ಮುಂಬೈ:ಭಾರತದ ಷೇರುಪೇಟೆಗೆ ಗುರುವಾರ ಕರಾಳವಾಗಿ ಪರಿಣಮಿಸಿತು. ಆರು ತಿಂಗಳ ಅವಧಿಯಲ್ಲಿ ಮೊದಲ ಸಲ 1,159 ಅಂಶ ಕುಸಿತವನ್ನು ಬಿಎಸ್​ಇ ಸೆನ್ಸೆಕ್ಸ್ ಒಂದೇ ದಿನ ಕಂಡಿತು. ಹೂಡಿಕೆದಾರರ 4.82 ಲಕ್ಷ ಕೋಟಿ ರೂಪಾಯಿ ಕರಗಿ ಹೋಯಿತು. ತಿಂಗಳ ಡೆರಿವೇಟಿವ್ ಕಾಂಟ್ರಾಕ್ಟ್ ್ಸ (ಮಾಸಿಕ ವಹಿವಾಟು ಒಪ್ಪಂದ) ಅವಧಿ ಮುಗಿಯುತ್ತಿರುವ ಸೆಂಟಿಮೆಂಟ್ ಷೇರುಪೇಟೆ ಮೇಲೆ ಪರಿಣಾಮ ಬೀರಿದೆ. ಇದರಿಂದಾಗಿ ಬ್ಯಾಂಕಿಂಗ್, ಎಫ್​ಎಂಸಿಜಿ, ಎನರ್ಜಿ ಕ್ಷೇತ್ರದ ಕಂಪನಿಗಳ ಷೇರುಗಳ ಮೇಲೆ ಮಾರಾಟದ ಒತ್ತಡ ಬಿತ್ತು. ಮಿಡ್​ಕ್ಯಾಪ್, ಸ್ಮಾಲ್​ಕ್ಯಾಪ್ ಕಂಪನಿಗಳೂ ಭಾರಿ ನಷ್ಟ ಅನುಭವಿಸಿದವು. ಈ ನಷ್ಟದ ಪ್ರಮಾಣ ಶೇಕಡ 1.59ರಷ್ಟು ಇತ್ತು. ಜಾಗತಿಕ ಮಟ್ಟದಲ್ಲಿ ಅಮೆರಿಕ ಸೆಂಟ್ರಲ್ ಬ್ಯಾಂಕ್ ಸಭೆಯ ಕಡೆಗೆ ಹೂಡಿಕೆದಾರರು ಗಮನಹರಿಸಿದ್ದಾರೆ. ಏಷ್ಯಾ, ಶಾಂಘೈ, ಹಾಂಕಾಂಗ್, ಸಿಯೋಲ್, ಟೊಕಿಯೊಗಳಲ್ಲಿ ಷೇರುಪೇಟೆ ವಹಿವಾಟು ಋಣಾತ್ಮಕವಾಗಿದ್ದು, ನಷ್ಟದಲ್ಲಿ ವಹಿವಾಟು ಕೊನೆಗೊಳಿಸಿವೆ. ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದರ ಪ್ರತಿ ಬ್ಯಾರೆಲ್​ಗೆ ಶೇಕಡ 1.11 ಕುಸಿದು 82.94 ಡಾಲರ್ ತಲುಪಿದೆ. ಇದೇ ವೇಳೆ, ಕರೆನ್ಸಿ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ 11 ಪೈಸೆ ಏರಿದ್ದು 74.92 ರೂಪಾಯಿ ಆಗಿದೆ.
ಎಫ್​ಐಐ ಹೂಡಿಕೆ ಹಿಂಪಡೆತ:ತಿಂಗಳ ಡೆರಿವೇಟಿವ್ ಕಾಂಟ್ರಾಕ್ಟ್ ್ಸ ಅವಧಿ ಮುಗಿಯುತ್ತಿರುವ ಕಾರಣ ಬುಧವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್​ಐಐ) 1,913.36 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದರು. ಅಕ್ಟೋಬರ್ ತಿಂಗಳಲ್ಲಿ ಎಫ್​ಐಐ ಮಾರಾಟ ಮಾಡಿದ ಷೇರುಮೌಲ್ಯ 9,295.78 ಕೋಟಿ ರೂಪಾಯಿ ಎಂಬುದನ್ನು ನ್ಯಾಷನಲ್ ಸೆಕ್ಯುರಿಟೀಸ್ ಡೆಪಾಸಿಟರಿ ಲಿಮಿಟೆಡ್​ನ ಡೇಟಾ ಬಹಿರಂಗಪಡಿಸಿದೆ.
ಏರಿದ ಚಿನ್ನ, ಜಾರಿದ ಬೆಳ್ಳಿ:ದೆಹಲಿಯ ಚಿನಿವಾರ ಪೇಟೆಯಲ್ಲಿ ಗುರುವಾರದ ವಹಿವಾಟಿನಲ್ಲಿ ಚಿನ್ನದ ದರ 10 ಗ್ರಾಮಿಗೆ 112 ರೂಪಾಯಿ ಏರಿದ್ದು 47,050 ರೂಪಾಯಿ ಆಗಿದೆ. ಬುಧವಾರ ಇದು 46,938 ರೂಪಾಯಿ ಇತ್ತು. ಇದೇ ರೀತಿ ಬೆಳ್ಳಿಯ ದರ ಒಂದು ಕಿಲೋಗೆ 203 ರೂಪಾಯಿ ಕುಸಿದು 63,767 ರೂಪಾಯಿ ಆಗಿದೆ. ಬುಧವಾರ ಇದು 63,970 ರೂ. ಇತ್ತು.
6 ಷೇರುಗಳ ಮೌಲ್ಯ ವೃದ್ಧಿ:ಸೆನ್ಸೆಕ್ಸ್ ಸೂಚ್ಯಂಕ ಕುಸಿತ ಕಂಡರೂ, ಸೆನ್ಸೆಕ್ಸ್ ಪಟ್ಟಿಯಲ್ಲಿ 30 ಷೇರುಗಳ ಪೈಕಿ ಕೇವಲ 6 ಕಂಪನಿ ಷೇರುಗಳು ಲಾಭ ದಾಖಲಿಸಿವೆ. ಇದರಲ್ಲಿ ಇಂಡಸ್​ಇಂಡ್ ಬ್ಯಾಂಕ್ ಟಾಪ್ ಗೇನರ್ ಆಗಿದೆ. ಈ ಕಂಪನಿಯ ಎರಡನೇ ತ್ರೖೆಮಾಸಿಕ ನಿವ್ವಳ ಲಾಭ ಶೇಕಡ 73 ಏರಿಕೆಯಾದ ಕಾರಣ ಶೇಕಡ 2.94ರಷ್ಟು ಷೇರುಮೌಲ್ಯ ವೃದ್ಧಿಯಾಗಿದೆ. ಎಲ್​ಆಂಡ್​ಟಿ, ಅಲ್ಟ್ರಾಟೆಕ್ ಸಿಮೆಂಟ್, ಏಷ್ಯನ್ ಪೇಂಟ್ಸ್, ಮಾರುತಿ, ಬಜಾಜ್ ಫೈನಾನ್ಸ್ ಷೇರು ಮೌಲ್ಯ ವೃದ್ಧಿಯಾಗಿವೆ.
ನಷ್ಟದ ಲೆಕ್ಕಾಚಾರ:ಷೇರುಪೇಟೆಯಲ್ಲಿ ಗುರುವಾರದ ವಹಿವಾಟಿನಲ್ಲಿ ಹೂಡಿಕೆದಾರರು ಕಳೆದುಕೊಂಡದ್ದು ಬರೋಬ್ಬರಿ 4.82 ಲಕ್ಷ ಕೋಟಿ ರೂ. ಇದೇ ವೇಳೆ ಬಿಎಸ್​ಇ ಲಿಸ್ಟೆಡ್ ಕಂಪನಿಗಳ ಒಟ್ಟು ಮಾರುಕಟ್ಟೆ ಬಂಡವಾಳ 2,60,48,949.80 ಕೋಟಿ ರೂಪಾಯಿಗೆ ಇಳಿಕೆಯಾಗಿದೆ.
ದೊಡ್ಡ ಕುಸಿತ:ಬಿಎಸ್​ಇ ಸೆನ್ಸೆಕ್ಸ್ ಗುರುವಾರ ಒಟ್ಟು 1,158.63 ಅಂಶ (1.89%) ಕುಸಿದು 59,984.70 ಅಂಶದಲ್ಲಿ ದಿನದ ವಹಿವಾಟು ಮುಗಿಸಿದೆ. ಏಪ್ರಿಲ್ 12ರಂದು ಸೆನ್ಸೆಕ್ಸ್ 1,708 ಅಂಶ ಕುಸಿತ ಕಂಡಿತ್ತು. ಅದರ ನಂತರ ಗುರುವಾರದ ಕುಸಿತವೇ ಬಹುದೊಡ್ಡ ಮಟ್ಟದ್ದು. ಎನ್​ಎಸ್​ಇ ನಿಫ್ಟಿ ಕೂಡ 353.70 ಅಂಶ (1.94%) ಕುಸಿದು 17,857.25 ಅಂಶದಲ್ಲಿ ದಿನದ ವಹಿವಾಟು ಕೊನೆಗೊಳಿಸಿದೆ. ಸೆನ್ಸೆಕ್ಸ್ ಪಟ್ಟಿಯಲ್ಲಿ ಐಟಿಸಿ ಟಾಪ್ ಲೂಸರ್ ಆಗಿದ್ದು, ಎರಡನೇ ತ್ರೖೆಮಾಸಿಕದಲ್ಲಿ ನಿರೀಕ್ಷಿತ ಮಟ್ಟಕ್ಕಿಂತ ಶೇಕಡ 10.09 ಕಡಿಮೆ ನಿವ್ವಳ ಲಾಭ ದಾಖಲಿಸಿದ್ದು ಇದಕ್ಕೆ ಕಾರಣ. ಐಟಿಸಿ ಷೇರು ಮೌಲ್ಯ ಶೇಕಡ 5.54 ಕುಸಿತ ಕಂಡಿದೆ. ಐಸಿಐಸಿಐ ಬ್ಯಾಂಕ್, ಕೊಟಾಕ್ ಬ್ಯಾಂಕ್, ಏಕ್ಸಿಸ್ ಬ್ಯಾಂಕ್, ಟೈಟಾನ್, ಎಸ್​ಬಿಐ, ಎಚ್​ಡಿಎಫ್​ಸಿ ಬ್ಯಾಂಕುಗಳ ಷೇರು ಮೌಲ್ಯ ಶೇಕಡ 4.39ರಷ್ಟು ಕುಸಿತ ಕಂಡಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + three =
Remember me
