ಬೆಂಗಳೂರು:ಅಕ್ರಮ ಆಸ್ತಿ ಗಳಿಕೆ ಪ್ರಕರಣದಿಂದ ಜೈಲು ಪಾಲಾಗಿರುವ ತಮಿಳುನಾಡಿನ ಪ್ರಭಾವಿ ನಾಯಕಿ, ಉಚ್ಛಾಟಿತ ಎಐಎಡಿಎಂಕೆ ಮುಖಂಡೆ ಶಶಿಕಲಾ ನಟರಾಜನ್ ಅವರ ಬಿಡುಗಡೆ ಕುರಿತ ವಿಷಯ ಇದೀಗ ಜೈಲು ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಬೆಂಗಳೂರಿನ ಪರಪ್ಪನ ಅಗ್ರಾಹರದ ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿರುವ ಶಶಿಕಲಾರನ್ನು ಯಾವುದೇ ಸಮಯದಲ್ಲಿ ಶೀಘ್ರದಲ್ಲೇ ಬಿಡುಗಡೆ ಮಾಡಬಹುದು ಎಂಬ ವದಂತಿ ಎಲ್ಲೆಡೆ ಹರಡುತ್ತಿದ್ದಂತೆಯೇ ಇತ್ತೀಚೆಗಷ್ಟೇ ಈ ಹೇಳಿಕೆಯನ್ನು ಕಾರಾಗೃಹ ಅಧಿಕಾರಿಗಳು ನಿರಾಕರಿಸಿದ್ದರು. ಆದರೆ ಅದರ ಬೆನ್ನಲ್ಲೇ ಇದೀಗ, ದಿನನಿತ್ಯವೂ ಅವರಿಗೆ ಕರೆ ಬರುತ್ತಿದ್ದು, ಫೋನ್‌ ಅಟೆಂಡ್‌ ಮಾಡುವುದೇ ದೊಡ್ಡ ತಲೆನೋವಾಗಿದೆ.
ಇದನ್ನೂ ಓದಿ:ಹೆತ್ತ ತಾಯಿಯ ಪ್ರೇಮ್​ ಕಹಾನಿಗೆ 5 ವರ್ಷ ಹೆಣ್ಮಗು ಬಲಿ!
ತಮ್ಮ ನಿಯಮಿತ ಕರ್ತವ್ಯಗಳ ನಡುವೆ, ಕೇಂದ್ರ ಕಾರಾಗೃಹದ ಪೊಲೀಸ್ ಅಧಿಕಾರಿಗಳಿಗೆ ಫೋನ್‌ ಕರೆಗಳನ್ನು ಅಟೆಂಡ್‌ ಮಾಡುವುದು ಹಾಗೂ ಅವರ ಮೇಲ್‌ಗೆ ಬರುತ್ತಿರುವ ಪ್ರಶ್ನೆಗಳಿಗೆ ಉತ್ತರಿಸುವುದರಿಂದ ಸುಸ್ತಾಗಿ ಹೋಗಿದ್ದಾರೆ.
ಜೈಲಿನಿಂದ ಕೈದಿಗಳನ್ನು ಬಿಡುಗಡೆ ಮಾಡಬೇಕಾದರೆ ಅನೇಕ ನಿಯಮಗಳನ್ನು ಪಾಲನೆ ಮಾಡಬೇಕಾಗುತ್ತದೆ. ಆದ್ದರಿಂದ ಶಶಿಕಲಾ ಅವರನ್ನು ಸದ್ಯ ಬಿಡುಗಡೆ ಮಾಡುವುದು ಸಾಧ್ಯವಿಲ್ಲ ಎಂದು ಕರೆ ಮಾಡಿದವರಿಗೆ ಹೇಳಿದರೆ ಯಾಕೆ, ಏನು, ಎತ್ತ ಎಂದು ನೂರೆಂಟು ಪ್ರಶ್ನೆಗಳನ್ನು ಕೇಳುತ್ತಾರೆ. ಈ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ ಎಂದರೂ ಯಾವಾಗ ಬಿಡುಗಡೆ ಮಾಡುತ್ತೀರಿ ಎಂದು ಪದೇ ಪದೇ ಕೇಳುತ್ತಿದ್ದು, ಇದಕ್ಕೆ ಉತ್ತರಿಸುವುದೇ ದೊಡ್ಡ ತಲೆನೋವಾಗಿದೆ ಎಂದಿದ್ದಾರೆ.
ಪ್ರತಿವರ್ಷ ಗಣರಾಜ್ಯೋತ್ಸವ, ಸಂಕ್ರಾಂತಿ ಮತ್ತು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭಗಳಲ್ಲಿ ಸಾಮಾನ್ಯವಾಗಿ ಸನ್ನಡೆತೆವುಳ್ಳ ಕೈದಿಗಳನ್ನು ಬಿಡುಗಡೆ ಮಾಡಲಾಗುತ್ತದೆ. ಆಗಂತೂ ಫೋನ್‌ ಕರೆಗಳು ನಿರಂತರವಾಗಿ ಬರುತ್ತವೆ. ಆದರೆ ಸಾಮಾನ್ಯ ದಿನಗಳಲ್ಲಿಯೂ ಈ ಪ್ರಶ್ನೆ ಕೇಳುವುದು ಹೆಚ್ಚಾಗಿ ಬಿಟ್ಟಿದೆ ಎನ್ನುತ್ತಾರೆ ಪೊಲೀಸ್‌ ಅಧಿಕಾರಿಗಳು.
ಶಶಿಕಲಾ, ಅವರ ಸಾಕು ಮಗ ವಿ.ಎನ್.ಸುಧಾಕರನ್ ಮತ್ತು ಆಪ್ತ ಸಹವರ್ತಿ ಜೆ.ಇಲವರಸಿ ಅವರಿಗೆ ಶಿಕ್ಷೆ ವಿಧಿಸಿ 2017ರ ಫೆಬ್ರುವರಿ 15ರಂದು ಸುಪ್ರೀಂಕೋರ್ಟ್‌ ತೀರ್ಪು ನೀಡಿದ್ದಾಗಿನಿಂದ ಎಲ್ಲರೂ ಜೈಲಿನಲ್ಲಿ ಇದ್ದಾರೆ. ಅವರ ಬಿಡುಗಡೆ ದಿನಾಂಕವನ್ನು 2022 ಫೆಬ್ರವರಿ 15ಕ್ಕೆ ನಿಗದಿಪಡಿಸಲಾಗಿದೆ. ತಲಾ 10 ಕೋಟಿ ರೂಪಾಯಿಗಳ ದಂಡದ ಮೊತ್ತ ಕೊಟ್ಟರೆ ಬಿಡುಗಡೆ, ಇಲ್ಲದಿದ್ದರೆ, ಅವರ ಜೈಲು ಶಿಕ್ಷೆಯನ್ನು ಇನ್ನೊಂದು ವರ್ಷ ವಿಸ್ತರಿಸಲಾಗುವುದು ಎಂದು ತೀರ್ಪು ನೀಡಲಾಗಿದೆ. ಅದರೆ ಇದೀಗ ಫೋನ್‌ ಕರೆಗಳು ಹೆಚ್ಚಾಗುತ್ತಿವೆ.
ಕಳೆದ ವಾರ, ತಮಿಳುನಾಡಿನ ರಾಜಕಾರಣಿ ಎಂದು ಗುರುತಿಸಿಕೊಳ್ಳುವ ವ್ಯಕ್ತಿಯೊಬ್ಬರು, ಕರೆ ಮಾಡಿ, ಶಶಿಕಲಾ ಬಿಡುಗಡೆಗೆ ಕರ್ನಾಟಕ ಸರ್ಕಾರಕ್ಕೆ ನೀವು ಮನವಿ ಮಾಡಿಕೊಳ್ಳಿ ಎಂದರಲ್ಲದೇ, ನೀವೆಲ್ಲಾ ಶಶಿಕಲಾರನ್ನು ತಿರಸ್ಕಾರದಿಂದ ನೋಡುತ್ತಿದ್ದೀರಿ, ಆದ್ದರಿಂದ ಬಿಡುಗಡೆ ಕುರಿತು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಬೈದು ಫೋನ್‌ ಕುಕ್ಕಿದರು ಎನ್ನುತ್ತಾರೆ ಪೊಲೀಸ್‌ ಇನ್ಸ್‌ಪೆಕ್ಟರ್‌.
ಕರೊನಾ ಶಂಕಿತ ಮೃತಪಟ್ಟರೆ ವರದಿಗೆ ಕಾಯಬೇಕಿಲ್ಲ: ಕೇಂದ್ರ ಹೇಳಿರುವುದೇನು?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:19 − 12 =
Remember me
