ನವದೆಹಲಿ:ಎಐಸಿಸಿ ಅಧ್ಯಕ್ಷೀಯ ಚುನಾವಣೆಗೆ ನಾಮಪತ್ರ ಸಲ್ಲಿಸಿರುವ ಶಶಿ ತರೂರ್​, ಅದಕ್ಕಾಗಿ ಹೊರಡಿಸಿರುವ ಚುನಾವಣಾ ಪ್ರಣಾಳಿಕೆಯಲ್ಲಿ ಭಾರತವನ್ನೇ ತಪ್ಪಾಗಿ ತೋರಿಸಿದ್ದಾರೆ. ಅರ್ಥಾತ್, ಜಮ್ಮು-ಕಾಶ್ಮೀರವೇ ಇರದಂಥ ಭಾರತದ ನಕಾಶೆಯನ್ನು ಪ್ರಣಾಳಿಕೆಯಲ್ಲಿ ತೋರಲಾಗಿದ್ದು, ಅದೀಗ ವಿವಾದಕ್ಕೀಡಾಗಿದೆ.
ಶಶಿ ತರೂರ್ ಕಡೆಯಿಂದ ಪ್ರಕಟಿತ ಪ್ರಣಾಳಿಕೆಯಲ್ಲಿ ಭಾರತದ ನಕಾಶೆಯಲ್ಲಿ ಜಮ್ಮ-ಕಾಶ್ಮೀರ ಮತ್ತು ಲಡಾಖ್ ಇರಲಿಲ್ಲ. ಇದು ದೊಡ್ಡ ವಿವಾದಕ್ಕೆ ಒಳಗಾಗುತ್ತಿದ್ದಂತೆ ಎಚ್ಚೆತ್ತುಕೊಂಡ ತರೂರ್​ ಕಚೇರಿಯವರು ಬಳಿಕ ಪರಿಷ್ಕೃತ ಪ್ರಣಾಳಿಕೆ ಹೊರಡಿಸಿ ತಪ್ಪಿನಿಂದಾದ ಹಾನಿ ಕಡಿಮೆ ಮಾಡಿಕೊಳ್ಳಲು ಯತ್ನಿಸಿದ್ದಾರೆ.
ತರೂರ್ ಪ್ರಣಾಳಿಕೆಯಲ್ಲಿನ ಈ ತಪ್ಪಿನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ, ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಅತ್ತ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಮಾಡುತ್ತಿದ್ದರೆ ಇತ್ತ ಶಶಿ ತರೂರ್ ಪ್ರಣಾಳಿಕೆಯಲ್ಲಿನ ಭಾರತ ನಕಾಶೆಯಲ್ಲಿ ಲಡಾಖ್​ ಮತ್ತು ಜಮ್ಮು-ಕಾಶ್ಮೀರವೇ ಇಲ್ಲ ಎಂಬುದಾಗಿ ಟೀಕಿಸಿದ್ದಾರೆ.
ಇದು ವಿದೇಶದಲ್ಲಿನ ಪ್ರಪ್ರಥಮ ಸ್ವಂತ ಕನ್ನಡ ಭವನ; 12 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + 4 =
Remember me
