ಕೊಟ್ಟಾಯಂ:ತೃಣಮೂಲೆ ಕಾಂಗ್ರೆಸ್​ ಸಂಸದೆ ಮಹುವಾ ಮೊಯಿತ್ರಾ ಜತೆಗೆ ಪಾರ್ಟಿ ಮಾಡುತ್ತಿರುವ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ ಆದ ಬೆನಲ್ಲೇ ಪ್ರತಿಕ್ರಿಯಿಸಿರುವ ಕಾಂಗ್ರೆಸ್​ ನಾಯಕ ಶಶಿ ತರೂರ್ ಇದು ಕೀಳುಮಟ್ಟದ ರಾಜಕೀಯ ಎಂದು ಕಿಡಿಕಾರಿದ್ದಾರೆ.
ಇದು ಸಂಸದೆ ಮಹುವಾ ಮೊಯಿತ್ರಾ ಅವರ ಜನುಮದಿನದಂದು ತೆಗೆಸಿಕೊಳ್ಳಲಾದ ಫೋಟೋಗಳು, ಕೆಲವರು ಇದು ರಹ್ಯಸ ಸಭೆ ಎಂದು ತಿರುಚಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಈ ರೀತಿಯ ಕೊಳಕು ರಾಜಕಾರಣವನ್ನು ಹಿಂದೆಂದು ನೋಡಿರಲಿಲ್ಲ ಎಂದು ಶಶಿ ತರೂರ್ ಹೇಳಿದ್ದಾರೆ.
ಇದನ್ನೂ ಓದಿ:VIDEO| ತರಗತಿ ವೇಳೆ ನಮಾಜ್​ ಮಾಡಿದ ವಿದ್ಯಾರ್ಥಿಗಳು; ಪ್ರಾಂಶುಪಾಲರು ಅಮಾನತು
ಈ ಕುರಿತು ಕೇರಳದ ಕೊಟ್ಟಾಯಂನಲ್ಲಿ ಪ್ರತಿಕ್ರಿಯಿಸಿದ ಸಂಸದ ಶಶಿ ತರೂರ್, ಇದು ಕೀಳು ಮಟ್ಟದ ರಾಜಕಾರಣದ ಸ್ಪಷ್ಟ ನಿದರ್ಶನವಾಗಿದ್ದು, ನಾನು ಅಂದು ಆ ಮಗುವಿನ (ಮಹುವಾ ಮೊಯಿತ್ರಾ) ಹುಟ್ಟುಹಬ್ಬಕ್ಕೆ ತೆರಳಿದೆ. ಆಕೆ ನನಗಿಂತ 10-20 ವರ್ಷ ಚಿಕ್ಕವಳು. ಅವರ ಹುಟ್ಟುಹಬ್ಬದ ದಿನದಂದು 15 ಮಂದಿ ಹಾಜರಿದ್ದೆವು.
ಆ ಪಾರ್ಟಿಯಲ್ಲಿ ನನ್ನ ಸಹೋದರಿಯನ್ನು ಸಹ ಆಹ್ವಾನಿಸಲಾಗಿತ್ತು. ಅವರು ಸಹ ಅಲ್ಲಿ ಹಾಜರಿದ್ದರು. ಅದಾಗ್ಯೂ, ಕೆಲವರು ಉದ್ದೇಶಪೂರ್ವಕವಾಗಿ ಕ್ರಾಪ್​ ಮಾಡಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅದನ್ನು ರಹಸ್ಯ ಸಭೆ ಎಂದು ಬಿಂಬಿಸಿದ್ದಾರೆ. ಈ ರೀತಿಯ ಸುದ್ದಿಗಳಿಗೆ ನಾನು ಅಷ್ಟಾಗಿ ಪ್ರಾಮುಖ್ಯತೆಯನ್ನು ನೀಡುವುದಿಲ್ಲ. ಜನರಿಗಾಗಿ ಕೆಲಸ ಮಾಡುವುದು ನಮ್ಮ ಆದ್ಯತೆಯಾಗಿದೆ. ಈ ರೀತಿಯ ಸುಳ್ಳು ಸುದ್ದಿಗಳಿಗೆ ಅಲ್ಲಾ ಎಂದು ಕಾಂಗ್ರೆಸ್​ ಸಂಸದ ಶಶಿ ತರೂರ್​ ವೈರಲ್​ ಫೋಟೋ ಕುರಿತು ಪ್ರತಿಕ್ರಿಯಿಸಿದ್ದಾರೆ.
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
Sign in to your account
Please enter an answer in digits:thirteen + seven =
Remember me
