ನವದೆಹಲಿ:ಇಂದಿನಿಂದ (ಮಾರ್ಚ್​ 22) 17ನೇ ಆವೃತ್ತಿಯ ಐಪಿಎಲ್ ಟೂರ್ನಮೆಂಟ್​ ಆರಂಭವಾಗಲಿದೆ. ದೇಶಿಯ ಆಟಗಾರರಿಂದ ಹಿಡಿದು ವಿದೇಶಿ ಆಟಗಾರರವರೆಗೂ ಎಲ್ಲರು ಈ ಮೆಗಾ ಲೀಗ್‌ನಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಲು ಸಿದ್ಧರಾಗಿದ್ದಾರೆ. ಆದರೆ, ಟೀಂ ಇಂಡಿಯಾದ ಅನುಭವಿ ವೇಗಿ ಮೊಹಮ್ಮದ್ ಶಮಿ ಮಾತ್ರ ಈ ಬಾರಿಯ ಕ್ಯಾಶ್ ರಿಚ್ ಲೀಗ್​ಗೆ ಅಲಭ್ಯರಾಗಿದ್ದಾರೆ. ಏಕೆಂದರೆ, ಏಕದಿನ ವಿಶ್ವಕಪ್-2023 ಸಮಯದಲ್ಲಿ ಗಾಯಗೊಂಡಿದ್ದ ಶಮಿ, ಇಂಜೆಕ್ಷನ್​ ತೆಗೆದುಕೊಂಡು ನೋವು ಸಹಿಸಿಕೊಂಡು ದೇಶಕ್ಕಾಗಿ ವಿಶ್ವಕಪ್ ಆಡಿ ಮುಸಿದರು. ಇತ್ತೀಚೆಗಷ್ಟೇ ಶಮಿ ಅವರು ವಿದೇಶಕ್ಕೆ ಹೋಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಇನ್ನೂ ಆರು ತಿಂಗಳು ಬೇಕಾಗಬಹುದು. ಹೀಗಾಗಿ ಐಪಿಎಲ್​ನಲ್ಲಿ ಭಾಗವಹಿಸುತ್ತಿಲ್ಲ. ಇದೇ ಸಮಯದಲ್ಲಿ ಶಮಿ ಅವರ ಮಾಜಿ ಪತ್ನಿ ಹಸಿನ್ ಜಹಾನ್ ಗಂಭೀರ ಆರೋಪ ಮಾಡಿದ್ದಾರೆ.
ಶಮಿ ನನ್ನನ್ನು ಕೊಲ್ಲಲು ಯತ್ನಿಸುತ್ತಿದ್ದಾರೆ ಎಂದು ಹಸಿನ್ ಜಹಾನ್ ಆರೋಪಿಸಿದ್ದಾರೆ. ಕೊಲೆ ಮಾಡಲು ಪ್ಲಾನ್ ಮಾಡುತ್ತಿದ್ದಾನೆ. ಉತ್ತರ ಪ್ರದೇಶ ಪೊಲೀಸರು ಮತ್ತು ಬಿಜೆಪಿ ಸರ್ಕಾರದ ಸಹಾಯದಿಂದ ಸಂಚು ರೂಪಿಸುತ್ತಿದ್ದಾನೆ. ನನಗೆ ಇಲ್ಲಿಯವರೆಗೆ ಪೂರ್ಣ ನ್ಯಾಯ ಸಿಕ್ಕಿಲ್ಲ. ಸುಪ್ರೀಂಕೋರ್ಟ್‌ಗೆ ಹೋದರೆ ಅಲ್ಲಿ ಪ್ರಕರಣ ಪದೇಪದೆ ಮುಂದೂಡಲಾಗುತ್ತಿದೆ. ಹೈಕೋರ್ಟ್‌ನಲ್ಲಂತೂ ನನ್ನ ಮಾತು ಕೇಳುವವರೇ ಇಲ್ಲ. ಕೆಲವರ ಷಡ್ಯಂತ್ರದಿಂದ ನನ್ನ ಪ್ರಕರಣ ಹೈಕೋರ್ಟ್‌ನಲ್ಲೂ ದಾಖಲಾಗಿಲ್ಲ ಎಂದು ಹಸಿನ್ ಜಹಾನ್ ಹೇಳಿದ್ದಾರೆ. ಶಮಿ ಮಾಜಿ ಪತ್ನಿಯ ಕಾಮೆಂಟ್ ಈಗ ವೈರಲ್ ಆಗಿದೆ.
ಅಂದಹಾಗೆ ಶಮಿ ವಿರುದ್ಧ ಹಸಿನಾ ಜಹಾನ್​ ಆರೋಪ ಮಾಡುತ್ತಿರುವುದು ಇದೇ ಮೊದಲೇನಲ್ಲ. ವ್ಯಭಿಚಾರ, ಮ್ಯಾಚ್ ಫಿಕ್ಸಿಂಗ್ ಮತ್ತು ಕೌಟುಂಬಿಕ ದೌರ್ಜನ್ಯ ಸೇರಿದಂತೆ ಸರಣಿ ಆರೋಪಗಳನ್ನು ಮಾಡಿದ್ದರು. ಆರೋಪ ಕೇಳಿಬಂದ ಬೆನ್ನಲ್ಲೇ ಬಿಸಿಸಿಐ ಶಮಿ ಒಪ್ಪಂದವನ್ನು ತಡೆಹಿಡಿದಿತ್ತು. ಆದಾಗ್ಯೂ, ತನಿಖೆಯ ನಂತರ ಬಿಸಿಸಿಐ ಶಮಿ ವಿರುದ್ಧದ ಮ್ಯಾಚ್ ಫಿಕ್ಸಿಂಗ್ ಆರೋಪ ಸುಳ್ಳು ಎಂದು ಹೇಳಿ, ಸ್ವತಃ ಒಪ್ಪಂದಕ್ಕೆ ಮರಳಿತು. ಅನೇಕ ವರ್ಷಗಳಿಂದ ಇಬ್ಬರ ವೈವಾಹಿಕ ಜೀವನದ ಸಂಘರ್ಷ ಮುಂದುವರಿದುಕೊಂಡು ಬರುತ್ತಿದೆ.
ಮೊಹಮ್ಮದ್ ಶಮಿ 2014ರ ಜೂನ್ 6ರಂದು ಹಸಿನ್ ಜಹಾನ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆದರೆ, 4 ವರ್ಷಗಳ ನಂತರ ಶಮಿಗೆ ಪತ್ನಿ ಡಿವೋರ್ಸ್ ನೀಡಿದ್ದಾರೆ. ಶಮಿ ವಿರುದ್ಧ ಜಹಾನ್​, ಜಾಧವಪುರ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಶಮಿ, ಅನೇಕ ಮಹಿಳೆಯ ಜತೆ ಚಾಟಿಂಗ್​ ಮಾಡಿದ್ದಾರೆ ಎಂದು ಆರೋಪ ಮಾಡಿರುವ ಜಹಾನ್​, ಮಾಜಿ ಪತಿಯ ಕಾಲ್​ ರೆಕಾರ್ಡಿಂಗ್ಸ್​ ಸಹ ಶೇರ್​ ಮಾಡಿದ್ದಾರೆ. 2018ರಿಂದ ಶಮಿ ವೈವಾಹಿಕ ಜೀವನದಲ್ಲಿ ಬಿರುಗಾಳಿ ಎದ್ದಿದ್ದು, 2020ರವರೆಗೂ ತುಂಬಾ ಚರ್ಚೆಯಾಯಿತು. ಈ ನಡುವೆ ಶಮಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದಾರೆ. ಎಲ್ಲೂ ಕುಗ್ಗದ ಶಮಿ ತಮ್ಮ ಪ್ರಯತ್ನದಿಂದ ಕ್ರಿಕೆಟ್​ನಲ್ಲಿ ಮತ್ತೆ ಪುಟಿದೆದ್ದಿದ್ದು, ಎಲ್ಲ ಮಾದರಿಯ ಕ್ರಿಕೆಟ್​ನಲ್ಲಿ ಸ್ಟಾರ್​ ಬೌಲರ್​ ಎನಿಸಿಕೊಂಡಿದ್ದಾರೆ.(ಏಜೆನ್ಸೀಸ್​)
ಬಿಗ್​​ಬಾಸ್ ಕನ್ನಡ ಒಟಿಟಿ ಸೀಸನ್​ 1ರ ಸ್ಪರ್ಧಿ, ರೀಲ್ಸ್​ ಸ್ಟಾರ್​ ಸೋನು ಶ್ರೀನಿವಾಸ್​ ಗೌಡ ಅರೆಸ್ಟ್​!

ಬಂಧನ ಬಳಿಕವೂ ಕೇಜ್ರಿವಾಲ್​ ಸಿಎಂ ಆಗಿ ಉಳಿಯುತ್ತಾರೆಂದ AAP: ಇದು ಸಾಧ್ಯಾನಾ? ಕಾನೂನು ತಜ್ಞರು ಹೇಳೋದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 9 =
Remember me
