುಂಬದ ಸದಸ್ಯರನ್ನು ಆರ್ಯನ್​ ಭೇಟಿ ಮಾಡಿದ್ದು ಇದೇ ಮೊದಲು ಎನ್ನಲಾಗಿದೆ.
ಭದ್ರತೆಯ ದೃಷ್ಟಿಯಿಂದ ಜೈಲಿನ ಪ್ರದೇಶದಲ್ಲಿ ಬೇರೆಯವರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದ್ದರೂ, ಖೈದಿಗಳ ಭೇಟಿಯ ಸಾಮಾನ್ಯ ನಿಯಮಗಳ ಅನುಸಾರವಾಗಿಯೇ ಶಾರುಖ್​ ಖಾನ್​ರ ಭೇಟಿಗೆ ಅವಕಾಶ ನೀಡಲಾಯಿತು. ಇನ್ಸ್​ಸ್ಪೆಕ್ಟರ್​ ಮಟ್ಟದ ಓರ್ವ ಅಧಿಕಾರಿ ಮತ್ತು ಐವರು ಇತರ ಜೈಲು ಸಿಬ್ಬಂದಿಯ ಉಪಸ್ಥಿತಿಯಲ್ಲಿ ಮಗನೊಂದಿಗೆ 18 ನಿಮಿಷಗಳ ಕಾಲ ಶಾರುಖ್​ ಮಾತನಾಡಿದರು. ಜೈಲಿನ ನಿಯಮ ಮತ್ತು ಕೋವಿಡ್​ ಪ್ರೋಟೋಕಾಲ್​ನಂತೆ ಗ್ರಿಲ್ ಮತ್ತು ಗಾಜಿನ ಗೋಡೆಯಿಂದ ಬೇರ್ಪಟ್ಟ ಅಪ್ಪ-ಮಗ ಇಂಟರ್​ಕಾಂ ಬಳಸಿ ಮಾತನಾಡಿದರು ಎನ್ನಲಾಗಿದೆ.
ಇದನ್ನೂ ಓದಿ:ಶಾರುಖ್​ ಪುತ್ರ ಆರ್ಯನ್​ ಖಾನ್​ಗೆ ಜಾಮೀನು ನಿರಾಕರಿಸಲು ಕಾರಣವೇನು? ಕೋರ್ಟ್​ ಹೇಳಿದ್ದಿಷ್ಟು…!
ನಿನ್ನೆಯ ದಿನ ಆರ್ಯನ್​ ಖಾನ್​ರ ಜಾಮೀನು ಅರ್ಜಿಯನ್ನು ಎನ್​ಡಿಪಿಎಸ್​ ವಿಶೇಷ ಕೋರ್ಟ್​ ವಜಾಗೊಳಿಸಿತ್ತು. ಮುಂಬೈನ ಅರ್ಥರ್​ ರೋಡ್​ ಜೈಲಿನಲ್ಲಿ ಅದಾಗಲೇ 13 ದಿನ ಕಳೆದಿರುವ ಆರ್ಯನ್​ ಪರವಾಗಿ ಆತನ ವಕೀಲರು ಶೀಘ್ರವೇ ಹೈಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ.(ಏಜೆನ್ಸೀಸ್)
ಎಷ್ಟೇ ಶಕ್ತಿಶಾಲಿಯಾದರೂ, ವಂಚಕರನ್ನು ಸರ್ಕಾರ ಬಿಡುವುದಿಲ್ಲ: ಪ್ರಧಾನಿ ಮೋದಿ

ಪ್ರಿಯಾಂಕ ಗಾಂಧಿ ಗಾಡಿಗೆ ಮತ್ತೆ ಬ್ರೇಕ್​! ಆಗ್ರಾಗೆ ಹೋಗದಂತೆ ತಡೆದ ಯುಪಿ ಪೊಲೀಸರು

ಸಾಮರ್ಥ್ಯ-ಸಮತೋಲನಕ್ಕೆ ಸವಾಲು, ಈ ಯೋಗಾಸನ! ಭುಜಕ್ಕೆ ಶಕ್ತಿ ನೀಡುವ ಭಂಗಿ

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:two × four =
Remember me
