ಮುಂಬೈ:ಬೊಂಡಾಡಾ ಇಂಜಿನಿಯರಿಂಗ್ ಲಿಮಿಟೆಡ್​ (Bondada Engineering Ltd.) ಷೇರುಗಳ ಬೆಲೆ ಕೇವಲ 6 ತಿಂಗಳಲ್ಲಿ 75 ರಿಂದ 915 ರೂಪಾಯಿಗೆ ಏರಿಕೆಯಾಗಿದೆ. ಐಪಿಒ ಹೋಲಿಸಿದರೆ ಕಂಪನಿಯ ಷೇರುಗಳ ಬೆಲೆ 1100% ಏರಿಕೆ ದಾಖಲಿಸಿದೆ. ಈ ಕಂಪನಿಯ ಐಪಿಒ ಕಳೆದ ವರ್ಷ ಆಗಸ್ಟ್‌ನಲ್ಲಿ ಬಂದಿತ್ತು.
ಈಗ 81 ಕೋಟಿ ರೂಪಾಯಿಯ ಕಾಮಗಾರಿ ಆದೇಶವು ಈ ಕಂಪನಿಗೆ ಲಭಿಸಿದ್ದರಿಂದ ಗುರುವಾರ ಈ ಕಂಪನಿಗಳ ಸ್ಟಾಕ್​ಗಳಲ್ಲಿ ಏರಿಕೆ ಕಂಡುಬಂದಿದ್ದು, ಷೇರುಗಳ ಬೆಲೆ 915 ರೂ. ತಲುಪಿದೆ.
NLC ಇಂಡಿಯಾ ಲಿಮಿಟೆಡ್ SOMW ಸೌರ ವಿದ್ಯುತ್ ಯೋಜನೆಗಾಗಿ ಬ್ಯಾಲೆನ್ಸ್ ಆಫ್ ಸಿಸ್ಟಮ್ (BOS) ಕಾಮಗಾರಿಗಾಗಿ ಬೊಂಡಾಡಾ ಇಂಜಿನಿಯರಿಂಗ್ ಲಿಮಿಟೆಡ್‌ಗೆ ಕಾಮಗಾರಿ ಆದೇಶವನ್ನು ನೀಡಿದೆ. ಈ ಆದೇಶವು 81 ಕೋಟಿ ರೂಪಾಯಿ ಮೊತ್ತದ್ದಾಗಿದೆ. 15 ತಿಂಗಳಲ್ಲಿ ಈ ಕಾಮಗಾರಿ ಪೂರ್ಣಗೊಳ್ಳಬೇಕಿದೆ.
ಈ ಕಂಪನಿಯ ಸ್ಟಾಕ್​ ಮಲ್ಟಿಬ್ಯಾಗರ್ ಆಗಿದ್ದು, 6 ತಿಂಗಳಲ್ಲಿ ಶೇ. 1100 ರಷ್ಟು ಏರಿಕೆಯಾಗಿದೆ. ಬೊಂಡಾಡ ಇಂಜಿನಿಯರಿಂಗ್ ಐಪಿಒ ಬೆಲೆ 75 ರೂ. ಇತ್ತು. ಕಂಪನಿಯ ಐಪಿಒ 18 ಆಗಸ್ಟ್ 2023 ರಂದು ಪ್ರಾರಂಭವಾಗಿತ್ತು. ಈ ಕಂಪನಿಯ ಷೇರುಗಳನ್ನು ಆಗಸ್ಟ್ 30, 2023 ರಂದು ರೂ 142.50 ರೂಪಾಯಿಯಲ್ಲಿ ಪಟ್ಟಿ ಮಾಡಲಾಗಿತ್ತು. ಇದಾದ ನಂತರ ಬೊಂಡಾಡಾ ಇಂಜಿನಿಯರಿಂಗ್ ಷೇರುಗಳಲ್ಲಿ ಭಾರಿ ಏರಿಕೆ ಕಂಡುಬಂದಿದೆ.
ಕಂಪನಿಯ ಷೇರುಗಳು 29 ಫೆಬ್ರವರಿ 2024 ರಂದು 915 ರೂಪಾಯಿ ತಲುಪಿವೆ. ಈ ಮೂಲಕ ಐಪಿಒದಲ್ಲಿದ್ದ 75 ರೂ. ಬೆಲೆಯಿಂದ 1100% ಹೆಚ್ಚಳ ಕಂಡಿವೆ. ಈ ಕಂಪನಿಯ ಷೇರುಗಳ 52 ವಾರಗಳ ಗರಿಷ್ಠ ಮಟ್ಟದ 949.95 ರೂ. ಇದ್ದರೆ, ಕನಿಷ್ಠ ಮಟ್ಟವು 142.50 ರೂ. ಇದೆ.
ಬೋಂಡಾಡ ಇಂಜಿನಿಯರಿಂಗ್ ಇತ್ತೀಚೆಗೆ ಸನ್‌ಡ್ರಾಪ್ಸ್ ಎನರ್ಜಿಯಾದಿಂದ 4.93 ಕೋಟಿ ರೂ. ಮೌಲ್ಯದ ವರ್ಕ್ ಆರ್ಡರ್ ಪಡೆದಿದೆ. ಈ ವರ್ಷ ಫೆಬ್ರವರಿಯಲ್ಲಿಯೇ ಸನ್​ಡ್ರಾಪ್ಸ್ ಎನರ್ಜಿಯಾದಿಂದ 20.36 ಕೋಟಿ ರೂ. ಆರ್ಡರ್​ ಪಡೆದಿದೆ. ಈ ಹಿಂದೆ ಕಂಪನಿಯು ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ ಬಿಎಸ್‌ಎನ್‌ಎಲ್‌ನಿಂದ 34.4 ಕೋಟಿ ರೂಪಾಯಿ ಮೌಲ್ಯದ ಆರ್ಡರ್ ಪಡೆದಿತ್ತು. ಬೊಂಡಾಡ ಇಂಜಿನಿಯರಿಂಗ್ ಇತ್ತೀಚೆಗೆ ಅಟ್ಪೋಲ್ ಟೆಕ್ನಾಲಜೀಸ್‌ನಲ್ಲಿ 60% ಪಾಲನ್ನು ಖರೀದಿಸಿತ್ತು.

ಷೇರು ಮಾರುಕಟ್ಟೆ ಮೇಲೆ ಲೋಕಸಭೆ ಚುನಾವಣೆ ಪರಿಣಾಮವೇನು? ಯಾವ ಪಕ್ಷ ಗೆಲ್ಲುತ್ತದೆ? ದಲಾಲ್​ ಸ್ಟ್ರೀಟ್​ ​ ಲೆಕ್ಕಾಚಾರಗಳೇನು? ತಜ್ಞರು ಏನು ಹೇಳುತ್ತಿದ್ದಾರೆ?

ನೀವೆಷ್ಟು ಇನ್​ಕಮ್​ ಟ್ಯಾಕ್ಸ್​ ಪಾವತಿಸಬೇಕು: ಈ ವರ್ಷಕ್ಕೆ ಆದಾಯ ತೆರಿಗೆ ಪದ್ಧತಿ ಸರಳ ಲೆಕ್ಕಾಚಾರ ಹೀಗಿದೆ….

ಕರಡಿಯ ಕುಣಿತಕ್ಕೆ ತಡೆಹಾಕಿದ ಗೂಳಿ: ಕೊನೆಯಲ್ಲಿ ಚೇತರಿಕೆ ಕಂಡ ಷೇರು ಸೂಚ್ಯಂಕ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:eleven + 14 =
Remember me
