ಮುಂಬೈ:ಹರಿಯಾಣದ ಫರಿದಾಬಾದ್​ನ ಇಎಸ್​ಐ ಆಸ್ಪತ್ರೆಯಲ್ಲಿ ಗುತ್ತಿಗೆ ನೌಕರಿಯಲ್ಲಿದ್ದ ಆತ, ಪಾತಕ ಲೋಕಕ್ಕೆ ಕಾಲಿಟ್ಟು ಕೆಲವೇ ವರ್ಷಗಳಾಗಿವೆ. ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಆರೋಪದಲ್ಲಿ ಜೈಲು ಪಾಲಾಗಿದ್ದ. ಜೈಲಿನಿಂದ ಹೊರಬಂದು ಆತ ಕಣ್ಣಿಟ್ಟಿದ್ದೇ ತನ್ನ ಬಗ್ಗೆ ಪೊಲೀಸರಿಗೆ ನೀಡಿದ್ದನೆನ್ನಲಾದ ವ್ಯಕ್ತಿಗಾಗಿ. ಆತನನ್ನು ಕೊಲೆಗೈದು ಮತ್ತೆ ಜೈಲು ಸೇರಿದವನದ್ದು ಮಾತ್ರ ಭಯಂಕರ ಇತಿಹಾಸ.
ಫರೀದಾಬಾದ್​ನ ವ್ಯಕ್ತಿಯೊಬ್ಬನ ಕೊಲೆ ಆರೋಪದಲ್ಲಿ ಶಾರ್ಪ್​ಶೂಟರ್​ರಾಹುಲ್​ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಬಾಲಿವುಡ್​ ನಟ ಸಲ್ಮಾಣ್​ ಖಾನ್​ ಹತ್ಯೆಗೆ ಸಂಚು ರೂಪಿಸಿದ್ದು ಬೆಳಕಿಗೆ ಬಂದಿದೆ.
ಇದನ್ನೂ ಓದಿ;ಪ್ರಧಾನ ಮಂತ್ರಿ ಶಿಶು ವಿಕಾಸ ಯೋಜನೆ ಹೆಸರಿನಡಿ ನಕಲಿ ಶಿಶು ಯೋಜನೆ ನಡೆಸುತ್ತಿದ್ದ ಆರೋಪಿಗಳ ಬಂಧನ
ರಾಹುಲ್​ ಅಲಿಯಾಸ್​ ಸಂಗಾ ಅಲಿಯಾಸ್​ ಸುನ್ನಿ ಕಳೆದ ಜನವರಿಯಲ್ಲಿ ಮುಂಬೈಗೆ ತೆರಳಿದ್ದ. ನಟ ಸಲ್ಮಾನ್​ ಖಾನ್​ ನೆಲೆಸಿರುವ ಬಾಂದ್ರಾದಲ್ಲಿಯೇ ಎರಡು ದಿನ ತಂಗಿದ್ದ. ಖಾನ್​ ಹತ್ಯೆಗಾಗಿ ಎಲ್ಲಿಂದ ಶೂಟ್​ ಮಾಡಬಹುದು ಎಂಬುದನ್ನೆಲ್ಲ ಲೆಕ್ಕಾಚಾರ ಹಾಕಿ ಯೋಜನೆ ರೂಪಿಸಿದ್ದ. ಆದರೆ, ಲಾಕ್​ಡೌನ್​ ಕಾರಣದಿಂದಾಗಿ ಈತನ ಯೋಜನೆ ಕಾರ್ಯಗತವಾಗಲಿಲ್ಲ.
ಲಾರೆನ್ಸ್​ ಬಿಷ್ಣೋಯಿ ಗ್ಯಾಂಗ್​ ಸೇರಿದವನಾದ ರಾಹುಲ್​ ಇದನ್ನೆಲ್ಲ ಮಾಡಿದ್ದು, ಬಿಷ್ಣೋಯಿ ಹಾಗೂ ಗುಂಪಿನ ಇನ್ನೊಬ್ಬ ಸದಸ್ಯ ಸಂಪತ್​ ನೆಹ್ರಾ ಅಣತಿ ಮೇರೆಗೆ. ಈ ನೆಹ್ರಾ 2108ರಲ್ಲಿ 2018ರ ಜೂನ್​ನಲ್ಲಿ ನಟ ಸಲ್ಮಾನ್​ ಖಾನ್​ ಹತ್ಯೆ ಆರೋಪದಲ್ಲಿ ಬಂಧಿತನಾಗಿದ್ದಾನೆ. ಬಿಷ್ಣೋಯಿ ಸದ್ಯ ರಾಜಸ್ಥಾನದ ಜೈಲಿನಲ್ಲಿದ್ದಾನೆ.ಬಿಷ್ಣೋಯಿ ಸಮುದಾಯಕ್ಕೆ ಸೇರಿದ ಲಾರೆನ್ಸ್​ ಬಿಷ್ಣೋಯಿ ಸಲ್ಮಾನ್​ ಖಾನ್​​ ಹತ್ಯೆಗೆ ಸಂಚು ರೂಪಿಸುತ್ತಿರುವುದಕ್ಕೆ ಕಾರಣವೇನು ಗೊತ್ತೆ? ಬಿಷ್ಣೋಯಿ ಸಮುದಾಯಕ್ಕೆ ಕೃಷ್ಣಮೃಗಗಳು ದೈವಸ್ಥಾನದಲ್ಲಿವೆ. ಸಲ್ಮಾನ್​ ಖಾನ್​ 1998ರಲ್ಲಿ ಜೋಧಪುರದಲ್ಲಿ ಎರಡು ಕೃಷ್ಣಮೃಗಗಳನ್ನು ಬೇಟೆಯಾಡಿದ್ದರಿಂದ ಸಮುದಾಯದ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ಈ ಕಾರಣಕ್ಕೆ ಲಾರೆನ್ಸ್​ ಬಿಷ್ಣೋಯಿ ಪದೇಪದೇ ಸಲ್ಮಾನ್​ ಹತ್ಯೆಗೆ ಸಂಚು ರೂಪಿಸುತ್ತಲೇ ಇದ್ದಾನೆ.
ಇದನ್ನೂ ಓದಿ;ಬಾಲಕಿ ಮೇಲೆ ಅತ್ಯಾಚಾರ ಗೈದು ಕಲ್ಲಿನಿಂದ ಜಜ್ಜಿ ಕೊಂದು ಗೋಣಿ ಚೀಲದಲ್ಲಿ ಹಾಕಿ ಎಸೆದ ಕಾಮುಕರು
ರಾಹುಲ್​ ವಿಚಾರಣೆ ನಡೆಸಿದಾಗ ಕಳೆದ ಆರು ತಿಂಗಳಲ್ಲಿ ಆತ ನಾಲ್ಕು ಜನರ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಅಕ್ರಮವಾಗಿ ಬಂದೂಕು ಹೊಂದಿದ್ದ ಆರೋಪದಲ್ಲಿ ಜೈಲಿನಿಂದ ಬಿಡುಗಡೆಯಾಗಿ ಕಳೆದ ಆಗಸ್ಟ್​ನಲ್ಲಿ ಲಾರೆನ್ಸ್​ ಬಿಷ್ಣೋಯಿ ಗ್ಯಾಂಗ್​ ಸೇರಿದ್ದ. ಈ ಗ್ಯಾಂಗ್​ಗಾಗಿಯೇ ಕೊಲೆಗಳನ್ನು ನಡೆಸುವುದು ಈತನ ಕಾಯಕವಾಗಿದೆ ಎಂದು ಎಸಿಪಿ ರಾಜೇಶ್​ ದುಗ್ಗಲ್​ ಹೇಳಿದ್ದಾರೆ.
ಭಾರತೀಯರಿಗೆ ವರ್ಷಾಂತ್ಯಕ್ಕೆ ದೊರೆಯಲಿದೆ ಮೊದಲ ಕರೊನಾ ಲಸಿಕೆ; ಆದರೆ, ಭಾರತದ್ದಲ್ಲ….!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:5 + 12 =
Remember me
