ಯುದ್ಧದ ಪರಿಣಾಮವಾಗಿ ಭಾರತದ ಷೇರುಪೇಟೆ ಕುಸಿದಿದ್ದು, ಗುರುವಾರ ಒಂದೇ ದಿನ ಹೂಡಿಕೆದಾರರು 13,44,488 ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದಾರೆ. ಬಿಎಸ್​ಇ ಸೆನ್ಸೆಕ್ಸ್ 2702.15 ಅಂಶ (4.72%)(54,529.91) ಕುಸಿತ ಕಂಡರೆ ಎನ್​ಎಸ್​ಇ ನಿಫ್ಟಿ 815.30 ಅಂಶ (4.78%)(16,247.95) ಕುಸಿತ ದಾಖಲಿಸಿದೆ. ಇನ್ನು ಬಿಎಸ್​ಇ ಮಾರುಕಟ್ಟೆ ಬಂಡವಾಳ ಮೌಲ್ಯ 2,42,24,179.79 ಕೋಟಿ ರೂ.ಗೆ ಇಳಿದರೆ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು 3,417.16 ಕೋಟಿ ರೂ. ಮೊತ್ತದ ಷೇರು ಮಾರಾಟ ಮಾಡಿದ್ದಾರೆ.
ಜಾಗತಿಕ ಷೇರು ಹೊಡೆತ:ಯುದ್ಧದ ಪರಿಣಾಮ ಜಾಗತಿಕ ಮಾರುಕಟ್ಟೆ ಭಾರಿ ಪತನ ಕಂಡಿದ್ದು, ತೈಲ ಬೆಲೆ ಪ್ರತಿ ಬ್ಯಾರೆಲ್​ಗೆ 6 ಡಾಲರ್​ನಷ್ಟು ಏರಿಕೆಯಾಗಿದೆ. ಯುರೋಪ್, ಏಷ್ಯಾ ಮತ್ತು ಅಮೆರಿಕದ ಪೇಟೆಯಲ್ಲಿ ಸೂಚ್ಯಂಕಗಳು ಭಾರಿ ಕುಸಿತ ಕಂಡಿವೆ. ಕರೆನ್ಸಿ ಮಾರುಕಟ್ಟೆಯಲ್ಲಿ ಅಮೆರಿಕ ಡಾಲರ್ ಎದುರು ರುಬೆಲ್ ಮೌಲ್ಯ ಶೇಕಡ 7.5 ಕುಸಿದಿದೆ. ವಾಲ್ ಸ್ಟ್ರೀಟ್​ನ ಎಸ್​ಆಂಡ್ಪಿ 500 ಸೂಚ್ಯಂಕ 1.8% (ಎಂಟು ತಿಂಗಳ ಕನಿಷ್ಠ), ನಾಸ್ಡಾಕ್ ಫ್ಯೂಚರ್ಸ್ ಶೇಕಡ 2.8 ಕುಸಿದಿವೆ. ಅಮೆರಿಕದ ಬಾಂಡ್ ಫಂಡ್, ಡಾಲರ್, ಚಿನ್ನದ ಬೆಲೆ ಏರಿಕೆಯಾಗಿವೆ. ಜಪಾನ್​ನ ಟೋಕಿಯೋ ಷೇರುಪೇಟೆ ಸೂಚ್ಯಂಕ ನಿಕ್ಕೀ ಶೇಕಡ 2.4 ಕುಸಿದಿದೆ.
ತೈಲಬೆಲೆ 7.92% ಹೆಚ್ಚಳ:ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್​ಗೆ ಶೇಕಡ 7.92 ಏರಿಕೆ ಆಗಿ 104.51 ಡಾಲರ್ ತಲುಪಿದೆ. ಜಾಗತಿಕ ವಿದ್ಯಮಾನಗಳ ಕಾರಣ 95-97 ಡಾಲರ್ ಆಸುಪಾಸಿನಲ್ಲಿದ್ದ ತೈಲ ಬೆಲೆ ಬಹುಬೇಗ 100 ಡಾಲರ್ ಗಡಿ ದಾಟಿದೆ.
ಚಿನ್ನದ ಬೆಲೆ ಭಾರಿ ಏರಿಕೆ:ಮಲ್ಟಿ ಕಮಾಡಿಟಿ ಎಕ್ಸ್​ಚೇಂಜ್​ನಲ್ಲಿ ಏಪ್ರಿಲ್​ನಲ್ಲಿ ಪೂರೈಕೆಯಾಗುವ ಚಿನ್ನದ ಬೆಲೆ 10 ಗ್ರಾಮಿಗೆ ಭಾರಿ ಏರಿಕೆ ಕಂಡುಬಂದಿದೆ. ಗುರುವಾರದ ವಹಿವಾಟಿನಲ್ಲಿ 1,432 ರೂಪಾಯಿ (2.84%) ಏರಿ 51,811 ರೂಪಾಯಿ ಆಗಿದ್ದು, 11,933 ಲಾಟ್ ವಹಿವಾಟು ನಡೆಯಿತು. ನವದೆಹಲಿಯ ಚಿನಿವಾರ ಪೇಟೆಯಲ್ಲಿ ಚಿನ್ನದ ಬೆಲೆ ಗುರುವಾರ 10 ಗ್ರಾಮಿಗೆ 1,656 ರೂಪಾಯಿ ಏರಿದ್ದು 51,627 ರೂಪಾಯಿ ಆಗಿದೆ. ಬೆಳ್ಳಿಯ ಬೆಲೆ ಒಂದು ಕಿಲೋಗೆ 2,350 ರೂಪಾಯಿ ಹೆಚ್ಚಾಗಿ 66,267 ರೂಪಾಯಿ ಆಗಿದೆ.
ರಷ್ಯಾ ಷೇರುಪೇಟೆ 50% ಕುಸಿತ:ಯುದ್ಧದ ಕಾರಣ ರಷ್ಯಾದ ಮಾಸ್ಕೋ ಎಕ್ಸ್​ಚೇಂಜ್​ನಲ್ಲಿ ಗುರುವಾರ ಬೆಳಗ್ಗೆ ಷೇರುಮೌಲ್ಯಗಳು ಶೇಕಡ 50ಕ್ಕೂ ಹೆಚ್ಚು ಕುಸಿತ ಕಂಡಿತು. ಆರ್​ಟಿಎಸ್ ಸೂಚ್ಯಂಕ 50.05 % ಕುಸಿದು 612.69ಕ್ಕೆ ತಲುಪಿತು. ಎಂಒಇಎಕ್ಸ್ ಬ್ರಾಡ್ ಮಾರ್ಕೆಟ್ ಕೂಡ 44.59% ಕುಸಿದು 1226.65 ಅಂಶಕ್ಕೆ ಇಳಿದಿದೆ. ಎರಡು ಗಂಟೆ ಕಾಲ ಪೇಟೆ ವಹಿವಾಟು ಸ್ಥಗಿತಗೊಳಿಸಲಾಗಿತ್ತು.



ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × four =
Remember me
