ಮುಂಬೈ:ಫಿಟ್​ನೆಸ್​ ಟ್ರೈನಿಂಗ್​ಗೆ ಹೋಗುವವರು ಸ್ಪೋರ್ಟ್ಸ್​ವೇರ್​ ಡ್ರೆಸ್ ಬಟ್ಟೆ ಧರಿಸುವುದು ಸಾಮಾನ್ಯ. ಆದರೆ ಪುಣೆಯ ಈ ಡಾಕ್ಟರ್​ ವಿಶೇಷ. ಭಾರತೀಯ ಮಹಿಳೆಯರ ಸಂಭ್ರಮವೇ ಸೀರೆ, ನಾನು ಅದನ್ನೇ ಉಟ್ಟು ಪುಷ್​ಅಪ್​ ಮಾಡುತ್ತೇನೆಂದು ವೈರಲ್​ ಆಗಿದ್ದಾರೆ.
ಪುಣೆಯ ಡಾಕ್ಟರ್ ಶಾರ್ವರಿ ಇನಾಮ್ದಾರ್​ ಆ ವಿಶೇಷ ವೈದ್ಯೆ. ಆಕೆ ಸೀರೆಯುಟ್ಟು ಜಿಮ್​ನಲ್ಲಿ ಟ್ರೈನಿಂಗ್​ ಪಡೆದಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನೀಲಿ ಕಲರ್ ಸೀರೆಯಲ್ಲಿ ಪುಷ್​ಅಪ್​, ವೈಟ್​ ಲಿಫ್ಟಿಂಗ್​ ಮಾಡುವ ಪರಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.
ಸೀರೆ ತೊಂದರೆಯಲ್ಲ, ಅದೊಂದು ಸಂಭ್ರಮ!
ಮಹಾರಾಷ್ಟ್ರದ ಪುಣೆಯ ಡಾಕ್ಟರ್​ ಶಾರ್ವರಿ ಇನಾಮ್ದಾರ್​ ಫಿಟ್​ನೆಸ್​ ಎಕ್ಸ್​ಪರ್ಟ್​ ಎನಿಸಿಕೊಂಡವರು. ಸೀರೆ ತೊಂದರೆಯಲ್ಲ ಅದೊಂದು ಸಂಭ್ರಮ ಎಂದು ಹೇಳುವ ಡಾಕ್ಟರ್​ ಸೀರೆಯುಟ್ಟು ಫಿಟ್​ನೆಸ್​ ಟ್ರೈನಿಂಗ್ ಪಡೆಯುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.pic.twitter.com/ZpwaRCuyIO
— Vijayavani (@VVani4U)June 17, 2021

ಭಾರತೀಯ ಹೆಣ್ಣು ಮಕ್ಕಳು ಎಲ್ಲೆಡೆ ಸೀರೆ ಉಡುವುದಿಲ್ಲ. ಹಬ್ಬ, ಸಂಭ್ರಮಾಚರಣೆ ಎಂದರೆ ಸೀರೆ ಉಡುತ್ತಾರೆ. ಆದರೆ ನಾನು ಎಲ್ಲ ಹೆಣ್ಣು ಮಕ್ಕಳು ಎಲ್ಲ ಸಮಯದಲ್ಲೂ ಸಂಭ್ರಮಿಸಬೇಕು ಎಂದು ಬಯಸುತ್ತೇನೆ. ಪ್ರತಿ ಹೆಣ್ಣು ಮಗಳು ತನ್ನ ದೈನದಿಂದ ಕೆಲಸದೊಂದಿಗೆ ಫಿಟ್​ನೆಸ್​ ಅನ್ನೂ ಸೇರಿಸಿಕೊಳ್ಳಬೇಕು. ಅದರಿಂದ ಮಾನಸಿಕ ಹಾಗೂ ದೈಹಿಕವಾಗಿ ಸದೃಢವಾಗಬಹುದು ಎಂದು ಶಾರ್ವರಿ ಹೇಳಿದ್ದಾರೆ. (ಏಜೆನ್ಸೀಸ್​)
ಗಂಡನೊಂದಿಗೆ ಫೋನ್​ನಲ್ಲಿ ಮಾತನಾಡುತ್ತಾ ಹೊರಹೋದವಳು ದೂರದ ರೈಲ್ವೆ ಹಳಿ ಬಳಿ ಮಾಂಸವಾಗಿ ಪತ್ತೆ!

‘ಮೊದಲು ಸಿಪಿ ಯೋಗೇಶ್ವರ್​ನ್ನು ಸಚಿವ ಸ್ಥಾನದಿಂದ ತೆಗೆಯಿರಿ’ ಅರುಣ್​ ಸಿಂಗ್​ ಬಳಿ ಐದು ಬೇಡಿಕೆಯಿತ್ತ ರೇಣುಕಾಚಾರ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 3 =
Remember me
