ಮುಂಬಯಿ:ಕಳೆದ ಐದಾರು ದಿನಗಳಿಂದ ಸಾಕಷ್ಟು ಅನಿರೀಕ್ಷಿತ ಏರಿಳಿತ ಕಂಡಿದ್ದ ಷೇರುಪೇಟೆ, ಕೇಂದ್ರ ಸರ್ಕಾರದ 2021-22ರ ಬಜೆಟ್‌ನಿಂದ ತೀವ್ರ ಉತ್ತೇಜಿತಗೊಂಡಿದೆ. ಸೋಮವಾರದ ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್ 2315 ಅಂಶ ಏರಿಕೆ ಕಂಡು ಅಚ್ಚರಿ ಮೂಡಿಸಿದೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ 400 ಅಂಶ ಏರಿಕೆ ಕಂಡಿದ್ದ ಸೆನ್ಸೆಕ್ಸ್ ಮಧ್ಯಾಹ್ನ 2 ಗಂಟೆಯ ಹೊತ್ತಿಗೆ 1500 ಅಂಶ ಹೆಚ್ಚಾಗಿತ್ತು. 2315 ಅಂಶ ಏರಿಕೆಯೊಂದಿಗೆ ದಿನದ ವಹಿವಾಟು ಅಂತ್ಯವಾಯಿತು. ಒಂದು ಹಂತದಲ್ಲಿ 48764.40ಗೆ ತಲುಪಿದ್ದ ಸೆನ್ಸೆಕ್ಸ್ ಕೊನೆಗೆ 48600ಕ್ಕೆ ಇಳಿದು ಕೊನೆಗೊಂಡಿತು.
ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ ಕೂಡ 646 ಅಂಶಗಳಷ್ಟು ಏರಿಕೆ ಕಂಡು 14281ಕ್ಕೆ ತಲುಪಿತು. ಈ ಹಿಂದಿನ ವಹಿವಾಟಿನ ದಿನಕ್ಕೆ ಹೋಲಿಸಿದರೆ ಇವೆರಡೂ ಕ್ರಮವಾಗಿ ಶೇಕಡಾ 5 ಮತ್ತು ಶೇ 4.74ರಷ್ಟು ಏರಿಕೆ ದಾಖಲಿಸಿದಂತಾಗಿದೆ.
ಕೇಂದ್ರ ಬಜೆಟ್: 75 ವರ್ಷ ಮೇಲ್ಪಟ್ಟವರಿಗೆ ಆದಾಯ ತೆರಿಗೆಯಿಂದ ವಿನಾಯಿತಿ

ಕೇಂದ್ರ ಬಜೆಟ್​: ಮನೆ ನಿರ್ಮಾಣದ ಕನಸುಳ್ಳವರಿಗೆ ಅಗ್ಗದ ಗೃಹಸಾಲ

ಕೇಂದ್ರ ಬಜೆಟ್​: ಹಳೇ ವಾಹನಗಳಿಗೆ ಸ್ಕ್ರ್ಯಾಪಿಂಗ್​ ನೀತಿ ಜಾರಿ

ಕೇಂದ್ರ ಬಜೆಟ್​| ಚುನಾವಣೆ ನಡೆಯುವ ಈ 4 ರಾಜ್ಯಗಳಿಗೆ ಮಾತ್ರ ಬಂಪರ್​ ಅನುದಾನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 17 =
Remember me
