ಬೆಂಗಳೂರು:ತಮಿಳುನಾಡಿನ ಎಐಎಡಿಎಂಕೆ ಪಕ್ಷದ ಮಾಜಿ ನಾಯಕಿ ವಿ.ಕೆ ಶಶಿಕಲಾ ಜನವರಿ 27ರಂದು ಪರಪ್ಪನ ಅಗ್ರಹಾರದಿಂದ ಬಿಡುಗಡೆಯಾಗಲಿದ್ದಾರೆ. ನಾಲ್ಕು ವರ್ಷಗಳ ಕಾಲ ಜೈಲುವಾಸ ಅನುಭವಿಸಿದ ಅವರು ಬಿಡುಗಡೆಯಾಗುವ ಬಗ್ಗೆ ಅಧಿಕೃತ ಮಾಹಿತಿ ಬಂದಿರುವುದಾಗಿ ಅವರ ವಕೀಲರು ತಿಳಿಸಿದ್ದಾರೆ.
ಇದನ್ನೂ ಓದಿ:ನಾನ್​ವೆಜ್​ ಪ್ರಿಯರಿಗೆ ಶುಭ ಸುದ್ದಿ! 1 ಗಂಟೆಯಲ್ಲಿ ಇಷ್ಟು ತಿಂದರೆ ನಿಮಗೆ ಸಿಗುತ್ತೆ ಬುಲೆಟ್​ ಬೈಕ್​!
ಶಶಿಕಲಾ ಅವರು ಜನವರಿ 27ರಂದು ಬೆಳಗ್ಗೆ ಬಿಡುಗಡೆಯಾಗಲಿದ್ದಾರೆ ಎಂದು ಪರಪ್ಪನ ಅಗ್ರಹಾರ ಜೈಲಿನ ಮುಖ್ಯ ಅಧೀಕ್ಷಕರು ಮೇಲ್​ ಮಾಡಿರುವುದಾಗಿ ಶಶಿಕಲಾ ಪರ ವಕೀಲ ಎನ್ ರಾಜಾ ಸೆಂಥೂರ್ ಪಾಂಡಿಯನ್ ತಿಳಿಸಿದ್ದಾರೆ. ಅವರ ಬಿಡುಗಡೆ ಬಗ್ಗೆ ಪ್ರಶ್ನಿಸಿ ಪಾಂಡಿಯನ್​ ಅವರು ಮಾಡಿದ್ದ ಮೇಲ್​ಗೆ ಉತ್ತರವಾಗಿ ಬಿಡುಗಡೆ ದಿನವನ್ನು ತಿಳಿಸಿರುವುದಾಗಿ ಹೇಳಲಾಗಿದೆ.
ದಿವಂಗತ ಜೆ.ಜಯಲಲಿತಾ ಸೇರಿದಂತೆ ನಾಲ್ವರಿಗೆ ಸಂಪತ್ತು ಸಂಗ್ರಹಿಸಿದ್ದಕ್ಕಾಗಿ ನಾಲ್ಕು ವರ್ಷಗಳ ಜೈಲು ಶಿಕ್ಷೆಯನ್ನು ನ್ಯಾಯಾಲಯವು 2014ರಲ್ಲಿ ವಿಧಿಸಿತ್ತು. ಈ ವಿಚಾರವಾಗಿ ಆರೋಪಿಗಳು ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ್ದರು. 2017ರಲ್ಲಿ ಸುಪ್ರೀಂ ಕೋರ್ಟ್​ ಅದೇ ತೀರ್ಪನ್ನು ಎತ್ತಿ ಹಿಡಿದ ಹಿನ್ನೆಲೆಯಲ್ಲಿ 2017ರ ಫೆಬ್ರವರಿ 15ರಂದು ಶಶಿಕಲಾ ಕಾರಾಗೃಹ ಅಧಿಕಾರಿಗಳ ಮುಂದೆ ಶರಣಾಗಿದ್ದರು.
ಇದನ್ನೂ ಓದಿ:‘ಚಿಕನ್​, ಮೊಟ್ಟೆಯನ್ನ 3 ಸೆಕೆಂಡ್​ ಬೇಯಿಸಿದ್ರೂ ಸಾಕು, ಹಕ್ಕಿ ಜ್ವರ ಹತ್ತಿರಾನು ಸುಳಿಯಲ್ಲ’
ಶಶಿಕಲಾ ಅವರ ಕಡೆಯಿಂದ ಬರಬೇಕಾದ ದಂಡ ಬಂದರೆ ಜನವರಿ 27ರಂದು ಅವರನ್ನು ಬಿಡುಗಡೆ ಮಾಡಲಾಗುವುದು ಎಂದು ನ್ಯಾಯಾಲಯ ಸೆಪ್ಟೆಂಬರ್​ನಲ್ಲಿ ತಿಳಿಸಿತ್ತು. ಅದರಂತೆ ಆಕೆಯ ಕುಟುಂಬ 10 ಕೋಟಿ 10 ಸಾವಿರ ರೂಪಾಯಿ ದಂಡವನ್ನು ಶಶಿಕಲಾ ಪರವಾಗಿ ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಶಶಿಕಲಾ ಜೈಲಿನಿಂದ ಬಿಡುಗಡೆಯಾದ ಮೇಲೆ ಆಕೆ ತಂಗಲು ಚೆನ್ನೈನಲ್ಲಿ ಎರಡು ಮೂರು ಬಂಗಲೆಯನ್ನು ಆಕೆಯ ಕುಟುಂಬ ಹುಡುಕಿಟ್ಟಿದೆ ಎನ್ನಲಾಗಿದೆ. (ಏಜೆನ್ಸೀಸ್​)
ಪಂಚರ್​ ಟೈಯರ್​ನಲ್ಲೇ ಪತ್ನಿ ಮನೆಗೆ ಪ್ರಯಾಣ ಬೆಳೆಸಿದ ಯುವಕನಿಗೆ ಕಾದಿತ್ತು ಶಾಕ್​! ಅಪಘಾತವಂತೂ ಅಲ್ಲ

ಮದ್ವೆಗೆ ಬರ್ದಿದ್ರೂ ಉಡುಗೊರೆ ಹಾಕಿ! ಲಗ್ನಪತ್ರಿಕೆಯಲ್ಲೇ ಗೂಗಲ್​ ಪೇ, ಫೋನ್​ ಪೇ ಕ್ಯೂಆರ್​ ಕೋಡ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + twelve =
Remember me
