ಮುಂಬೈ:ಒಂದು ಅಪರೂಪದ ಪ್ರಕರಣದಲ್ಲಿ, ಪ್ರೇಮ ನಿವೇದನೆಯಾದ ನಂತರ ಹುಡುಗ- ಹುಡುಗಿ ದೈಹಿಕ ಸಂಪರ್ಕ ಬೆಳೆಸಿದರು. ಇದೀಗ ಹುಡುಗಿ ಹುಡುಗನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾಳೆ. ಅದಕ್ಕೆ ಕಾರಣವೂ ಇದೆ… ಸಂಪೂರ್ಣ ಓದಿ..ಸಂಬಂಧ ಹುಳಿಯಾವವರೆಗೂ ‘ಅಪರಾಧ’ದ ಬಗ್ಗೆ ದೂರು ನೀಡಲಿಲ್ಲ ಎಂಬುದನ್ನು ಗಮನಿಸಿದ ಬಾಂಬೆ ಹೈಕೋರ್ಟ್ ಗುರುವಾರ ಯುವಕನೊಬ್ಬನಿಗೆ ಜಾಮೀನು ನೀಡಿದೆ. ಆತ ತನ್ನ ಗೆಳತಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ.
ಇದನ್ನೂ ಓದಿ:ಕರೊನಾ ನಿಯಂತ್ರಿಸುವಲ್ಲಿ ಮತ್ತೊಂದು ದಾಖಲೆ ಬರೆದ ದೆಹಲಿ; ದೇಶದಲ್ಲಿಯೇ ನಂಬರ್​ ಒನ್​…!
18 ವರ್ಷದ ಆರೋಪಿಗೆ ಜಾಮೀನು ನೀಡಿದ ನ್ಯಾಯಮೂರ್ತಿ ಭಾರತಿ ಡಂಗ್ರೆ, ಸಂಬಂಧವು ಕೆಡುವುದಕ್ಕೂ ಮೊದಲು ಮತ್ತು ಇಬ್ಬರೂ ದೂರವಾಗುವ ಮೊದಲು ಹುಡುಗಿ ದೈಹಿಕ ಸಂಬಂಧದ ಬಗ್ಗೆ ಎಂದಿಗೂ ಆತನ ವಿರುದ್ಧ ಎಂದೂ ದೂರು ನೀಡಲಿಲ್ಲ ಎಂದು ಎಫ್ಐಆರ್​ ತಿಳಿಸುತ್ತದೆ ಎಂಬುದನ್ನು ಗಮನಿಸಿದರು.ಹುಡುಗ – ಹುಡುಗಿ ಪಿಯುಸಿ ಓದುವಾಗ ಪರಸ್ಪರ ಭೇಟಿಯಾಗಿದ್ದರು. ನಿಧಾನವಾಗಿ ಪ್ರೇಮ ಸಂಬಂಧವಾಗಿ ಅರಳಿ ಮತ್ತು ನಂತರ ಇಬ್ಬರೂ ಪರಸ್ಪರರ ಮನೆಗೆ ಭೇಟಿ ನೀಡಲು ಪ್ರಾರಂಭಿಸಿದರು.
ಇದನ್ನೂ ಓದಿ :ಕರೊನಾ ಸೋಂಕಿನಿಂದ ಹೋಂ ಐಸೋಲೇಶನ್​​ನಲ್ಲಿದ್ದ ಕೇಂದ್ರ ಸಚಿವರು ಆಸ್ಪತ್ರೆಗೆ ದಾಖಲು
ಆದರೆ ತನ್ನ ಮನೆಯಲ್ಲಿ ಯಾರೂ ಇಲ್ಲದ ಸಮಯದ ಲಾಭ ಪಡೆದುಕೊಂಡ ಆರೋಪಿ ಒಪ್ಪಿಗೆಯಿಲ್ಲದೆ ಅವಳೊಂದಿಗೆ ಸಂಬಂಧ ಬೆಳೆಸಿದ ಎಂದು ಆಕೆ ಆರೋಪಿಸಿದ್ದಾಳೆ. ಆದರೆ ಅವಳು ಈ ಹಿಂದೆ ಯಾವುದೇ ದೂರು ದಾಖಲಿಸಲಿಲ್ಲ.ಇವರಿಬ್ಬರ ನಡುವಿನ ಸಂಬಂಧ ಹದಗೆಟ್ಟ ನಂತರವೇ ಈ ಹುಡುಗಿ ದೂರು ನೀಡಿದ್ದಾಳೆ. ಆರೋಪಿ ಆ ಹುಡುಗಿಯೊಂದಿಗೆ ಇರುವ ಚಿತ್ರಗಳನ್ನು ಆಕೆಯ ತಾಯಿಗೆ ಕಳುಹಿಸಿರುವುದೇ ಆಕೆ ದೂರು ದಾಖಲಿಸಲು ಪ್ರಮುಖ ಕಾರಣವಾಗಿದೆ. ಚಿತ್ರಗಳನ್ನು ಇತರ ಕುಟುಂಬ ಸದಸ್ಯರಿಗೆ ಕಳುಹಿಸುವುದಾಗಿಯೂ ಬೆದರಿಕೆ ಹಾಕಿದ್ದನೆನ್ನಲಾಗಿದೆ.  ಈ ವರ್ಷದ ಜೂನ್‌ನಲ್ಲಿ ಅವರು ಬೇರೆಯಾದರು.
ಇದನ್ನೂ ಓದಿ;ಮಹಿಳೆಯರ ಮದುವೆ ವಯಸ್ಸು ಹದಿನೆಂಟಲ್ಲ..! ಕನಿಷ್ಠ ಪ್ರಾಯ ಹೆಚ್ಚಳದ ಸುಳಿವು ನೀಡಿದ ಪ್ರಧಾನಿ ಮೋದಿ
ಜುಲೈ7 ರಂದು ಯುವಕನನ್ನು ಮುಂಬೈ ಪೊಲೀಸರ ಸೈಬರ್ ಸೆಲ್ ದೂರು ದಾಖಲಿಸಿದೆ.“ಇದು ಹದಿಹರೆಯದವರು ಜಗತ್ತನ್ನು ಆತುರದಿಂದ ನೋಡಲು ಉತ್ಸುಕನಾಗುವ ಒಂದು ವಿಶಿಷ್ಟ ಪ್ರಕರಣವಾಗಿದೆ. ಪ್ರಬುದ್ಧವಾಗಿ ಪರಸ್ಪರ ಅರ್ಥಮಾಡಿಕೊಳ್ಳದೆ ಆತುರತೆಗೆ ಬಲಿಯಾಗುವುದಕ್ಕೆ ಇದು ಉದಾಹರಣೆಯಾಗಿದೆ. ಸಂಬಂಧವು ದೃಢವಾಗಿ ರೂಪುಗೊಳ್ಳುವ ಮೊದಲು, ಪರಸ್ಪರ ದೈಹಿಕ ಸಂಪರ್ಕ ಹೊಂದಿದರು. ಆತನ ವಿರುದ್ಧ ಅತ್ಯಾಚಾರ ಹಾಗೂ ಪೋಕ್ಸೊ ಕಾಯ್ದೆಯಡಿ ದೂರು ದಾಖಲಿಸಲಾಗಿದೆ.
ಹಿಮದಡಿ ಹುದುಗಿಹೋಗಿದ್ದ ಯೋಧನ ಶವ 8 ತಿಂಗಳ ನಂತರ ಪತ್ತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 4 =
Remember me
