ಮುಂಬೈ:ಹಾಸ್ಪಿಟಲಿಟಿ (ಆತಿಥ್ಯ) ಕ್ಷೇತ್ರದಲ್ಲಿ ವ್ಯವಹರಿಸುವ ಎರಾಯಾ ಲೈಫ್‌ಸ್ಪೇಸ್ ಲಿಮಿಟೆಡ್​ (Eraaya Lifespaces Ltd) ಎಂಬ ಸಣ್ಣ ಕಂಪನಿಯ ಷೇರುಗಳು ಕೇವಲ ಒಂದು ವರ್ಷದಲ್ಲಿ ಹೂಡಿಕೆದಾರರನ್ನು ಶ್ರೀಮಂತರನ್ನಾಗಿಸಿವೆ. ಕಂಪನಿಯ ಷೇರುಗಳು ಹೂಡಿಕೆದಾರರಿಗೆ ಒಂದು ವರ್ಷದಲ್ಲಿ 5000% ಲಾಭವನ್ನು ನೀಡಿವೆ.
ಕಳೆದ ಒಂದು ವರ್ಷದಲ್ಲಿ ಎರಾಯಾ ಲೈಫ್‌ಸ್ಪೇಸ್‌ನ ಷೇರುಗಳ ಬೆಲೆ 11 ರಿಂದ 500 ರೂ.ಗೆ ಏರಿಕೆಯಾಗಿದೆ. ಎರಾಯಾ ಲೈಫ್‌ಸ್ಪೇಸ್‌ನ ಷೇರುಗಳ ಬೆಲೆ ಮಂಗಳವಾರ, ಏಪ್ರಿಲ್ 30 ರಂದು ಶೇಕಡಾ 1.99ರಷ್ಟು ಏರಿಕೆಯಾಗಿ 573.35 ರೂ. ತಲುಪಿತು. ಇದು ಈ ಷೇರಿನ 52 ವಾರಗಳ ಹೊಸ ಗರಿಷ್ಠ ಬೆಲೆಯಾಗಿದೆ. ಈ ಷೇರಿನ 52 ವಾರಗಳ ಕನಿಷ್ಠ ಬೆಲೆ 10.98 ರೂ. ಇದೆ.
ಈ ಷೇರುಗಳು ಕಳೆದ ಒಂದು ವರ್ಷದಲ್ಲಿ ಪ್ರಚಂಡ ಲಾಭವನ್ನು ನೀಡಿವೆ. ಕಂಪನಿಯ ಷೇರುಗಳ ಬೆಲೆ ಮೇ 15, 2023 ರಂದು 10.98 ರೂ. ಇತ್ತು. ಈಗ 573.35 ರೂಪಾಯಿಗೆ ಏರಿಕೆಯಾಗಿದೆ. ಕಳೆದ ಒಂದು ವರ್ಷದಲ್ಲಿ ಕಂಪನಿಯ ಷೇರುಗಳ ಬೆಲೆ 5121% ಹೆಚ್ಚಾಗಿದೆ. ಒಬ್ಬ ವ್ಯಕ್ತಿಯು ಮೇ 15, 2023 ರಂದು ಈ ಷೇರುಗಳಲ್ಲಿ 1 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದ್ದರೆ ಮತ್ತು ತನ್ನ ಹೂಡಿಕೆಯನ್ನು ಉಳಿಸಿಕೊಂಡಿದ್ದರೆ, ಈ ಷೇರುಗಳ ಪ್ರಸ್ತುತ ಮೌಲ್ಯವು 52.21 ಲಕ್ಷ ರೂಪಾಯಿಗಳಾಗಿರುತ್ತದೆ.
ಈ ಷೇರುಗಳ ಬೆಲೆ ಕಳೆದ 6 ತಿಂಗಳಲ್ಲಿ 985% ಕ್ಕಿಂತ ಹೆಚ್ಚು ಏರಿಕೆಯಾಗಿದೆ. ಕಂಪನಿಯ ಷೇರುಗಳ ಬೆಲೆ ನವೆಂಬರ್ 2, 2023 ರಂದು 52.80 ರೂ. ಇತ್ತು. ಈ ವರ್ಷದ ಆರಂಭದಿಂದ ಇಲ್ಲಿಯವರೆಗೆ ಈ ಷೇರುಗಳ ಬೆಲೆ 393% ಹೆಚ್ಚಾಗಿದೆ. ಕಂಪನಿಯ ಷೇರುಗಳ ಬೆಲೆ ಜನವರಿ 1, 2024 ರಂದು ವರ್ಷದ ಆರಂಭದಲ್ಲಿ ರೂ 116.25 ಇತ್ತು. ಕಳೆದ ಒಂದು ತಿಂಗಳಲ್ಲಿ ಈ ಷೇರುಗಳ ಬೆಲೆ 43% ರಷ್ಟು ಏರಿಕೆ ಕಂಡಿದೆ.
ಹಾಸ್ಪಿಟಾಲಿಟಿ (ಆತಿಥ್ಯ ವಲಯ) ವ್ಯವಹಾರವನ್ನು ಪ್ರವೇಶಿಸಿರುವುದಾಗಿ ಎರಾಯಾ ಲೈಫ್‌ಸ್ಪೇಸ್ ಲಿಮಿಟೆಡ್​ ಕಂಪನಿಯು ಷೇರು ಮಾರುಕಟ್ಟೆ ತಿಳಿಸಿದೆ. ಕಂಪನಿಯು ಪುಣೆ ಬಳಿಯ ಲೋನಾವಾಲಾದಲ್ಲಿದೆ. ರಜಾಕಾಲೀನ ವಿಹಾರಕ್ಕಾಗಿ ಐಷಾರಾಮಿ ಆಸ್ತಿಯನ್ನು ಖರೀದಿಸಿದೆ. ಇದಲ್ಲದೆ, ಕಂಪನಿಯು ಮೊಹಾಲಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪವಿರುವ ಮಾಲ್‌ನಲ್ಲಿ ವಾಣಿಜ್ಯ ರಿಟೇಲ್​ ಸ್ಥಳವನ್ನು ಸಹ ಖರೀದಿಸಿದೆ.
ಅದಾನಿ ಕಂಪನಿ ತ್ರೈಮಾಸಿಕ ಲಾಭದಲ್ಲಿ 13% ಕುಸಿತ: ಷೇರು ಖರೀದಿಸಿ ಎನ್ನುತ್ತಾರೆ ತಜ್ಞರು

404ರಿಂದ 26 ರೂಪಾಯಿಗೆ ಕುಸಿದ ಬ್ಯಾಂಕ್​ ಷೇರುಗಳ ಬೆಲೆ: ಬ್ರೋಕರೇಜ್​ ಸಂಸ್ಥೆಗಳು ಹೇಳುವುದೇನು?

ಪ್ರತಿಯೊಂದು ಷೇರಿಗೆ ಒಂದು ಷೇರು ಉಚಿತವಾಗಿ ನೀಡುತ್ತಿದೆ ಕಂಪನಿ: ಒಂದೇ ವರ್ಷದಲ್ಲಿ 313% ಲಾಭ ಗಳಿಸಿದ ಹೂಡಿಕೆದಾರರಿಗೆ ಬೋನಸ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 12 =
Remember me
