ನವದೆಹಲಿ:ಮಾಜಿ ಲೋಕಸಭಾ ಸ್ಪೀಕರ್​ ಸುಮಿತ್ರಾ ಮಹಾಜನ್​ ನಿಧನರಾದರು ಎಂಬ ಸುಳ್ಳು ಸುದ್ದಿಯನ್ನು ನಂಬಿದ ಕಾಂಗ್ರೆಸ್​ ಸಂಸದ ಶಶಿ ತರೂರ್, ಸುಮಿತ್ರಾ ಮಹಾಜನ್​ ಕುಟುಂಬಕ್ಕೆ ಸಾಂತ್ವಾನದ ಟ್ವೀಟ್​ ಮಾಡುವ ಮೂಲಕ ಪ್ರಮಾದವೊಂದನ್ನು ಎಸಗಿ, ಬಳಿಕ ತಪ್ಪಿನ ಅರಿವಾಗಿ, ಟ್ವೀಟ್​ ಡಿಲೀಟ್​ ಮಾಡುವುದರೊಂದಿಗೆ ಕ್ಷಮೆಯಾಚಿಸಿದ ಘಟನೆ ಗುರುವಾರ (ಏಪ್ರಿಲ್​ 22) ನಡೆದಿದೆ. ​
ಮಾಜಿ ಲೋಕಸಭಾ ಸ್ಪೀಕರ್​ ಸುಮಿತ್ರಾ ಮಹಾಜನ್​ ನಿಧನರಾದರು ಇದೀಗ ತಾನೇ ಕೇಳಲ್ಪಟ್ಟೆ. ಮಾಸ್ಕೋದಲ್ಲಿ ನಡೆದ ಬ್ರಿಕ್ಸ್​ ಶೃಂಗದಲ್ಲಿ ಸಂಸದೀಯ ನಿಯೋಗವನ್ನು ಮುನ್ನಡೆಸಲು ಸುಮಿತ್ರಾ ಮಹಾಜನ್​ ಮತ್ತು ದಿವಂಗತ ಸುಷ್ಮಾ ಸ್ವರಾಜ್​ ಅವರು ನನ್ನನ್ನು ಕೇಳಿದಾಗ ಅವರೊಂದಿಗೆ ನಡೆದ ಹಲವು ಧನಾತ್ಮಕ ಸಂವಹನ ಬಗ್ಗೆ ನನಗೆ ನೆನಪಿದೆ. ಅವರನ್ನು ಕಳೆದುಕೊಂಡ ಕುಟುಂಬದಕ್ಕೆ ದುಃಖ ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸುತ್ತೇನೆಂದು ಗುರುವಾರ ರಾತ್ರಿ 11.16ಕ್ಕೆ ಕೇರಳದ ತಿರುವನಂತಪುರಂ ಸಂಸದರಾಗಿರುವ ತರೂರ್​ ಟ್ವೀಟ್​ ಮಾಡಿದ್ದರು.

ಯಾವಾಗ ಸಾಮಾಜಿಕ ಜಾಲತಾಣದಲ್ಲಿ ಸುಮಿತ್ರಾ ಮಹಾಜನ್​ಗೆ ಏನು ಸಮಸ್ಯೆ ಆಗಿಲ್ಲ. ಅವರು ಆರೋಗ್ಯವಾಗಿದ್ದಾರೆ ಎಂಬ ಮಾತುಗಳು ಕೇಳಿಬಂತೋ, ಇದು ತರೂರ್​ ಗಮನಕ್ಕೆ ಬಂದು ಟ್ವೀಟ್​ ಡಿಲೀಟ್​ ಮಾಡಿ ಕ್ಷಮೆಯಾಚಿಸಿದ್ದಾರೆ.
I am relieved if that is so. I received this from what I thought was a reliable source: “पूर्व लोकसभा अध्यक्ष श्रीमती सुमित्रा महाजन जी हमारे बीच नहीं रहीं.ईश्वर दिवंगत आत्मा को अपने श्रीचरणों में स्थान दें.🙏” Happy to retract & appalled that anyone would make up such news.https://t.co/3c8pDGaBRv— Shashi Tharoor (@ShashiTharoor)April 22, 2021
I am relieved if that is so. I received this from what I thought was a reliable source: “पूर्व लोकसभा अध्यक्ष श्रीमती सुमित्रा महाजन जी हमारे बीच नहीं रहीं.ईश्वर दिवंगत आत्मा को अपने श्रीचरणों में स्थान दें.🙏” Happy to retract & appalled that anyone would make up such news.https://t.co/3c8pDGaBRv
ಸುಮಿತ್ರಾ ಮಹಾಜನ್ ಅವರ ನಿಧನದ ಬಗ್ಗೆ ತಿಳಿಸುವ ವಿಶ್ವಾಸಾರ್ಹ ಮೂಲವೆಂದು ಭಾವಿಸಿದ ಸಂದೇಶವನ್ನು ಸ್ವೀಕರಿಸಿದೆ. ಅವರು ಚೆನ್ನಾಗಿದ್ದಾರೆಂದು ತಿಳಿದು ನಿರಾಳವಾಗಿದೆ. ಟ್ವೀಟ್​ ಅನ್ನು ಹಿಂತೆಗೆದುಕೊಳ್ಳಲು ಸಂತೋಷವಾಗಿದೆ. ಯಾರಾದರೂ ಇಂತಹ ಸುದ್ದಿಗಳನ್ನು ಮಾಡುತ್ತಾರೆಯೇ ಎಂದು ತರೂರ್​ ದಿಗಿಲುಗೊಂಡರು.
ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಕೈಲಾಶ್​​ ವಿಜಯವರ್ಗಿಯ ಸಹ ಟ್ವೀಟ್​ ಮೂಲಕ ಸ್ಪಷ್ಟನೆ ನೀಡಿ, ಮಹಾಜನ್​ ಅವರು ಖಂಡಿತವಾಗಿ ಆರೋಗ್ಯವಾಗಿದ್ದಾರೆಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ತರೂರ್​, ಈ ವಿಚಾರವಾಗಿ ಸ್ಪಷ್ಟನೆ ನೀಡಿದ ಕೈಲಾಶ್​ ಅವರಿಗೆ ಧನ್ಯವಾದಗಳು ಎಂದಿದ್ದಾರೆ.
Thanks@kailashOnline. I have deleted my tweet. I wonder what motivates people to invent and spread such evil news that takes in people. My best wishes for Sumitra ji’s health and long life.— Shashi Tharoor (@ShashiTharoor)April 22, 2021
Thanks@kailashOnline. I have deleted my tweet. I wonder what motivates people to invent and spread such evil news that takes in people. My best wishes for Sumitra ji’s health and long life.
ಅಂದಹಾಗೆ 78 ವರ್ಷದ ಸುಮಿತ್ರಾ ಮಹಾಜನ್​, ಮಧ್ಯಪ್ರದೇಶದ ಇಂದೋರ್​ ಕ್ಷೇತ್ರವನ್ನು 1989 ರಿಂದ 2019ರವರೆಗೆ ಪ್ರತಿನಿಧಿಸಿದರು. ಹೆಚ್ಚು ಕಾಲ ಸೇವೆ ಸಲ್ಲಿಸಿದ ಮಹಿಳಾ ಸಂಸತ್ ಸದಸ್ಯೆ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಅಲ್ಲದೆ, 2014 ರಿಂದ 2019 ರವರೆಗೆ ಲೋಕಸಭೆಯ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದಾರೆ.(ಏಜೆನ್ಸೀಸ್​)
ಪಶ್ಚಿಮ ಬಂಗಾಳ: ಚುನಾವಣಾ ಸಮಾವೇಶ, ರೋಡ್​ ಶೋ ರದ್ದು ಮಾಡಿದ ಎಲೆಕ್ಷನ್ ಕಮಿಷನ್
ಪಶ್ಚಿಮ ಬಂಗಾಳ ಚುನಾವಣಾ ಪ್ರವಾಸವನ್ನು ರದ್ದು ಮಾಡಿದ ಪ್ರಧಾನಿ ಮೋದಿ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − 8 =
Remember me
