ನವದೆಹಲಿ:ಚೀನಿ ಆ್ಯಪ್​ಗಳನ್ನು ನಿಷೇಧ ಮಾಡಿದ ಬೆನ್ನಲ್ಲೇ ಭಾರತೀಯ ಅದರಲ್ಲೂ ಪ್ರಾದೇಶಿಕ ಭಾಷೆಗಳಲ್ಲಿ ಸೇವೆ ನೀಡುವ ಆ್ಯಪ್​ಗಳಲಿಗೆ ಭಾರಿ ಬೇಡಿಕೆ ವ್ಯಕ್ತವಾಗಿದೆ.
ಅಂತೆಯೇ, ದೇಶೀಯ ಸಾಮಾಜಿಕ ಜಾಲ ತಾಣದ ಆ್ಯಪ್​ ಶೇರ್​ ಚಾಟ್​ ​ಅನ್ನು ಕೇವಲ 36 ಗಂಟೆಗಳಲ್ಲಿ 1.50 ಕೋಟಿ ಜನರು ಡೌನ್​ಲೋಡ್​ ಮಾಡಿಕೊಂಡಿದ್ದಾರೆ ಎಂದು ಆ್ಯಪ್​ ರೂಪಿಸಿದ ಕಂಪನಿ ಮಾಹಿತಿ ನೀಡಿದೆ. ಇದರರ್ಥ ಪ್ರತಿ ಗಂಟೆಗೆ ಐದು ಲಕ್ಷ ಜನರು ಇದನ್ನು ಬಳಕೆ ಇನ್​ಸ್ಟಾಲ್​ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:ಬೆಳಗ್ಗೆ ಸೆಕ್ಷನ್​ 144, ರಾತ್ರಿ ಕರ್ಫ್ಯೂ; ಹೊರಗೆ ಬಂದ್ರೆ ಕರೊನಾನೂ ಬಿಡಲ್ಲ, ಪೊಲೀಸರು ಸುಮ್ಮನಿರಲ್ಲ
ಇದಲ್ಲದೇ, ಹಲವು ವಿಶೇಷತೆಗಳನ್ನು ಪಟ್ಟಿ ಮಾಡಿದೆ. ಚೀನಾ ಆ್ಯಪ್​ಗಳನ್ನು ಬ್ಯಾನ್​ ಮಾಡಿರುವ ಕೇಂದ್ರ ಸರ್ಕಾರದ ನಿಧಾ್ರವನ್ನು ಬೆಂಬಲಿಸಿ ಒಂದು ಲಕ್ಷಕ್ಕೂ ಅಧಿಕ ಪೋಸ್ಟ್​ಗಳು ದಾಖಲಾಗಿವೆ ಎಂದು ಕಂಪನಿ ತಿಳಿಸಿದೆ.ಜನರ ಪ್ರತಿಕ್ರಿಯೆಯಿಂದ ಭಾರಿ ಸಂತಸವಾಗಿದೆ. ಇದು ಇನ್ನೊಂದು ಯಶಸ್ಸಿಗೆ ಅಡಿಪಾಯವಾಗಲಿದೆ ಎಂದು ಕಂಪನಿ ಸಹ- ಸಂಸ್ಥಾಪಕ ಫರೀದ್​ ಅಹ್ಸಾನ್​ ಹೇಳಿದ್ದಾರೆ.
ಕನ್ನಡವೂ ಸೇರಿ 15 ಭಾರತೀಯ ಭಾಷೆಗಳಲ್ಲಿ ಈ ಆ್ಯಪ್​ ಲಭ್ಯವಿದೆ. 1.50 ಕೋಟಿ ನೋಂದಾಯಿತ ಬಳಕೆದಾರರು ಹಾಗೂ ಮಾಸಿಕ 60 ಲಕ್ಷ ಸಕ್ರಿಯ ಬಳಕೆದಾರರನ್ನು ಹೊಂದಿರುವುದಾಗಿ ಕಂಪನಿ ತಿಳಿಸಿದೆ.
ಇದನ್ನೂ ಓದಿ:ಅತ್ಯಾಚಾರ, ಲೈಂಗಿಕ ಕಿರುಕುಳ ಸಂತ್ರಸ್ತರ ಬಾಯಿ ಮುಚ್ಚಿಸಲು 143 ಕೋಟಿ ರೂ. ಕೊಟ್ಟ ಚಿತ್ರ ನಿರ್ಮಾಪಕ
ಎಲ್ಲಕ್ಕೂ ಮುಖ್ಯ ಸಂಗತಿ ಎಂದರೆ ಇದು ಬೆಂಗಳೂರಿನ ಆ್ಯಪ್​. ಈ ಸ್ಟಾರ್ಟಪ್​ ಕಂಪನಿಯಲ್ಲಿ ಟ್ವಿಟರ್​ ಕೂಡ ಹೂಡಿಕೆ ಮಾಡಿದೆ. ಕಳೆದ ವರ್ಷ ಈ ಕಂಪನಿ 700 ಕೋಟಿ ರೂ. ಹೂಡಿಕೆ ಗಳಿಸಿತ್ತು.
ಅಮೆರಿಕದಲ್ಲಿ ಚೀನಾದ ದೈತ್ಯ ಕಂಪನಿಗಳನ್ನು ನಿಷೇಧಿಸಿದ ಭಾರತೀಯ ಸಂಜಾತ; ರಾಷ್ಟ್ರೀಯ ಭದ್ರತೆಗೆ ಮಾರಕವೆಂದು ಆದೇಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 13 =
Remember me
